ಮಂಗಳದ ಅಂಗಳದಲ್ಲಿ ರೋವರ್ ಗೇನು ಕೆಲಸ..?

ಮಂಗಳದ ಅಂಗಳದಲ್ಲಿ ರೋವರ್ ಗೇನು ಕೆಲಸ..?

ಪೃಥ್ವಿಯಿಂದ ಸರಾಸರಿ ಅಂದಾಜು 225 ಮಿಲಿಯನ್ ಕಿ.ಮೀ. ದೂರವಿರುವ ಮಂಗಳ ಗ್ರಹಕ್ಕೆ ನಾಸಾದಿಂದ ಫೆಬ್ರವರಿಯಲ್ಲಿ ಪಯಣಿಸುವ ರೋವರ್, ಜಝೆರೊ ಕ್ರೇಟರ್ನಲ್ಲಿಳಿದು, ಗ್ರಹವನ್ನು ಸುತ್ತಿ ಅಲ್ಲಿ ಪುರಾತನ ಕಾಲದಲ್ಲಿ ಇದ್ದಿರಬಹುದಾದ ಸೂಕ್ಷ್ಮಜೀವಿಗಳು, ಆಮ್ಲಜನಕದ ಲಭ್ಯತೆ ಇತ್ಯಾದಿಗಳೆಲ್ಲದರ ವಿವರಗಳನ್ನ ಸೆರೆ ಹಿಡಿದು ಭೂಮಿಗೆ ಕಳುಹಿಸಲು ಸಜ್ಜಾಗುತ್ತಿದೆ. ಈ ಯಾನಕ್ಕೆ ಸಜ್ಜಾಗುತ್ತಿರುವ ರೋವರ್ ಅತಿ ವಿಶಿಷ್ಟವಾಗಿದ್ದು, ಅಲ್ಯುಮಿನಿಯಂ ಆರು ಚಕ್ರಗಳು ಇದಕ್ಕಿದ್ದು, ಒಂದೊಂದಕ್ಕೂ ಪ್ರತ್ಯೇಕವಾದ ಮೋಟಾರು ಅಳವಡಿಸಿರುವುದರಿಂದ ಸ್ವಯಂಚಾಲಿತವಾಗಿ ಎತ್ತ ಬೇಕಾದರೂ ಚಲಿಸಬಲ್ಲವು.

ಕಳೆದ ಸಲ ಕಳುಹಿಸಿದ್ದ ರೋವರ್ ಪ್ರತಿದಿನ 214 ಮೀಟರ್(702 ಅಡಿ) ನಡೆಯುತ್ತೆ. ಇಪ್ಪತ್ತಮೂರು ಕ್ಯಾಮೆರಗಳು ಇದಕ್ಕಿದ್ದು, ಬಿಂಬಗಳನ್ನ ಸಂಸ್ಕರಿಸಲು ಮತ್ತು ನಕ್ಷೆಯನ್ನ ರೂಪಿಸಲು ಸುಧಾರಿತ ಗಣಕಯಂತ್ರದಂಥ ಸಾಧನ ಸಲಕರಣೆಯನ್ನೂ ಹೊಂದಿರುವ ಈಗಿನ ರೋವರ್ ಹಿಂದಿನದೆಲ್ಲಕ್ಕಿಂತ ಅತ್ಯಂತ ಸುಧಾರಿತವಾದ್ದು. ಅದರಲ್ಲೂ ಸ್ವಯಂಚಾಲಿತವಾಗಿ ಚಲಿಸಬಲ್ಲ ಸಾಮರ್ಥ್ಯವನ್ನೊಂದಿದ್ದು, ಇದರ ಚಲನೆಯ ಸಾಮರ್ಥ್ಯವನ್ನು ಡಿಸೆಂಬರ್ 17 ರಂದು ಸತತ ಹತ್ತು ಗಂಟೆಗಳ ಕಾಲ ಪರೀಕ್ಷಿಸಲಾಗಿದ್ದು, ಎಲ್ಲಾ ಪರೀಕ್ಷೆಗಳಲ್ಲೂ ತೇರ್ಗಡೆ ಹೊಂದಿದೆ. ಇದನ್ನೇ ನಾಸಾ ವಿಜ್ಞಾನಿಗಳ ಬಳಕ `ಚಾಲನಾ ರಹದಾರಿ(ಡ್ರೈವಿಂಗ್ ಲೈಸೆನ್ಸ್) ಪಡೆದುಕೊಂಡಿದೆ ಎಂದೇಳಿದ್ದಾರೆ.

