ರಾಜ್ಯಕ್ಕೆ ಮೋದಿ ಬರ್ದಿರೋ ಹಿಂದ್ ಕಾರ್ಣ ಬ್ಯಾರೇನ ಐತಿ

 ರಾಜ್ಯಕ್ಕೆ ಮೋದಿ ಬರ್ದಿರೋ ಹಿಂದ್ ಕಾರ್ಣ ಬ್ಯಾರೇನ ಐತಿ

 "ಇದು ಯಾರು ಬರೆದ ಕತೆಯೋ
  ನನಗಾಗಿ ಬಂದ ವ್ಯಥೇಯೋ
  ಕೋನೆ ಹೇಗೋ ಅರಿಯಲಾರೆ, 
  ಮರೆಯಲಾರೆ ಇದು ಯಾರು ಬರೆದ ಕತೆಯೋ...."

ಏನ್ಪಾ ಬಸಪ್ಪಾ ಇದು.... ಬೆಳೆಗ್ಗೆ...ಬೆಳಿಗ್ಗೆ ಕುಯಿಂ... ಕುಯಿಂ... ರಾಗಾ !. ಯಾಕ್.. ಏನಾತೋ.... ಅಂತಾದ್ದೂ..?ಬ್ಯಾರೇಯಾರರ ಕತಿ ಬರ್ಯಾಕ ಆಕ್ಕತೇನೂ!. ಇದು ನಿಂದ ಕತಿ...ನಿಂದ ವ್ಯಥಿ.... ಇದಕ್ಕ ನೀನ ಉತ್ತ್ರಾ ಹೇಳಬೇಕು? ಗಣಪತಿಹಬ್ಬ ಮಾಡೋದ ಬಿಟ್ಟು ಈನಮೂನಿ ಅಣ್ಣಾವ್ರ ಹಾಡನ್ನು ಹಿಂಗ್ ಕುಯ್ಯಾಕ ಹತ್ತಿ ಅಂದ್ರ....ಅದೇನಾತು ಅಂತ್ ಬಿಡ್ಸಿಹೇಳಲ್ಲ....?

ಇದ್ರಾಗ ಬಿಡ್ಸಿ ಹೇಳೋದು ಏನೈತ್ರಿ.... "ಪಾಪ ನಮ್ಮ ಡಿಕೆಶಿನ ದಿಲ್ಲಿಯೋಳ್ಗ ಈ ಇಡಿಯವ್ರು ತಮ್ಮ ಕೋಟಿಯೋಳ್ಗ ಕುಡಿಹಾಕ್ಕೊಂಡು ಸಿಕ್ಕಾಪಟ್ಟೆ ಪ್ರಶ್ನೆಗಳಮ್ಯಾಲ ಪ್ರಶ್ನೆ ಕೇಳಿ, ಆ ರೋಕ್ಕ ಎಲ್ಲಿಂದ ಬಂತು"....? "ಈ ರೊಕ್ಕ ಎಲ್ಲಿಂದ ಬಂತು"....? "ದಿಲ್ಲಿ ಪ್ಲಾಟಿನ್ಯಾಗ ಸಿಕ್ಕ 8ಕೋಟಿಗೆ ಲೆಕ್ಕ ಎಲ್ಲೈತಿ"....? "ಗಲ್ಲಿಯೋಳ್ಗ ಸಿಕ್ಕ ಬಂಗಾರಕ್ಕ ಪತ್ರ ಎಲೈತಿ"? ಅಂತ್ ಒಂದ ಸಮ್ನ ಉತ್ತ್ರಾಕೊಡು ಅಂತ ಗಂಟಬಿದ್ದಾರಂತ!. ಅದ್ಕ ಡಿಕೆಶಿ ಒಂದ ಸಮ್ನಾ ಉತ್ತರಾಕೊಟ್ಟು ಸೊರಗೇತಂತ್. ಅದ್ನ ನೆನ್ಸಿಕೊಂಡೆ,  ಅವಾಗ ಈ "ಇದುಯಾರು ಬರೆದ ಕಥೆಯೋ.... ನನಗಾಗಿ ಬಂದ ವ್ಯಥೇಯೋ... ಕೋನೆ ಹೇಗೋ ಅರಿಯಲಾರೆ... ಮರೆಯಲಾರೆ" ಅಂತ ಹಾಡೇಳಾಕ ಹತ್ತಿದ್ದೆ ನೋಡ್ರೀ.....!

"ಅಲ್ಲೋ ಅಷ್ಟದೊಡ್ಡ ಸಾಮ್ರಾಜ್ಯ ಕಟಿಗೊಂಡಿರೋ ಡಿಕೆಶಿಗೆ ಅದ್ನ ಹೆಂಗ್ ಉಳ್ಸಿಕೊಳ್ಳಬೇಕು ಅನ್ನೋದು ಗೊತ್ತಿರೋದಿಲ್ಲ ಅನಕೊಂಡಿಏನೂ?. ಅದ್ಕೆಲ್ಲಾ ಡಿಕೆಶಿ ಸಜ್ಜಾಗಿರ್ತಾನ್"!. "ಈಗ ಏನ್  ಅವ್ನ ಟಾಯಿಮ್ ಎಡಾ ಇದ್ದಂಗ್  ಕಾಣತೈತಿ!. ಅದ್ಕ ಈ ಇಡಿ, ಪಿಡಿ ಎಲ್ಲಾ......ಅದ್ರಾಗಿಂದ ಹೆಂಗ್ ಹೊರ್ಗ ಬರ್ಬೇಕು ಅನ್ನೋದು ಅದ್ಕ ಗೊತೈತಿ ಬಿಡೋ ಮಾರಾಯ"!.

ಗೊತ್ತಿದ್ದಿದ್ರ ಹಿಂಗ್ಯಾಕ ಆಗತಿತ್ತೋ...ಕಾಕಾ ? ಅದ್ರ ಪರಿಸ್ಥಿತಿ  ನೋಡ್ರಿ.... "ಸ್ವಲ್ಪ ಹೆಚ್ಚು -ಕಮ್ಮಿ ಆದ್ರು ಡಿಕೆಶಿ ಪರ್ಮನೆಂಟಾಗಿ ಜೇಲ್ ಸೇರಬೇಕಾಗತಿತ್ತೂ"?. "ಲಾಲಾ ನೋಡ್ರೀ ಮೇವು ತಿಂದ್ ಪ್ರಕರ್ಣದಾಗ್ ಜೇಲಿನ್ಯಾಗ ಇದ್ದ ಹೊಟಿಬ್ಯಾನಿ ಹಚ್ಗೊಂಡ್ ಹೆಂಗ್ಯಾಗೇತಿ ಅದ್ರ ಸ್ಥಿತಿ"!.   "ಸಮ್ಮೀಶ್ರ ಸರ್ಕಾರ ಬಿದ್ದಮ್ಯಾಕ್ ಡಿಕೆಶಿಗೆ ಇದ್ದ ಮಂತ್ರಿಪಟ್ಟ ಹೋಗೇತಿ..... ಈಗ ಅದು ಬರಿ ಎಮ್ಮೆಲ್ಲೆ ಅಷ್ಟ"...! "ಅದ್ರ ಕೈಯಾಗ ಹೇಳಿಕೊಳ್ಳುವಂತ ಅಧಿಕಾರ ಇಲ್ಲಾ!. ಮ್ಯಾಲ ಕೇಂದ್ರದಾಗನೂ ಬಿಜೆಪಿ ...ರಾಜ್ಯದಾಗನೂ ಬಿಜೆಪಿ ಅಧಿಕಾರದಾಗ ಇರೋದ್ರಿಂದ್ ಡಿಕೆಶಿ ಪ್ರಭಾವ ಹೆಚ್ಗಿ ನಡೆವಲು"್ದ....?

ಅಲ್ಲೋ ನಿಮ್ಮ ಡಿಕೆಶಿ ಕಡ್ಮಿ ಆದ್ಮಿಯೇನೂ?. ಈಹಿಂದ್ "ಈಪ್ಯಾಂಟ್ ಲೆಸ್ ಪಕ್ಷದವ್ರು ಗುಜರಾತ್‍ನೊಳ್ಗ ಆಪರೇಶನ್ ಪ್ಯಾಂಟ್ ಲೆಸ್ ಮಾಡಾಕ್ ಹೋದ ಹೊತ್ತಿನ್ಯಾಗ್ ಈಟೋಪ್ಗಿ ಪಕ್ಷದವ್ರು ತಲಿಮ್ಯಾಗ್ ಕೈ ಹೊತ್ಗಂಡ ಕುತ್ಕಂಡಿದ್ರು"!. ಆವಾಗ "ಈ ಡಿಕೆಶಿ ಗುಜರಾತಿಂದ್ ಅವ್ರ್ನ ಕರ್ಕೊಂಡ್ ಬಂದು, ಬೆಂಗ್ಳೂರ್ನಾಗ್ ಬಿಡ್ದಿ ರೇಸಾರ್ಟ್ನೊಳ್ಗ ಬಚ್ಚಿಟ್ಟತ್ತು"!.  ಒಂದವೇಳ್ಯಾ "ಈ ಡಿಕೆಶಿ ಗುಜರಾತ್ ಎಮ್ಮೆಲ್ಲೆಗಳ್ನ ಇಲ್ಲಿಗೆ ಕರಕಂಡ್ ಬಂದು ಬಿಚ್ಚಿಡಲಿಲ್ಲಾಂದ್ರ ಗುಜರಾತ್‍ನ್ಯಾಗ್ ಸೋನಿಯಾಗಾಂಧಿಗೆ ಹತ್ರಾಗಿದ್ದ ಅಮ್ಮದ್ ಪಟೇಲು ರಾಜ್ಯಸಭಾ ಇಲೇಕ್ಷನ್ ಒಳ್ಗ ಸೋತು ಮನಿ ಸೇರ್ಕೋಳ್ಳಬೇಕಾಗಿತ್ತು"...!. ಅವಾಗಿಂದ್ "ಈ ಶಾ, ಡಿಕೆಶಿ ಮ್ಯಾಲ್ ಒಂದಲ್ಲಾ ಎರಡು ಕಣ್ಣಿಟ್ಟಿತ್ತು ನೋಡು"....? "ಅದ್ರ ಪ್ರಭಾವಾನ ನೋಡು ಇವತ್ತ ಡಿಕೆಶಿ ಕೇಸ್‍ನ್ಯಾಗ ಸಿಕ್ಕೊಂಡು ಒದ್ದಾಡಾಕ ಹತ್ತೇತಿ"...?

 "ಏ ಬ್ಯಾರೇನ ಐತಲ್ರೀ ಇದು"...

ಹೌದ ಮತ್ತ... ಏನಂತ ತಿಳ್ಕಂಡಿ ನಿ ಇದ್ನ!.

ಆವಾಗಿನ್ ಸೇಡ್ ಈಗ ತೀರ್ಸಿಕೊಳ್ಳಾಕ ಹತ್ಯಾರ ಅಂತಿರೇನು...? 

ಹೌದೋ... ಹೌದು.. "ಆವತ್ತ ಈ ಡಿಕೆಶಿ ತೆಪ್ಗ ಇದ್ದಿದ್ರ ಗುಜತಾತ್‍ನ್ಯಾಗ ಪ್ಯಾಂಟ್‍ಲೆಸ್ ಪಕ್ಷದವ್ರು ಟೊಪ್ಗಿ ಪಕ್ಷದ ಎಮ್‍ಎಲ್‍ಎಗಳ್ಗೆ ಆಪರೇಷನ್ ಮಾಡಿ ಅಹ್ಮದ್ ಪಟೇಲನ್ ಸೋಲ್ಸಿ ಸೋನಿಯಾಗಾಂಧಿಗೆ ಅಸಂಯಿ ಮಾಡಬೇಕು ಅಂತ್ ಕಾಯಿತಿದ್ರು". " ಆದ್ರ ಅದಕ್ಕ ಆಸ್ಪದಾ ಕೊಡ್ದಂಗ್ ಡಿಕೆಶಿ, ಅ ಎಮ್‍ಎಲ್‍ಎಗಳನ್ನ ಕರ್ಕೊಂಡ್ ಬಂದು ಅವ್ರನ ಸರಿಯಾಗಿ ನೊಡ್ಕೊಂಡು ಈ ಅಹ್ಮದ್ ಪಟೇಲ್ಗ ಮತ್ತ ರಾಜ್ಯಸಭಾದ ಪಟೇಲ್ ಗಿರಿ ಕೊಡ್ಸಾಕ ಕಾರ್ಣ ಆಗಿತ್ತು"?. "ಹೊತ್ತ ಬರ್ಲಿ ಅಂತ್ ಕಾಯಿತಿದ್ದವ್ರಿಗೆ ಈಗ ಹೊತ್ತ ಬಂದಂಗ್ ಕಾಣತೈತಿ ನೋಡು"...? ಕೇಂದ್ರದ ಕೈಯೋಳ್ಗ ಇರೋ ಐಟಿ ಯವ್ರು ಈಗ ಹಿಂದಿನ ಪ್ರಕರ್ಣಾ ಹಿಡ್ಕಂಡು ಈ ಡಿಕೆಶಿನ ಬೆಂಡ್ ಎತ್ತಾಕ ಹತ್ಯಾರ ನೋಡು...?

"ಅಲ್ರೀ ಕಾಕಾ ಈ ಐಟಿ ಯವ್ರು ಕೇಂದ್ರವ್ರು ಹೇಳದಂಗ್ ಕೇಳ್ತಾರ ಅಂತಿರೆಲ್ಲಾ ಇದು ಖರೆ ಅಂತಿರೇನು"?

"ಖರೇ ಅಂತ್ ಕೇಳ್ತಾನಲ್ಲಲೇ ಇವಾ..... ನೋರಲ್ಲೋ ಇನ್ನೂರಕ್ಕ ಇನ್ನೂರು ಖರೆನ"..!.  "ಕೇಂದ್ರದವ್ರು ಸುಪದ್ರ್ಯಾಗ್ ಇರೋ ಐಟಿ ಯವ್ರು ಮ್ಯಾಲಿನವ್ರು ಹೆಂಗ್ಯ ಹೇಳ್ತಾರೋ ಹಂಗ್ ಕೇಳ್ತಾರ್"!. "ಮ್ಯಾಲಿನವ್ರು ಒಂದ್ ಮಾತ ಈ ಐಟಿಯವ್ರಿಗೆ ಹೇಳಿ, ಏ ಹೋಗ್ಲಿ ಬಿಡ್ರೋ.... ಅವಾ ನಮ್ಮಾವ್ ಅದಾನ, ಅವ್ನ ಹಂಗ್ ಬಿಡ್ರೀ. ಅಂತ್ ಒಂದ್ ಮಾತ ಹೇಳಿದ್ರ ಸಾಕು ಅವ್ರು ಈ ಡಿಕೆಶಿನ ಸನ್ಮಾನ ಮಾಡಿ ಮನಿಗೆ ಕಳ್ಸತಾರ ನೋಡು"....?

"ಒಟ್ಟಿನ್ಯಾಗ್ ಈ ಗೌರಿ-ಗಣೇಶನ ಹಬ್ಬದಾಗ್ ಡಿಕೆಶಿ ಮನ್ಯಾಗ ಕಡ್ಬು -ಉಂಡಿ ತಿನ್ದಂಗ್ ಮಾಡಿಟ್ಟಾರ್ ಈ ಐಟಿಯವ್ರು......

