ಮತ ಎಣಿಕೆಯ ವೇಳೆ ಅಧಿಕಾರಿಗಳು ಮೊಬೈಲ್ ಬಳಕೆ ಮಾಡುವಂತಿಲ್ಲ

ಮತ ಎಣಿಕೆಯ ವೇಳೆ ಅಧಿಕಾರಿಗಳು ಮೊಬೈಲ್ ಬಳಕೆ ಮಾಡುವಂತಿಲ್ಲ
ಮತ ಎಣಿಕೆಯ ವೇಳೆ ಅಧಿಕಾರಿಗಳು ಮೊಬೈಲ್ ಬಳಕೆ ಮಾಡುವಂತಿಲ್ಲ

ಬೆಂಗಳೂರು : ಗುರುವಾರ ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುವ ಸ್ಥಳಗಳಲ್ಲಿ ಚುನಾವಣಾ ಆಯೋಗ ತೀವ್ರ ಕಟ್ಟೇಚ್ಚರ ವಹಿಸಿದೆ. ಮತ ಎಣಿಕೆ ವೇಳೆ ಯಾವ ಅಧಿಕಾರಿಗಳು ಮೊಬೈಲ್‍ ಬಳಕೆ ಮಾಡುವಂತಿಲ್ಲ ಎಂದು ಆಯೋಗ ಸೂಚಿಸಿದೆ.

ಇವಿಎಂ ಮತ ಯಂತ್ರದ ಬಗ್ಗೆ ಸಾಕಷ್ಟು ಆರೋಪದ ಹಿನ್ನೆಲೆಯಲ್ಲಿ ವಿವಿಪ್ಯಾಟ್‍ ಜೊತೆ ಇವಿಎಂಗಳನ್ನು ತಾಳೆ ಹಾಕಿ ನೋಡಬೇಕು. ಎಂದಿನಂತೆ ಈ ಬಾರಿಯು ಎರಡು ಸುತ್ತಿನ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಬೆಂಗಳೂರು ಲೋಕಸಭಾ ಕ್ಷೇತ್ರಗಳ ಮತ ಎಣಿಕೆಯು ಮೂರು ಕಡೆಯಲ್ಲಿ ನಡೆಯಲಿದ್ದು, ಬೆಂಗಳೂರು ಉತ್ತರ ‘ಸೇಂಟ್ ಜೋಸೆಫ್’ ಪಿಯು ಕಾಲೇಜು, ಬೆಂಗಳೂರು ದಕ್ಷಿಣ ‘ಎಸ್ ಎಸ್ ಎಂ ಆರ್ ವಿ’ ಪಿಯು ಕಾಲೇಜು ಹಾಗೂ ಬೆಂಗಳೂರು ಕೇಂದ್ರ ಮೌಂಟ್ ಕಾರ್ಮಲ್ ಪಿಯು ಕಾಲೇಜ್‍ಗಳಲ್ಲಿ ಮತ ಎಣಿಕೆ ನಡೆಯಲ್ಲಿದೆ.