ಭಯದಿಂದ ಚರ್ಚೆ ನಡೆಸಿದರೆ ಪ್ರಜಾಸತ್ತೆ ಪಡೆಯುವುದು ಸಾಧ್ಯವಿಲ್ಲ : ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್

ಭಯದಿಂದ ಚರ್ಚೆ ನಡೆಸಿದರೆ ಪ್ರಜಾಸತ್ತೆ ಪಡೆಯುವುದು ಸಾಧ್ಯವಿಲ್ಲ : ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್

ಪ್ರಜಾಸತ್ತೆ ಎಂದರೆ ಚರ್ಚೆಯ ಮೂಲಕ ನಡೆಯುವ ಸರ್ಕಾರ. ನೀವು ಭಯದಿಂದ ಚರ್ಚೆ ನಡೆಸುವಿರಾದರೆ ಪ್ರಜಾಸತ್ತೆ ಪಡೆಯುವುದು ಸಾಧ್ಯವಿಲ್ಲ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ನ್ಯೂಯಾರ್ಕ್ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಈಗ ಜನರು ಭಯಭೀತರಾಗಿದ್ದಾರೆ. ಇಂಥ ಪರಿಸ್ಥಿತಿಯನ್ನು ನಾನು ಹಿಂದೆಂದೂ ಕಂಡಿರಲಿಲ್ಲ. ಯಾರಾದರೂ ದೂರವಾಣಿ ಕರೆ ಮಾಡಿ ನನ್ನೊಂದಿಗೆ ಸರ್ಕಾರದ ಬಗ್ಗೆ ಕಟುವಾಗಿ ಟೀಕಿಸುತ್ತಿದ್ದರೆ ನಮ್ಮ ಸಂಭಾಷಣೆಯನ್ನು ಅವರು ಕೇಳುತ್ತಿರುತ್ತಾರೆ, ನಿಮ್ಮನ್ನು ಭೇಟಿಯಾದಾಗ ಈ ವಿಷಯ ಮಾತನಾಡುತ್ತೇನೆ ಎನ್ನುತ್ತಾರೆ. 

ಅದು ಪ್ರಜಾಸತ್ತೆ ನಡೆಯುವ ಮಾರ್ಗವಲ್ಲ.ಇದು ಬಹುಸಂಖ್ಯಾತರು ಬಯಸುವುದೇನನ್ನು ಎಂಬುದನ್ನು ಅರಿತುಕೊಳ್ಳುವ ಮಾರ್ಗವೂ  ಅಲ್ಲ. ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಓರ್ವ ಮುಸ್ಲಿಂ ರಾಷ್ಟ್ರಪತಿ, ಓರ್ವ ಸಿಖ್ ಪ್ರಧಾನಿ ಮತ್ತು ಆಡಳಿತ ಪಕ್ಷದ ನಾಯಕತ್ವವನ್ನು ಕ್ರೈಸ್ತರೊಬ್ಬರು ವಹಿಸಿಕೊಂಡಿದ್ದ 2007 ರ ಸಂದರ್ಭಕ್ಕೆ ಹೋಲಿಸಿದರೆ 2019 ರಲ್ಲಿ ಅವರೆಲ್ಲರೂ ಹಿಂದೂಗಳಾಗಿದ್ದಾರೆ. 2007 ರಲ್ಲೂ ಬಹುತೇಕ ಸಂಸದರು ಹಿಂದೂಗಳಾಗಿದ್ದರೂ ಅವರ ಅಭಿಪ್ರಾಯಗಳನ್ನು ಪ್ರತಿಯೊಬ್ಬರ ಮೇಲೂ ಹೇರುವ ಪ್ರಯತ್ನ ನಡೆಸಿರಲಿಲ್ಲ. ಆದರೆ ಇವತ್ತಿನ ಭಾರತದಲ್ಲಿ ಗೋಮಾಂಸ ತಿನ್ನುವ ಓರ್ವ ಮುಸ್ಲಿಂ ವ್ಯಕ್ತಿಗೆ ಯಾರೊಬ್ಬರೂ ಶಿಕ್ಷೆ ನೀಡುವಂಥ ಪರಿಸ್ಥಿತಿ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಸಾವಿರ ವರ್ಷಗಳ ಕಾಲ ಭಾರತ ಬೌದ್ಧ ದೇಶವಾಗಿತ್ತು, ಅದು ಭಾರತೀಯ ಪರಂಪರೆಯ ಒಂದು ಭಾಗವಾಗಿತ್ತು. ಐದನೇ ಶತಮಾನದಲ್ಲಿ ಆರಂಭವಾದ ನಳಂದ ವಿಶ್ವವಿದ್ಯಾಲಯವನ್ನು ಪೂರ್ವ ಏಷ್ಯಾ ದೇಶಗಳ ನೆರವಿನಿಂದ  ಪುನರುಜ್ಜೀವನಗೊಳಿಸುವ ಪ್ರಯತ್ನ ನಡೆದಾಗ ‘ಹಿಂದೂ’ ಸರ್ಕಾರಕ್ಕೆ ಅದನ್ನು ಬೌದ್ಧ ವಿಶ್ವವಿದ್ಯಾಲಯವಾಗಿ ಉತ್ತೇಜಿಸುವ ಇಚ್ಚೆ ಇರಲಿಲ್ಲ. ಇದೊಂದು ಹಿಂದೂ ಸಂಸ್ಥೆ  ಎಂದು ಬಿಂನಿಸುವ ಪ್ರಯತ್ನ ಮುಂದುವರಿಸಿತೆಂದು ಅವರು ಆರೋಪಿಸಿದರು. 

ನರೇಂದ್ರ ಮೋದಿ ಅತ್ಯಂತ ಶಕ್ತಿಶಾಲಿ ಮತ್ತು ಓರ್ವ ಯಶಸ್ವೀ ರಾಜಕಾರಣಿ. ಅವರು ಮತ್ತು ಆಡಳಿತ ಪಕ್ಷಕ್ಕೆ ಭಾರೀ ಮೊತ್ತದ ಧನ ಬೆಂಬಲವಿದೆ. ಆದರೆ ಮೋದಿ ಮತ್ತು ಬಿಜೆಪಿಗೆ ಭಾರತದ ಬಹುಸಂಖ್ಯಾತರ ಬೆಂಬಲ ಇದೆ ಎಂದು ಅರ್ಥೈಸುವುದು ಸರಿಯೇ ಎಂದು ಅವರು ಪ್ರಶ್ನಸಿದ್ದಾರೆ.