ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಸೂದೆ, 2019 : ಆರೋಗ್ಯ ನಿರ್ವಹಣೆ ಗುಣಮಟ್ಟ ಕುಸಿತಕ್ಕೆ ದಾರಿ? 

ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಸೂದೆ, 2019 : ಆರೋಗ್ಯ ನಿರ್ವಹಣೆ ಗುಣಮಟ್ಟ ಕುಸಿತಕ್ಕೆ ದಾರಿ? 

ಲೋಕಸಭೆ 2019 ರ ಜುಲೈ 30 ರಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಮಸೂದೆ, 2019 ನ್ನು ಅಂಗೀಕರಿಸಿದ ಬೆನ್ನಲ್ಲೇ ಅದನ್ನು ವಿರೋಧಿಸಿ ಭಾರತದಾದ್ಯಂತ ನೂರಾರು ವೈದ್ಯರು ಪ್ರತಿಭಟನೆ ನಡೆಸುತ್ತಿದ್ದರೂ  ಆಗಸ್ಟ್ 1, 2019 ರಂದು ರಾಜ್ಯಸಭೆಯೂ ಈ ಮಸೂದೆಯನ್ನು ಅಂಗೀಕರಿಸಿದೆ. 

ಈ ಮಸೂದೆಯಲ್ಲಿ, ಭಾರತೀಯ ವೈದ್ಯಕೀಯ ಆಯೋಗ (ಎಂಸಿಐ) ವೈದ್ಯಕೀಯ ಕಾಲೇಜುಗಳನ್ನು ನಿಯಂತ್ರಿಸುವ ಸದ್ಯದ ಪ್ರಕ್ರಿಯೆಯಲ್ಲಿ ದೋಷವಿದೆ ಎಂದು ಆರೋಪಿಸಿ, ಭಾರತದ ವೈದ್ಯಕೀಯ ಆಯೋಗವನ್ನು (ಎಂಸಿಐ) ರದ್ದುಗೊಳಿಸಲು ಹಲವಾರು ಕಾರಣಗಳನ್ನು ನೀಡಲಾಗಿದೆ. ಪ್ರಸ್ತುತ ಮಸೂದೆಯು ಭಾರತೀಯ ವೈದ್ಯಕೀಯ ಮಂಡಳಿ  (ಎಂಸಿಐ)ಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗವೆಂದು ಬದಲಾಯಿಸಿ  ಹೊಸ ಮಂಡಳಿಯನ್ನು ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಿದೆ.

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ- ನೀಟ್ ಈಗಾಗಲೇ ಸಾಂಸ್ಥಿಕ ಅಂಗವಾಗಿದ್ದು, ಇದು 13 ಭಾಷೆಗಳಲ್ಲಿ ಪರೀಕ್ಷೆಗಳನ್ನು ನಡೆಸುತ್ತಿದೆ. ಆದರೆ, ಎಂಬಿಬಿಎಸ್ ನ ಅಂತಿಮ ವರ್ಷವನ್ನು ಸ್ನಾತಕೋತ್ತರ ಕೋರ್ಸ್ ಗೆ ಪ್ರವೇಶ ಪರೀಕ್ಷೆಯಾಗಿ ಮತ್ತು ವಿದೇಶಗಳಿಂದ ಸ್ಕ್ರೀನಿಂಗ್ ಪರೀಕ್ಷೆಯಾಗಿ ಪರಿಗಣಿಸಲು ಈ ಮಸೂದೆಯಲ್ಲಿ ಅವಕಾಶವಿದೆ.

ಅಲ್ಲದೇ, ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ನ್ಯಾಷನಲ್ ಎಕ್ಸಿಟ್ ಟೆಸ್ಟ್ -ನೆಕ್ಸ್ಟ್ ಎಂಬ ಹೊಸ ಪ್ರವೇಶ ಪರೀಕ್ಷೆಯನ್ನು ಸೇರಿದಂತೆ ಹಲವಾರು ಹೊಸ ನಿಬಂಧನೆಗಳನ್ನು ಈ ಮಸೂದೆಯಲ್ಲಿ ಪರಿಚಯಿಸಲಾಗಿದೆ.

ನೆಕ್ಸ್ಟ್ - ನಿರ್ಗಮನ ಪರೀಕ್ಷೆ ಎಂದರೇನು ?

ಪ್ರಸ್ತುತ ಮಸೂದೆಯಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಏಕರೂಪದ ರಾಷ್ಟ್ರೀಯ ಮಾನದಂಡಗಳನ್ನು ಮಾಡಲು  ಅವಕಾಶ ಕಲ್ಪಿಸಿದ್ದು, ಅಂತಿಮ ವರ್ಷದ ಎಂಬಿಬಿಎಸ್ ಪರೀಕ್ಷೆಯನ್ನು ಅದೇ ಕ್ಷೇತ್ರದಲ್ಲಿ ಸ್ನಾತಕೋತ್ತರ (ಪಿಜಿ) ಕೋರ್ಸ್ ಗಳಿಗೆ ಪ್ರವೇಶ ಪರೀಕ್ಷೆಯಾಗಿ  ಪರಿಗಣಿಸಲೂ ಸಹ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಪರೀಕ್ಷೆಯನ್ನು ರಾಷ್ಟ್ರೀಯ ನಿರ್ಗಮನ ಪರೀಕ್ಷೆ (ನೆಕ್ಸ್ಟ್) ಎಂದು ಕರೆಯಲಾಗುತ್ತದೆ. ಹಾಗೆಯೇ ಈ ಪರೀಕ್ಷೆಯು ವಿದೇಶದಲ್ಲಿ ಔಷಧಿಯ ಪದವಿ ಪಡೆದ ವಿದ್ಯಾರ್ಥಿಗಳಿಗೆ  ಸ್ಕ್ರೀನಿಂಗ್ ಪರೀಕ್ಷೆಯಾಗಲಿದೆ. 

ಬ್ರಿಜ್ ಕೋರ್ಸ್  ಎಂದರೇನು?

ಈ ಮಸೂದೆಯ ಮೊದಲ ಆವೃತ್ತಿಯಲ್ಲಿ, ಆಯುಷ್ ವೈದ್ಯರು ಎರಡು ವರ್ಷಗಳ ಬ್ರಿಜ್ ಕೋರ್ಸ್ ಮುಗಿಸಿದ ನಂತರ ಅಲೋಪಥಿ ವೈದ್ಯರಾಗಿ ಕೆಲಸ ಮಾಡಬಹುದು ಎಂದು ಸರ್ಕಾರ ಹೇಳಿದೆ. ಈ ಪ್ರಸ್ತಾಪವನ್ನು ದೇಶಾದ್ಯಂತ ಮೆಡಿಕಲ್ ಬ್ರದರ್ ಹುಡ್ ವ್ಯಾಪಕವಾಗಿ ವಿರೋಧಿಸಿತು. ಈಗ, ಪ್ರಸ್ತುತ ಮಸೂದೆಯ ಹೊಸ ಸ್ವರೂಪದಲ್ಲಿ, ಆಯುಷ್ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸಿಲ್ಲವಾದರೂ,  ಪ್ರಸ್ತಾಪವನ್ನು ಹಾಗೆಯೇ ಉಳಿಸಿಕೊಂಡಿದೆ. ಆಧುನಿಕ ವೈದ್ಯಕೀಯ ಮತ್ತು ವೈಜ್ಞಾನಿಕ ಪದ್ಧತಿಯ ವೃತ್ತಿಯೊಂದಿಗೆ ಸಂಪರ್ಕ ಹೊಂದಿರುವ ಇನ್ನಿತರ ವೈದ್ಯರಿಗೆ ಮಧ್ಯಮ ಮಟ್ಟದ ಸಮುದಾಯ ಆರೋಗ್ಯ ಸೇವೆಯನ್ನು ಆಯೋಗವು (ಪ್ರಸ್ತಾವಿತ) ಅನುಮತಿಸುತ್ತದೆ ಎಂದು ಅದು ಹೇಳಿದೆ. ಆದಾಗ್ಯೂ, ಇದು ಅವರ ಒಟ್ಟು ಸಂಖ್ಯೆಯು ದೇಶದ ಒಟ್ಟು ನೋಂದಾಯಿತ ವೈದ್ಯರಲ್ಲಿ ಮೂರನೇ ಒಂದು ಭಾಗವನ್ನು ಮೀರಬಾರದು ಎಂಬ ಕಾರಣದಿಂದಾಗಿ, ಇದು ಈ ಪದವನ್ನು ಮುಚ್ಚಿಡುವತ್ತ ಯತ್ನಿಸುವಂತಿದೆ.

