ಕಾಶ್ಮೀರ ಪ್ರಾಂತ್ಯದ ಎನ್ ಸಿ ಪಕ್ಷದ ಯುವ ಘಟಕ ವಿಸರ್ಜನೆ

ಕಾಶ್ಮೀರ ಪ್ರಾಂತ್ಯದ ಎನ್ ಸಿ ಪಕ್ಷದ ಯುವ ಘಟಕ ವಿಸರ್ಜನೆ

 

ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್(ಎನ್ ಸಿ) ಕಾಶ್ಮೀರ ಪ್ರಾಂತ್ಯದ ಪಕ್ಷದ ಯುವ ಘಟಕವನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜನೆ ಮಾಡಿದ್ದು, ಹೊಸ ತಂಡ ರಚನೆಯ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದೆ.

"ಕಾಶ್ಮೀರದಲ್ಲಿ ಅಸ್ತಿತ್ವದಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್ ನ ಯುವ ಘಟಕಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಲಾಗಿದೆ" ಎಂದು ಎನ್‌ಸಿ ವಕ್ತಾರರು ತಿಳಿಸಿದ್ದಾರೆ. ಆದರೆ ಪಕ್ಷದ ಈ ನಿರ್ಧಾರಕ್ಕೆ ಅವರು ಯಾವುದೇ ಕಾರಣವನ್ನು ನೀಡಲಿಲ್ಲ. ಎನ್‌ಸಿ ಪಕ್ಷದ ಯುವ ಘಟಕಕ್ಕೆ ಹೊಸಬರನ್ನು ನೇಮಕ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ.