1947ರ ಪ್ರಥಮ ಸ್ವಾತಂತ್ರ್ಯೋತ್ಸವದ ನೆಹರು ಭಾಷಣ ಆಲಿಸಲು ಗಾಂಧೀಜಿ ಮಾತ್ರವಲ್ಲ; ಇತರ ನಾಯಕರೂ ಉಪಸ್ಥಿತರಿರಲಿಲ್ಲ  

1947ರ ಪ್ರಥಮ ಸ್ವಾತಂತ್ರ್ಯೋತ್ಸವದ ನೆಹರು ಭಾಷಣ ಆಲಿಸಲು ಗಾಂಧೀಜಿ ಮಾತ್ರವಲ್ಲ; ಇತರ ನಾಯಕರೂ ಉಪಸ್ಥಿತರಿರಲಿಲ್ಲ  

ದೆಹಲಿ: ದೇಶಕ್ಕೆ ದೊರೆತ ಸ್ವಾತಂತ್ರ್ಯೋತ್ಸವದ ಮೊದಲ ಸಂಭ್ರಮ-(1947ರ ಆ.. 15) ಗಳಿಗೆಯಲ್ಲಿ ಮಹಾತ್ಮ ಗಾಂಧಿ ಮಾತ್ರವಲ್ಲ; ಇತರೆ ನಾಯಕರೂ ಅನುಪಸ್ಥಿತಿಯಲ್ಲಿದ್ದರು. ಅವರು ವಿವಿಧೆಡೆ ನಡೆಯುತ್ತಿರುವ ಹಿಂಸೆಯ ಪ್ರಕರಣಗಳಿಗೆ ಸಾಕ್ಷಿಯಾಗಿದ್ದರು. ಸ್ವಾತಂತ್ರ್ಯದ ಕನಸು ಕಂಡ ಬಹುತೇಕ ನಾಯಕರು ಈ ಸಂಭ್ರಮಕ್ಕೂ ಮುನ್ನವೇ ಕಣ್ಣುಮುಚ್ಚಿದ್ದರು.  ಹೀಗಾಗಿ, ಅವರ ಕನಸುಗಳು ಈಡೇರಲಿಲ್ಲ.

1947ರ ಆ. 14ರ ಮಧ್ಯೆ ರಾತ್ರಿಯಲ್ಲಿ ದೇಶದ ಸ್ವಾತಂತ್ರ್ಯ ಕುರಿತು ಭಾಷಣ ಮಾಡಿದ ವ್ಯಕ್ತಿಯ ಹೆಸರನ್ನು ಸ್ಮರಿಸಿದರೆ ಮೊದಲು ನೆನಪಾಗುವುದು ಜವಾಹರ ಲಾಲ್ ನೆಹರು. ದೆಹಲಿಯಲ್ಲಿ ನಡೆದ ಈ ಸಂಭ್ರಮವನ್ನು ಬಹುತೇಕ ನಾಯಕರು ತಪ್ಪಿಸಿಕೊಂಡಿದ್ದರು.

ಕೋಲ್ಕತ್ತಾದಲ್ಲಿ 1944ರಲ್ಲಿಯೇ ರಾಷ್ಟ್ರಪಿತಾ ಎಂದೇ ಖ್ಯಾತಿಯ ಮಹಾತ್ಮಗಾಂಧಿ ಅವರನ್ನು ಹೊರತುಪಡಿಸಿ ಸುಭಾಶ್ ಚಂದ್ರ ಭೋಸ್  ಅವರು ಬಾನುಲಿಯಲ್ಲಿ ಭಾರತದ ಸ್ವಾತಂತ್ರ್ಯ ಕುರಿತು ಮಾತನಾಡಿದ್ದರು.

ಲಾರ್ಡ್ ಮೌಂಟ್ ಬ್ಯಾಟನ್ ಹೆಸರಿಸಿದ ಹಾಗೆ ‘ಗಡಿ ಪಡೆಯ ಒಬ್ಬನೇ ನಾಯಕ’ ಎಂಬ ಖ್ಯಾತಿಯ ಮಹಾತ್ಮ ಗಾಂಧಿ ಅವರು ಕೊಲ್ಕತ್ತಾದಲ್ಲಿ ನಡೆದ ಕೋಮುವಾದಿ ಹಿಂಸೆ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆಚಾರ್ಯ ಕೃಪಲಾನಿ ಅವರೊಂದಿಗಿದ್ದರು.