"ಅವ್ರ ಕೊಡಾಕ ಹತ್ಯಾರಲ್ಲ ಉಂಡಿ-ಕಡ್ಬು, ಅವ್ನ ತಿಂದ್ರ ಸಾಕಾಗೇತಿ ಈ ಡಿಕೆಶಿಗೆ".  ಅವಂದ್ ಬಿಡ್ಪಾ..., "ಎಲ್ಲಿಗೆ ಬಂತ್ಪಾ ಪ್ರವಾಹದ ಪರಿಹಾರ"...? "ಈ ಪ್ರಧಾನ ಮಂತ್ರಿ ಕಷ್ಟದೊಳ್ಗ ಇರೋ ಜನ್ರನ್ ಕೈ ಹಿಡಿತ್ಯಾರೋ ...?ಹಂಗ್ ನಡೋ ನೀರಾಗ್ ಕೈ ಬಿಡ್ತಾರೋ".....!

"ಏ ಬರ್ತನಂತ್ ಹೇಳ್ಯಾರಲ್ರೀ ಪ್ರಧಾನಮಂತ್ರಿಗಳೂ .... ಏಳ್ನೆ ತಾರೀಖಿಗೆ ರಾಜ್ಯಕ್ಕ ಬಂದು.. ಪ್ರವಾಹದಿಂದ ಹಾನಿ ಆಗಿರೋ ಪ್ರದೇಶಗಳ್ನ ನೋಡ್ಕೊಂಡು, ಮುಂದ್ ಎಷ್ಟ ಪರಿಹಾರ ಕೊಡಬೇಕು ಅನ್ನೋದನ್ ವಿಚಾರಾ ಮಾಡಿ ಹೇಳತಾರ್ ಅಲ್ಲಿಮಟ ತಡ್ಕಾಬೇಕ್ರೀ"!....

"ಹೆಂಗ್ ತಡ್ಕೋಳ್ಳತಾರೋ ತಮ್ಮಾ"..?" ಇಲ್ಲಿಮಟಾ ಸಾಲಿಮನ್ಯಾಗ್, ಕಂಡ್ ಕಂಡವ್ರ ಮನಿ-ಮಠದಾಗ ಇರೋಜನ ಎಷ್ಟಂತ್ ಮಂದಿಗೆ ಸರ್ಕಾರಕ್ಕ ಭಾರ ಆಗಿರ್ತಾರ ಹೇಳೂ"..? "ಅವ್ರಿಗೆ ತಮ್ಮ ಬದ್ಕು ಕಟಗ್ಯಾಬೇಕಂತ್ ಕನ್ಸ್ ಇರೋದಿಲ್ಲ ಅಂತಿಯೇನು!. ಇದ್ದ ಇರೈತಿ". "ರಾಜ್ಯ ಸರ್ಕಾರದವ್ರ ಹತ್ರಾ ಜನ್ರ ಕಳ್ಕೊಂಡಿರೋ ಮನಿ-ಮಠಾ ಕಟ್ಟಿಸಿಕೊಡೋವಷ್ಟು ರೊಕ್ಕಾ ಇರೋದಿಲ್ಲ"". "ಕೇಂದ್ರ ಸರ್ಕಾರದಾಗ ಹೆಚ್ಗಿ ರೊಕ್ಕಾ ಇರ್ತಾವು"!. "ಕೇಂದ್ರ ಸರ್ಕಾರದವ್ರು ಮನಸ್ಸ ಮಾಡಿ ರಾಜ್ಯಕ್ಕ ಸ್ವಲ್ಪ ಹೆಚ್ಗಿ ರೊಕ್ಕಾ ಕೊಟ್ರ, ಜನ್ರು ತಮ್ಮ ಕೈಯಿಂದಾ ಸ್ವಲ್ಪ ರೊಕ್ಕಾ ಹಾಕ್ಕೋಂಡು ಬಿದ್ದಿರೋ ಮನಿ-ಮಠಾನ ಕಟಿಗೊಳ್ಳತಾರ್!. 