ಜಝೆರೋ ಕ್ರೇಟರ್ ಎಂಬುದು ಬಾಹ್ಯಾಕಾಶದಲ್ಲಿರುವ 28 ಮೈಲಿ(45 ಕಿಮೀ) ಸುತ್ತಳತೆಯ ಕೇಂದ್ರ. ಇಲ್ಲಿಗೆ ಬಂದಿಳಿಯುವ ರೋವರ್ ಮಂಗಳವನ್ನು ಸುತ್ತುತ್ತೆ, ಹೀಗೆ ಇಲ್ಲಿ ಉಳಿಯುತ್ತಿರುವ ಅವಧಿ ಕೂಡ ಅತಿ ದೀರ್ಘವಾದುದು. ಇದು ಒಂದು ಮಾರ್ಸ್ (668 ಸೊಲ್) ಆಗಿರುತ್ತೆ.

ಅಂದಹಾಗೆ ಭೂಮಿ ಗಂಟೆಗೆ 67ಸಾವಿರ ಮೈಲಿಯಂತೆ ಸೂರ್ಯನನ್ನು ಪೂರ್ತಿಯಾಗಿ ಸುತ್ತಲು 365 ದಿನ ಬೇಕು. ಮಂಗಳ ಗ್ರಹನಡಿಗೆ ಭೂಮಿಗಿಂತ ನಿಧಾನ, ಹೀಗಾಗಿ ಸೂರ್ಯನನ್ನ ಸುತ್ತಲು ಅದಕ್ಕೆ 687 ಪೃಥ್ವಿ ದಿನಗಳು ಬೇಕು. ಇದನ್ನೆ 668.599

ಸೋಲ್ ದಿನಗಳು ಎನ್ನಲಾಗುತ್ತೆ. ಒಂದು ಸೋಲ್ ಎಂದರೆ ಮಂಗಳ, ಸೂರ್ಯನನ್ನ ಪೂರ್ತಿಯಾಗಿ ಸುತ್ತಲು ತೆಗೆದುಕೊಳ್ಳುವ ಸಮಯ. ಭೂಮಿಯಿಂದ ಮಂಗಳ ಸರಾಸರಿ 225 ಮಿಲಿಯನ್ ಕಿಮೀ, ಸೂರ್ಯನಿಂದ 240.82 ಮಿಲಿಯನ್ ಕಿಮೀ ದೂರದಲ್ಲಿದ್ದು, ಈ ಕೆಂಪು ಗ್ರಹಕ್ಕೀಗ ಹೊಸದಾಗಿ ಹೋಗುತ್ತಿರುವ ನಾಸಾದ ರೋವರ್, ಅಲ್ಲಿರುವ ಎಲ್ಲಾ ಪರಿಸರ ಲಕ್ಷಣಗಳು, ಜೀವಿಗಳು, ರಾಸಾಯನಿಕಗಳು, ಆಮ್ಲಜನಕ ಇತ್ಯಾದಿಯೆಲ್ಲವನ್ನು ಸಚಿತ್ರ ಸಹಿತ ಸಂಸ್ಕರಣೆ ಮಾಡಿ, ನಕ್ಷೆಯನ್ನ ರೂಪಿಸಿ ವಿಶ್ಲೇಷಣೆಗೆ ಭೂಮಿಗೆ ರವಾನಿಸುತ್ತೆ. ಇದು ಮುಂದಿನ ವರ್ಷದಲ್ಲಿ ಆಗುತ್ತಿರುವ ಅತಿ ಪ್ರಮುಖ ಬಾಹ್ಯಾಕಾಶ ವಿದ್ಯಾಮಾನ.