ವೈದ್ಯೋ ನಾರಾಯಣ ಹರಿ ವೈದ್ಯರುಗಳಿಗೆ ನಾವು ಯಾವಾಗಲೂ ಚಿರಋಣಿ

ವೈದ್ಯೋ ನಾರಾಯಣ ಹರಿ ವೈದ್ಯರುಗಳಿಗೆ ನಾವು ಯಾವಾಗಲೂ ಚಿರಋಣಿ

ನಮ್ಮ ಕಣ್ಣಿಗೆ ಕಾಣುವಂತೆ ದೇವರುಗಳೆಂದರೆ ಅದು ತಾಯಿ-ತಂದೆ ಅಷ್ಟೇ ಅಲ್ಲ ಗುರು ಮತ್ತು ವೈದ್ಯರು ತಾಯಿ ತಂದೆ ನಮ್ಮ ಜೀವನವನ್ನು ರೂಪಿಸುವಲ್ಲಿ ಎಷ್ಟು ಶ್ರಮಪಟ್ಟಿರುತ್ತಾರೋ ಅದೇ ರೀತಿ ಗುರುಗಳು ನಮ್ಮನ್ನು ತಿದ್ದಿ ವಿದ್ಯೆ-ಬುದ್ಧಿ ಕಲಿಸುವಲ್ಲಿ ಅವರು ಕೂಡ ನಮ್ಮ ಪಾಲಿನ ದೇವರಾಗಿರುತ್ತಾರೆ. ಅದೇ ತರಹ ವೈದ್ಯರು ಕೂಡ ನಮಗೆ ಕಣ್ಣಿಗೆ ಕಾಣುವ ದೇವರು ಏಕೆಂದರೆ ತಾಯಿ ನಮಗೆ ಜನ್ಮ ಕೊಟ್ಟರೆ ವೈದ್ಯರು ನಮಗೆ ಮರುಜನ್ಮ ಕೊಡುತ್ತಾರೆ. ಅಂತ ರಾಷ್ಟ್ರೀಯ ವೈದ್ಯರ ದಿನದ ಶುಭಾಶಯಗಳು.

ನೀವು ನೋಡಿರಬಹುದು ದೇಶದಲ್ಲಿ ತಾಂಡವಾಡುತ್ತಿರುವ ಕೊರೊನಾ ವೈರಸ್ ವಿರುದ್ಧ ಎಲ್ಲ ವೈದ್ಯರುಗಳು ತಮ್ಮ ಜೀವವನ್ನೇ ಪಣಕ್ಕಿಟ್ಟು ಯಾವುದನ್ನೂ ಲೆಕ್ಕಿಸದೆ ನಮ್ಮ ಜೀವವನ್ನು ಉಳಿಸಲು ಸದಾಕಾಲ ಹಗಲಿರುಳೆನ್ನದೆ ಸೇವೆಯನ್ನು ಸಲ್ಲಿಸುತ್ತಿರುವುದು ನೋಡಿದರೆ ಅವರು ನಮ್ಮ ಪಾಲಿನ ದೇವರಲ್ಲವೇ ಅವರಿಗೆ ನಾವು ಸದಾಕಾಲ ಚಿರಋಣಿ ಗಳಾಗಿರುತ್ತೇವೆ ಅಂತ ವೈದ್ಯರುಗಳಿಗೆ ನಾವು ಎಷ್ಟೊಂದು ಕೃತಜ್ಞತೆ ಸಲ್ಲಿಸಿದರು ಕಡಿಮೆಯೇ ಅವರಿಗೆ ಮತ್ತೊಮ್ಮೆ ಮಗದೊಮ್ಮೆ ವಂದನೆ ಅಭಿನಂದನೆಗಳು.