ಅಲ್ಲಾ, ಈ ಮೋದಿ ಸಾಹೇಬ್ರು ಚುನಾವಣೆ ಸಂದರ್ಭದಾಗ ವಾರದಾಗ ನಾಲ್ಕ ಸರತಿ ರಾಜ್ಯಕ್ಕ ಬಂದು "ಬಾಯಿಯೋ ಅವ್ರ ಬೆಹನೋ" "ನೀವು ಕಮಲಕ್ಕ ಹೋಟಹಾಕಬೇಕು, ನೀವು ಕಟ್ಟೋ ತೆರಿಗೆ ಹಣಾನ ನಿಮ್ಗ ಖರ್ಚಮಾಡತೇವಿ. ಕರ್ನಾಟಕಾನ ಅಮೇರಿಕಾ ಮಾಡತೇವಿ. ಅದು ಮಾಡ್ತವಿ, ಇದು ಮಾಡ್ತವಿ ಅಂತ್ ಕೈಬೀಸಿ, ಗಾಳ್ಯಾಗ ಕೈಯಾಡ್ಸಿ ಜೋರಾಗಿ ಮಾತಾಡಿಹೊಕ್ಕಿದ್ದ ಆಸಾಮಿ ಇಲ್ಲೆ ಪ್ರವಾಹದಿಂದ ಜನಾ ಸತ್ರು ಸತಗಿ ತಿರುಗಿ ನೋಡಲಿಲ್ಲದಂಗ್ ಅದಾರ"!. "ಇವ್ರಿಗೆ ವಿದೇಶಾ ಸುತ್ತಾಕ ಟಾಯಿಮ್ ಇರತೈತಿ.! ಕಷ್ಟದಾಗ ಇರೋ ಜನ್ರ ಕಷ್ಟ ನೋಡಾಕ ಇವ್ರಿಗೆ ವೇಳ್ಯಾ ಇರೋಂಗಿಲ್ಲಾ ಅಂದ್ರ ಹೆಂಗ್ಯರೀ..?.

"ಈಗೇನಿದ್ರು ಯುದ್ದದಮಾತ ಹೊಂಟಾವೋ.... ಅವಾಯಾವೋನು ಪಾಕಿಸ್ಥಾನಿ ಪ್ರಧಾನಿ ತನ್ನ ಹತ್ರಾ ಪರಮಾಣು ಬಾಂಬ್ ಅದಾವು ಅಂತ್ ಹೇಳ್ಕಿ ಕೊಟ್ಟಾನ. ಬಾಂಬ್ ಇದ್ರ ತಣ್ಣಗ ಅವನ್ ಇಟಗೊಂಡು ಸುಮ್ನ ಕುತ್ಕಾಬೇಕು."..!. "ಅದ್ನ ಬಿಟ್ಟ ಯಾರಾರ ಅವ್ನ ತಂಟಿಗೆ ಹೋದ್ರ ಸುಮ್ನ ಕುಂದ್ರದಿಲ್ಲ ಅಂತ್ ಹೇಳ್ಯಾನ". "ಮೊದ್ಲ ಯುದ್ದಕ್ಕ ಅಂದ್ರ ಒಂದ್ ಕೈ ಮುಂದ ಇರೋ ನಮ್ಮ ಪ್ರಧಾನ ಮಂತ್ರಿಗಳು, ರಕ್ಷಣಾ ಮಂತ್ರಿಗಳು ನಾವು ಯಾವ್ದುಕ್ಕೂ ಸಿದ್ದ ಅಂತ್ ತಿರಗಿ ಹೇಳಕಿ ನೀಡ್ಯಾರ"!. ಇಲ್ಲೆ ಜನ ನೋಡಿದ್ರ "ನಾವು ಕಷ್ಟದಾಗ ಅದೇವಿ ನಮ್ಮನ್ನ ಕಾಪಾಡ್ರೋ" ಅಂತ್ ಹೊಯ್ಯಕಳ್ಳಾಕ ಹತ್ಯಾರ್.?

