ವಿಶ್ವದ 30 ನಗರಗಳ ಪೈಕಿ ಭಾರತದ 21 ನಗರಗಳು ಮಾಲಿನ್ಯಭರಿತ

ವಿಶ್ವದ 30 ನಗರಗಳ ಪೈಕಿ ಭಾರತದ 21 ನಗರಗಳು ಮಾಲಿನ್ಯಭರಿತ

ದೆಹಲಿ : ಭಾರತವು ಈ ವರ್ಷವು ಸಹ ಮಾಲಿನ್ಯಯುಕ್ತ ನಗರಗಳನ್ನು ಹೊಂದಿದ ದೇಶ ಎಂಬ ಅಪಖ್ಯಾತಿಗೆ ಗುರಿಯಾಗಿದೆ. ವಿಶ್ವದ ಅತಿ ಹೆಚ್ಚು ಮಾಲಿನ್ಯಭರಿತ ನಗರಗಳ ಪೈಕಿ ಮತ್ತೆ ಭಾರತವು ಮೊದಲ ಸ್ಥಾನ ಪಡೆದುಕೊಂಡಿದೆ. ಚೀನಾವು ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ಬಾರಿ ಸ್ವಲ್ಪ ಸುಧಾರಣೆ ಕಂಡುಕೊಂಡಿದೆ ಎಂದು ವರದಿಯಲ್ಲಿ ಹೇಳಿದೆ.

2019 ರ ವರ್ಲ್ಡ್ ಏರ್ ಕ್ವಾಲಿಟಿ ಇಂಡೆಕ್ಸ್ ಪ್ರಕಾರ ವಿಶ್ವದಲ್ಲಿ 30 ನಗರಗಳು ಮಾಲಿನ್ಯಭರಿತವಾಗಿವೆ ಎಂದು ಘೋಷಣೆ ಮಾಡಿದೆ. ಅದರಲ್ಲಿ ದುರದೃಷ್ಟ ೆಂಬಂತೆ ಭಾರತದಲ್ಲೇ 21 ನಗರಗಳು ಮಾಲಿನ್ಯಯುಕ್ತ ನಗರಗಳು ಎಂಬ ಅಪಖ್ಯಾತಿ ಪಾತ್ರವಾಗಿದೆ.

ದೆಹಲಿಯಲ್ಲಿ ಏರ್ ಕ್ವಾಲಿಟಿ ಮಟ್ಟ 800 ಕ್ಕಿಂತ ಹೆಚ್ಚೇ ಇದೆ. ಇದು ಸಾಮಾನ್ಯ ವಾಯುಮಾಲಿನ್ಯಕ್ಕಿಂತಲೂ ಮೂರು ಪಟ್ಟು ಅಪಾಯಕಾರಿ. ಇದರಲ್ಲಿ ಮೈಕ್ರೋಸ್ಕೋಪಿಕ್ ಪಾರ್ಟಿಕಲ್ಸ್ ಡಯಾಮೀಟರ್ ನಲ್ಲಿರುವ 2.5 ಮೈಕ್ರೋಮೀಡರ್ ಗಿಂತಲೂ ಸಣ್ಣದಾಗಿರುತ್ತದೆ. ಇದರಿಂದ ಅಪಾಯದ ಮಟ್ಟ ಹೆಚ್ಚು ಇದು ಮನುಷ್ಯ ಶ್ವಾಸಕೋಶಕ್ಕೆ  ನೇರವಾಗಿ ಇಳಿಯುವುದರಿಂದ ಅನೇಕ ರೋಗಗಳು ಬರಲು ಕಾರಣವಾಗುತ್ತದೆ ಎಂದು ವರದಿಯಲ್ಲಿ ತಿಳಿಸಿದೆ.