ಭಾರತದ ಉತ್ತರ-ಪಶ್ಚಿಮ ಭಾಗದ ಪ್ರಾಂತ್ಯವು ಪಾಕಿಸ್ತಾನವಾಗಬೇಕು ಎಂಬ ಹಂಬಲದಲ್ಲಿದ್ದ ಅಬ್ದುಲ್ ಗಫೂರ್ ಖಾನ್ ಸಂಭ್ರಮದಿಂದ ದೂರವೇ ಉಳಿದರು. ಆದರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಾಕಿಸ್ತಾನವನ್ನು ಬೇರೆ ಮಾಡಲು ಒಪ್ಪಿಗೆ ಸೂಚಿಸಿದಾಗ  ‘ನೀವೆಲ್ಲ ಸೇರಿ ನಮಗೆ ತೋಳಗಳ ಹತ್ತಿರ ಎಸೆದಿದ್ದೀರಿ’ ಎಂದು (ಅಬ್ದುಲ್ ಗಫೂರ್ ಖಾನ್ ತಮ್ಮ ಆತ್ಮ ಚರಿತ್ರೆಯಲ್ಲಿ) ಖಾನ್ ದುಃಖಿಸಿದ್ದರು.

ಬ್ರಿಟಿಷ್ ಕುಟುಂಬದಿಂದ ಭಾರತಕ್ಕೆ ಬಂದಿದ್ದ ಮೆಡೆಲಿನ್ ಸ್ಲೇಡ್, ಗಾಂಧಿ ಅವರ ಹತ್ತಿರದ ಒಡನಾಡಿಯಾಗಿದ್ದರು. ಮುಂದೆ ಇವರ ಹೆಸರು 'ಮೀರಾಬೆನ್' ಎಂದು ಕರೆಯಲಾಯಿತು. ಅವರು ಹೃಷಿಕೇಶ ಬಳಿಯ ಬೆಟ್ಟದಲ್ಲೇ ವಾಸಿಸಿದ್ದರು. ಈ ಸಂಭ್ರಮ ಪೂರ್ಣಗೊಳ್ಳುವವರೆಗೂ ಕೆಳಗೆ ಹೋಗುವುದು ಬೇಡ ಎಂದೇ ನಿರ್ಧರಿಸಿದ್ದರು.

ಕನಸು ಕಾಣಲು ಇವರು ಬದುಕಿರಲಿಲ್ಲ..: ಮೊದಲಿಗರಾಗಿ ಸುಭಾಶ್ಚಂದ್ರ ಭೋಸ್, ಸ್ವಾತಂತ್ರ್ಯದ ಸಂಭ್ರಮ ಕಾಣಲು ಅವರಿರಲಿಲ್ಲ. ಭೋಸ್ ಅವರ ಕೋಲ್ಕತ್ತಾದಲ್ಲಿ ಮಹಾತ್ಮಾಗಾಂಧಿ ಒಬ್ಬರೇ ಇದ್ದರು. ಹೆಂಡತಿ ಕಸ್ತೂರ ಬಾ (62) ಅವರನ್ನು 1944ರಲ್ಲೇ ಪುಣೆಯ ಅಗಾಖಾನ್ ಜೈಲಿನಲ್ಲಿರುವಾಗ ಕಳೆದುಕೊಂಡಿದ್ದರು. ಗಾಂಧೀಜಿ ಅವರ ಕಾರ್ಯದರ್ಶಿ ಮಾಧವ ದೇಸಾಯಿ ಈ ಜೈಲಿನಲ್ಲಿರುವಾಗಲೇ (1942) ತೀರಿಕೊಂಡಿದ್ದರು.

