ರಾಷ್ಟ್ರೀಯ ವೈದ್ಯಕೀಯ ಆಯೋಗ ನೂತನ  ಮಸೂದೆ ಮಂಡನೆ

ರಾಷ್ಟ್ರೀಯ ವೈದ್ಯಕೀಯ ಆಯೋಗ ನೂತನ  ಮಸೂದೆ ಮಂಡನೆ

ನವದೆಹಲಿ: 63 ವರ್ಷದ ಹಳೆಯ ಭಾರತದ ವೈದ್ಯಕೀಯ ಮಂಡಳಿಯ ( ಎಂಸಿಐ) ಸುಧಾರಣೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್ ಎಂ ಸಿ) ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಯಿತು.

ಆರೋಗ್ಯ ಸಚಿವ ಹರ್ಷವರ್ಧನ್ ಮಸೂದೆಯನ್ನು ಪರಿಚಯಿಸಿದರು. ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆ -1956 ನ್ನು ರದ್ದುಗೊಳಿಸುತ್ತಿದೆ. ಅದರ ಅಡಿಯಲ್ಲಿ ಸ್ಥಾಪಿಸಲಾದ ಕೌನ್ಸಿಲ್ ಭ್ರಷ್ಟವಾಗಿದೆ.  ವೈದ್ಯಕೀಯ ಕಾಲೇಜುಗಳನ್ನು ನಿಯಂತ್ರಿಸುವ ಪ್ರಕ್ರಿಯೆಯು ದೋಷಪೂರಿತವಾಗಿದೆ ಎಂದು ಆರೋಪಿಸಲಾಗಿದೆ.

ವೈದ್ಯಕೀಯ ಶಿಕ್ಷಣದಲ್ಲಿ ರಾಷ್ಟ್ರೀಯ ಮಾನದಂಡಗಳನ್ನು ಏಕರೂಪವಾಗಿ ಮಾಡುವ ಅವಕಾಶ ಹೊಸ ಮಸೂದೆಯಲ್ಲಿದೆ. ಅಂತಿಮ ವರ್ಷದ ಎಂಬಿಬಿಎಸ್ ಪರೀಕ್ಷೆಯನ್ನು ಪಿಜಿಗೆ ಪ್ರವೇಶ ಪರೀಕ್ಷೆಯಾಗಿ ಪರಿಗಣಿಸಬೇಕು  ವಿದೇಶಗಳಿಂದ ಮೆಡಿಕಲ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಸ್ಕ್ರೀನಿಂಗ್ ಪರೀಕ್ಷೆಯಾಗಿ ಪರಿಗಣಿಸಬೇಕು. ಈ ಪರೀಕ್ಷೆಯನ್ನು ರಾಷ್ಟ್ರೀಯ ನಿರ್ಗಮನ ಪರೀಕ್ಷೆ ಎಂದು (ನೆಕ್ಟ್) ಎಂದು ಕರೆಯಲಾಗುವುದು ಎಂದು ಹೇಳಿದರು.