ನೆಟ್‍ ವರ್ಕ್ ಸಮಸ್ಯೆ ಬಗೆಹರಿಸದ ಏರ್ ಟೆಲ್ ಹಾಗೂ ವೋಡಫೋನ್ ಅಧಿಕಾರಿಗಳು

ನೆಟ್‍ ವರ್ಕ್ ಸಮಸ್ಯೆ ಬಗೆಹರಿಸದ ಏರ್ ಟೆಲ್ ಹಾಗೂ ವೋಡಫೋನ್ ಅಧಿಕಾರಿಗಳು

ಯಶವಂತ್ ಕುಮಾರ್ ಎಚ್ .ಸಿ

ಹೆಬ್ಯಾ.

ಮೈಸೂರು ಜಿಲ್ಲೆಯ ಸೋಮೇಶ್ವರಪುರದಲ್ಲಿ ಏರ್‍ ಟೆಲ್ ಹಾಗೂ ವೋಡಫೋನ್ ನೆಟ್‍ವರ್ಕ್ ಕಂಬದ ಸಮಸ್ಯೆಯಿಂದಾಗಿ ಸುಮಾರು 7 ತಿಂಗಳಿಂದ ಸಮಸ್ಯೆ ಬಗೆಹರಿಸದೇ ಸುತ್ತ-ಮುತ್ತಲಿನ ಊರುಗಳಾದ ಹೆಬ್ಯಾ, ಕೋಚನಹಳ್ಳಿ, ಬಸವನಹಳ್ಳಿಹುಂಡಿ, ಅಡಕನಹಳ್ಳಿ ಇನ್ನೂ ಹತ್ತು ಹಳ್ಳಿಗಳಲ್ಲಿ ತೀವ್ರವಾದ ನೆಟ್‍ವರ್ಕ್  ಸಮಸ್ಯೆಯಿಂದಾಗಿ ಕರೆ ಮಾಡಲು ಊರಿನಿಂದ ಹೊರಗಡೆ ಹೋಗಬೇಕು.

ಕರೆನ್ಸಿ ಇದ್ದರೂ ಕೆಲಸಕ್ಕೆ ಬಾರದಂತಾಗಿದೆ ಹಲವು ಬಾರಿ ಸಮಸ್ಯೆ ಬಗ್ಗೆ ದೂರು ನೀಡಿದರು ಅದರ ಬಗ್ಗೆ  ಯಾವುದೇ ರೀತಿ ಕ್ರಮವಹಿಸದೇ ಇರುವ ಅಧಿಕಾರಿಗಳು ಆದಷ್ಟೂ ಬೇಗ ಗ್ರಾಹಕರಿಗೆ ಮಾನವೀಯ ದೃಷ್ಟಿಯಿಂದಾದರು ಸಮಸ್ಯೆ ಬಗೆಹರಿಸಿ. ಕರೆನ್ಸಿ ರೂಪದಲ್ಲಿ ತೆರಿಗೆ ವಿಧಿಸುತ್ತಿದ್ದೀರ ಎಂಬ ಭಾವನೆ ಗ್ರಾಹಕರಲ್ಲಿ ಮೂಡಿದೆ. ದೂರು ನೀಡಿದ್ದರು ಸಹ ಸಮಸ್ಯೆಯನ್ನೇ ಬಗೆಹರಿಸದೆ ತಮ್ಮ ಪಾಡಿಗೆ ಇರುವ ಅಧಿಕಾರಿಗಳ ಅಮಾನವೀಯ ಗುಣಗಳು ಇಲ್ಲಿ ವ್ಯಕ್ತವಾಗುತ್ತಿದೆ.

ದೇಶದ ಎಲ್ಲಾ ಮೂಲೆಯಲ್ಲು ನೆಟ್‍ವರ್ಕ್ ಎಂದು ಹೇಳಿಕೊಳ್ಳುವುದಕ್ಕೆ ಮಾತ್ರ ಇವು ನಂಬರ್ ಒನ್ ಆದರೆ ಸಮಸ್ಯೆಯನ್ನು ಬಗೆಹರಿಸುವುದಕ್ಕಲ್ಲಾ. ಅಪಾರವಾದ ಗ್ರಾಹಕರನ್ನ ಹೊಂದಿರುವ ಕಂಪನಿಗಳೇ ಈ ರೀತಿ ಸಮಸ್ಯೆಗಳಿಗೆ ಸ್ಪಂದಿಸದೇ ಹೋಗುತ್ತಿವೆ. ಸಮಸ್ಯೆಯನ್ನು ಬಗೆಹರಿಸಿ ಎಂದೂ ಯಾರನ್ನು ಕೇಳಬೇಕು ಜನರು ಅದನ್ನಾದರು ಹೇಳಿ. ದಯವಿಟ್ಟು ಏರ್‍ ಟೆಲ್ ಹಾಗೂ ವೋಡಫೋನ್ ನೆಟ್‍ವರ್ಕ್  ಸಂಬಂಧ ಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ಆದಷ್ಟೂ ಬೇಗ ಬಗೆಹರಿಸಿಕೊಡುವಂತೆ ಸುತ್ತ-ಮುತ್ತಲಿನ ಊರಿನ ಜನರು ಕೇಳಿಕೊಳ್ಳುತ್ತಿದ್ಧಾರೆ.