1944ರಲ್ಲಿ, ವೈದ್ಯಕೀಯ ಕಾರಣಗಳಿಗಾಗಿ ಗಾಂಧೀಜಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಇಬ್ಬರು ಸಹಚರರು ಜೈಲಿನಲ್ಲೇ ಮೃತಪಟ್ಟರು. ಬ್ರಿಟಿಷ್ ಆಸ್ಪತ್ರೆಯ ಆ ಜೈಲಿನಲ್ಲೇ ಅಂತ್ಯಸಂಸ್ಕಾರ ಮಾಡಲಾಯಿತು. ಮತ್ತೊಬ್ಬ ಸಹಚರ ಜಮ್ನಾಲಾಲ್ ಬಜಾಜ್ ಮೃತಪಟ್ಟರು. ಮಹಾರಾಷ್ಟ್ರದ ವಾರ್ಧಾಕ್ಕೆ ಗಾಂಧೀಜಿ ಅವರನ್ನು ಕರೆ ತರುವಲ್ಲಿ ಪ್ರಮುಖ ಪಾತ್ವಹಿಸಿದ್ದ, ರಾಯಬಹಾದ್ದೂರ್ ಬಜಾಜ್ 1942ರಲ್ಲೇ ತೀರಿಕೊಂಡರು. ಈ ವಾರ್ಧಾ ಸ್ಥಳ ಬಳಿಯೇ ಗಾಂಧೀಜಿ ಅವರು ತಮ್ಮ ಆಶ್ರಮ ಸ‍್ಥಾಪಿಸಿದ್ದರು.

ಲಾಲಾ ಲಜಪತ್ ರಾಯ, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್   ಆರಂಭಿಸಿದ್ದ ಸ್ವಾತಂತ್ರ್ಯ ಚಳವಳಿಗೆ ಗಾಂಧೀಜಿ ಸೇರಿದರು. ಆದರೆ, ಈ ಮೂವರು 1930ರಲ್ಲೇ ಮೃತಪಟ್ಟರು. ಗೋಪಾಲಕೃಷ್ಣ ಗೋಖಲೆ, ಸಿ.ಆರ್.ದಾಸ್, ಮೋತಿಲಾಲ್ ನೆಹರು, ವಿಠಲಬಾಯಿ ಪಟೇಲ್ ಅವರು ಪಾಲ್ ಅವರಂತೆ ಚಳವಳಿಯಿಂದ ದೂರವೇ ಉಳಿದರು. ಅವರೆಲ್ಲರೂ ಸಾಯುವ ಮುನ್ನವೇ ಅವರನ್ನು ಮರೆತುಬಿಡಲಾಯಿತು.

ಜರ್ಮನಿಯ ಸ್ಟುಟ್ ಗಾರ್ಟ್ ನಲ್ಲಿ ಭಾರತದ ಧ್ವಜ ಹಾರಿಸಿದ ಕ್ರಾಂತಿಕಾರಿ ಮೆಡಮ್ ಬಿಕೈಜಿ ಕಾಮಾ ಅವರು ದೆಹಲಿಯ ಕೆಂಪುಕೋಟೆಯ ಮೇಲೆ ತಿರಂಗಾ ಧ್ವಜ ಹಾರುವುದನ್ನು ನೋಡುವ ಮುನ್ನವೇ 1936ರಲ್ಲಿ ತೀರಿಕೊಂಡರು. ಬನಾರಸ ಹಿಂದೂ ವಿಶ್ವವಿದ್ಯಾಲಯದ ಸ್ಥಾಪಕ ಪಂಡಿತ ಮದನ ಮೋಹನ ಮಾಳವಿಕ ಅವರು ಭಾರತದ ಸ್ವಾತಂತ್ರ್ಯ ಕುರಿತು ಮಾತುಕತೆ ನಡೆಯುವ ಸಂದರ್ಭದಲ್ಲಿ (1946ರಲ್ಲಿ)  ತೀರಿಕೊಂಡರು.

ಮುಸ್ಲಿಂ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಎಂ.ಎ. ಅನ್ಸಾರಿ, ಹಾಗೂ ಅಬ್ಬಾಸ್ ತೈಬ್ಜಿ, ಬರೋಡಾದಲ್ಲಿ ನ್ಯಾಯಾಧೀಶರಾಗಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದ್ದರು. 1930ರಲ್ಲಿ,ಮೃತಪಟ್ಟರು.

ದಕ್ಷಿಣ ಆಫ್ರಿಕಾದಲ್ಲಿ ಹಳೆಯ ಸಹಚರರಾಗಿದ್ದ ಸಿ.ಇ. ಅಂಡ್ರಿವ್ಸ್,  ಇವರು ತಮ್ಮನ್ನು ‘ಮೋಹನ’ ಎಂದು ಕರೆದುಕೊಳ್ಳುತ್ತಿದ್ದರು. ನಂತರ ಇವರನ್ನು ‘ದೀನಬಂಧು’ ಎಂದು ಹೆಸರಿಸಲಾಯಿತು.  ಅವರು 1940ರಲ್ಲಿ ತೀರಿಕೊಂಡರು.  

ಸ್ವಾತಂತ್ರ್ಯದ ಗೀತೆಗಳು: 20ನೇ ಶತಮಾನದ ಇಬ್ಬರು ದೊಡ್ಡ ಕವಿಗಳು ಸ್ವಾತಂತ್ರ್ಯ ಹಾಗೂ ದೇಶಭಕ್ತಿ  ಗೀತಾಕಾರರು ಸ್ವಾತಂತ್ರ್ಯ ಪೂರ್ವವೇ ಮೃತಪಟ್ಟರು. ಮಹಮ್ಮದ್ ಇಕ್ಬಾಲ್, ‘ಸಾರೆ ಜಹಾಂಸೆ ಅಚ್ಛಾ’ ಬರೆದಿದ್ದು, 1938ರಲ್ಲಿ ತೀರಿಕೊಂಡರು. ರವೀಂದ್ರನಾಥ ಟಾಗೋರರು ಗಾಂಧೀಜಿ ಸಹಚರರಾಗಿದ್ದರು. ರಾಷ್ಟ್ರೀಯವಾದ ಹಾಗೂ ಗಾಂಧೀಜಿಯ ನಡೆಯ ಬಗ್ಗೆ ಕೆಲ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು.  ಭಾರತವು ಅವರ ‘ಜನ ಗಣ ಮನ’ ಗೀತೆಯನ್ನು ರಾಷ್ಟ್ರಗೀತೆಯಾಗಿ ಆಯ್ದುಕೊಳ್ಳುವ ಮುನ್ನವೇ 1941ರಲ್ಲಿ ತೀರಿಕೊಂಡರು.

ಪ್ರಸಿದ್ಧ ಗುಜರಾತಿ ಕವಿ ಘೇವರ್ ಚಂದ್ ಮೆಹಾನಿ ಅವರನ್ನು ಟಾಗೋರ್ ಹಾಗೂ ಗಾಂಧೀಜಿ ಇಬ್ಬರು ಇವರನ್ನು ಬಹಳವಾಗಿ ಮೆಚ್ಚಿಕೊಂಡಿದ್ದರು. 1947ರ ಮಾರ್ಚ್ ನಲ್ಲೇ ತೀರಿಕೊಂಡರು.1931ರಲ್ಲಿ, ಇವರು ಎರಡನೇ ದುಂಡು ಮೇಜಿನ ಪರಿಷತ್ ನೇತೃತ್ವವಹಿಸಿದ್ದವೇಳೆ ‘ ಓ ಬಾಪು, ದಯಮಾಡಿ, ಬಂದೂಕಿನ ವಿಷದ ಕೊನೆ ಗುಂಡನ್ನು ತಿನ್ನು’ ಎಂದು ತಮ್ಮ ಗುಜರಾತಿ ಕವನದಲ್ಲಿ ಬರೆದಿದ್ದರು.

1947ರಲ್ಲಿ ಈ ಎಲ್ಲ ಮಹನೀಯರು ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಅವರೆಲ್ಲರೂ ದೇಶದಲ್ಲಿ ನಡೆದ ಹಿಂಸೆಗೆ ಸಾಕ್ಷಿಯಾಗಿದ್ದರು.

( ಸೌಜನ್ಯ: 'ದಿ ಪ್ರಿಂಟ್’)