ವಿವಾದಾಸ್ಪದ ಬ್ರಿಜ್ ಕೋರ್ಸ್ ನ್ನು, 'ಸೀಮಿತ ಪರವಾನಗಿಯ' ಷರತ್ತಿನೊಂದಿಗೆ ಆಧುನಿಕ ಔಷಧಿ ಅಭ್ಯಾಸ ಮಾಡಲು  ಹೆಚ್ಚು ಸದ್ದಿಲ್ಲದೆ ಪ್ರಸ್ತುತ ಮಸೂದೆಯಲ್ಲಿ ಬದಲಾಯಿಸಲಾಗಿದೆ ಎಂದು ವೈದ್ಯರು ವಾದಿಸುವಂತಾಗಿ, ದೇಶದ ಎಲ್ಲೆಡೆಗೂ ವೈದ್ಯಕೀಯ ಸಮುದಾಯದಿಂದ ಪ್ರತಿಭಟನೆ ನಡೆಯುತ್ತಿವೆ. 

ಪ್ರಸ್ತುತ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಮಸೂದೆಯ ಕಲಂ 32, ಸಮುದಾಯ ಆರೋಗ್ಯ ಒದಗಿಸುವವರ ಪಾತ್ರದ ಬಗ್ಗೆ "ಆಯೋಗದ ಆಧುನಿಕ ವೈಜ್ಞಾನಿಕ  ಹಾಗೂ ವೈದ್ಯಕೀಯ ವ್ಯವಸ್ಥೆಯ ಸಂಪರ್ಕ ಹೊಂದಿರುವ  ಸಮುದಾಯ ಆರೋಗ್ಯ ಒದಗಿಸುತ್ತಿರುವ ವ್ಯಕ್ತಿಗೆ, ಅವರ ಒಟ್ಟು ಸಂಖ್ಯೆಯು ಮಸೂದೆಯ ಕಲಂ 31 ರ ಅಡಿಯಲ್ಲಿ ನೋಂದಾಯಿತ ಒಟ್ಟು ವೈದ್ಯರಲ್ಲಿ ಮೂರನೇ ಒಂದು ಭಾಗವನ್ನು ಮೀರದಿದ್ದಲ್ಲಿ, ಇನ್ನಿತರ ಮಾನದಂಡಗಳ ಹಾಗೂ ಕಟ್ಟು-ಪಾಡುಗಳನ್ವಯ ತೇರ್ಗಡೆಯ ಆಧಾರದ ಮೇಲೆ ಮಧ್ಯಮ-ಮಟ್ಟದಲ್ಲಿ ವೈದ್ಯಕೀಯ ವೃತ್ತಿಗೆ ಸೀಮಿತ ಪರವಾನಿಗೆ ನೀಡಬಹುದು" ಎಂದು ಪ್ರಸ್ತಾಪಿಸುತ್ತದೆ. 

ಮಸೂದೆಯ ಕಲಂ 31, ಮಾನ್ಯತೆ ಪಡೆದ ವೈದ್ಯವೃತ್ತಿಪರರ ರಾಷ್ಟ್ರೀಯ ರಿಜಿಸ್ಟರ್ ನಿರ್ವಹಣೆ, ನೈತಿಕತೆ ಮತ್ತು ನೊಂದಾಯಿತ ವೈದ್ಯಕೀಯ ಮಂಡಳಿಗೆ ಸಂಬಂಧಿಸಿದೆ. ಹೋಮಿಯೋಪತಿ ಮತ್ತು ಆಯುರ್ವೇದ ಪರ್ಯಾಯ ಔಷಧಿಗಳ ವೈದ್ಯರು ಗಳಿಗೆ ಬ್ರಿಜ್ ಕೋರ್ಸ್ ಮುಖೇನ ಅಲೋಪತಿ ಅಭ್ಯಾಸ ಮತ್ತು ವೃತ್ತಿಗೆ ಅವಕಾಶ ಕಲ್ಪಿಸಲಾದ ಪ್ರಸ್ತುತ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಮಸೂದೆಯ ಹಿಂದಿನ ಅಂದರೆ 2018 ರ ಆವೃತ್ತಿಯನ್ನು, ವೈದ್ಯರು ಮತ್ತು ಆರೋಗ್ಯ ವೃತ್ತಿಗಾರರು ತೀವ್ರ ವಿರೋಧಿಸಿದ್ದು, ಇನ್ನೂ ಸಮಸ್ಯೆ ಜ್ವಲಂತವಾಗಿದೆ. 

ಅನೇಕ ಪ್ರತಿಭಟನೆಗಳು, ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ರ ಸಭೆಗಳ ನಂತರ, ಪ್ರಸ್ತುತ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಮಸೂದೆಯ ಹಿಂದಿನ ಅಂದರೆ 2018 ರ ಆವೃತ್ತಿಯನ್ನು, ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಲಾಗಿತ್ತು. ಮಸೂದೆಯ ಸದರಿ  ನಿರ್ಬಂಧನೆಯನ್ನು ಕಡ್ಡಾಯ ಮಾಡಲಾಗದೆಂಬ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸ್ಸು ಮಾಡಿತ್ತಲ್ಲದೆ ಅಗತ್ಯ ಅರ್ಹತೆ ಇಲ್ಲದೆ ವೈದ್ಯಕೀಯ ಅಭ್ಯಾಸ ಮಾಡುವವರ ವಿರುದ್ಧ ಕ್ರಮದ ಬಗ್ಗೆ ಶಿಫಾರಸ್ಸು ಮಾಡಿತ್ತು. 

ಪ್ರಸ್ತುತ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಮಸೂದೆಯಲ್ಲಿ ನಮೂದಾದ "ಆಧುನಿಕ ವೈಜ್ಞಾನಿಕ ವೈದ್ಯಕೀಯ ವೃತ್ತಿಗೆ ಸಂಪರ್ಕವಿರುವ ವ್ಯಕ್ತಿಯ" ಎಂಬ ವ್ಯಾಖ್ಯಾನ ಮತ್ತು ಸನ್ನಿವೇಶ ಪ್ರಶ್ನಾರ್ಹ. ಲ್ಯಾಬ್ ತಂತ್ರಜ್ಞರು, ರಕ್ತದ ಮಾದರಿಯ ಸಂಗ್ರಹಕಾರರು, ಇತ್ಯಾದಿ ಸಮುದಾಯ ಆರೋಗ್ಯ ಒದಗಿಸುವವರು, ಪ್ರಸ್ತುತ ಮಸೂದೆಯ ಕಲಂ 32 ರನ್ವಯ ಪರವಾನಗಿ ಪಡೆದು ಅರ್ಹ ವೈದ್ಯರ ಮೇಲ್ವಿಚಾರಣೆ ಇಲ್ಲದೆಯೇ ವೈದ್ಯಕೀಯ ವೃತ್ತಿಯನ್ನು ನಡೆಸಬಹುದು. 

ಮಸೂದೆಯಲ್ಲಿ ಬ್ರಿಜ್ ಕೋರ್ಸ್ ನ್ನು ತೆಗೆದುಹಾಕಲಾಗಿದೆ, ಆದರೆ ಯಾವುದೇ ವ್ಯಕ್ತಿ ಆಧುನಿಕ ವೈದ್ಯಕೀಯ ಸಂಪರ್ಕವನ್ನು ಹೊಂದಿದಲ್ಲಿ, ವೈದ್ಯಕೀಯ ವೃತ್ತಿಯನ್ನು ನಡೆಸಬಹುದಾದ ಅರ್ಹತೆ ಕಲಂ 32 ರನ್ವಯ ನೀಡಿದ್ದು, ರೋಗಿಗಳ ಸಂಖ್ಯೆ ಮತ್ತು ಆಸ್ಪತ್ರೆಗಳು ಅಥವಾ ಚಿಕಿತ್ಸಾಲಯಗಳಲ್ಲಿ ವೈದ್ಯರು ಗಳ ಸಂಖ್ಯೆ ಸಣ್ಣ ಗ್ರಾಮೀಣ ಪ್ರದೇಶಗಳಲ್ಲಿ ಸಿಬ್ಬಂದಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವದಕ್ಕಿಂತ ಹೆಚ್ಚಾಗಿ  ಸಮಾಜದ ಆರೋಗ್ಯದ ವ್ಯವಸ್ಥೆ ಮತ್ತು ಗುಣಮಟ್ಟದಲ್ಲಿ ಗಣನೀಯ ಕುಸಿತವಾಗುವುದರಲ್ಲಿ ಸಂಶಯವಿಲ್ಲ.

                                                                                                                                   (ಲೇಖಕರು ಸರ್ವೋಚ್ಚ ನ್ಯಾಯಾಲಯದ ವಕೀಲರು)