"ಯುದ್ದಾ ಮಾಡ್ತಾರಂದ್ರ ಇದ್ರಿಂದಾ ಲಾಭಾ ಯಾರಿಗೇ ಹೇಳ್ರೀ"..?

ಲಾಭಾ ಯಾರ್ಗೆ ಅಂದ್ರ...!ಮತ್ಯಾರಗೋ. ಯುದ್ದವಿಮಾನ, ಈ ಬಂದೂಕು, ಟ್ಯಾಂಕ್ ಮಾರ್ತಾರಲ್ಲ ಅವ್ರೀಗೆನ ಲಾಭ?. "ಯುದ್ದದಿಂದ ಅವ್ರಕಡಿಗೆ ಒಂದಿಷ್ಟ ಜನಾ ಸಾಯತಾರ್, ನಮ್ಮಕಡಿಗೆ ಒಂದಿಷ್ಟ ಜನಾ ಸಾಯತಾರ್". "ಈ ಹಿಂದ್ ಎಷ್ಟ ಯುದ್ದಾ ಆಗ್ಯಾವು"?. ಯುದ್ದದಿಂದಾ ಯಾರ್ಗೂ ಪ್ರಯೋಜನ್ನಾ ಆಗಂಗಿಲ್ಲ....?.

"ಯುದ್ದದ ಮಾತು ಅತ್ಲಾಗಿಡೂ...ಅಲ್ಲೋ ಇಲ್ಲೆ ನಮ್ಮ ಜನಾ ಕೂಳು... ಕೂಳು... ಅನ್ನಾಕ ಹತ್ಯಾರ್" ಪ್ರಧಾನ ಮಂತ್ರಿಗಳು ರಾಜ್ಯಕ್ಕ ಬರಾಕ ವಲ್ರೂ."..

"ಅಲ್ರೀ ಅವ್ರು ಈ ದೇಶಕ್ಕ ಪ್ರಧಾನ ಮಂತ್ರಿ, ಅವ್ರೂ ಒಂದಲ್ಲಾ ....ಎರ್ಡಲ್ಲಾ ನೋರಾಎಂಟ್ ಕೆಲ್ಸಾ ಇರ್ತಾವು"...?. ಅವ್ರ ಟೋರ್ ಮೊದ್ಲ ಪಿಕ್ಸ್ ಆಗಿರತೈತಿ!. "ಬುಕ್ ಆಗಿರೋ ಟೂರ್ನ ಒಮ್ಮೆಕ ಹಂಗ್ ರದ್ದಮಾಡಾಕ ಬರೋದಿಲ್ಲಾ"?. ಈಗ ಅವ್ರು ಲಗೂನ ಬರಾಕ ಸಾಧ್ಯಾನು ಇಲ್ಲಾ" ...!. "ಯಾಕಂದ್ರ ಹತ್ರದಾಗ ರಾಜ್ಯದಾಗ ಯಾವ ಚುನಾವಣೆನೂ ಇಲ್ಲಾ"!. ಮೇಲಾಗಿ "ರಾಜ್ಯದಾಗ ಅವ್ರದ್ದ ಸರ್ಕಾರ ಐತಿ.... ಇಲ್ಗೆ ಬಂದ್ ಅವ್ರು ಯಾರ್ನ ಟೀಕಾ ಮಾಡಬೇಕು"?. "ಮೇಲಾಗಿ ದೇಶದ ಆರ್ಥಿಕ ಸ್ಥಿತಿನೂ ಬರೋಬ್ಬರಿ ಇಲ್ಲಾ"? , ಮ್ಯಾಲ "ಈ ಮೌನಿಬಾಬಾ ಮೌನಾ ಮುರ್ದು ಪ್ರಧಾನ ಮಂತ್ರಿ ಮೋದಿಯವ್ರು ದ್ವೇಶದ ರಾಜಕಾರ್ಣ ಮಾಡೋದ ಬಿಟ್ಟು ಪಾಥಾಳಾ ಕಂಡಿರೋ ದೇಶದ ಆರ್ಥಿಕ ಸ್ಥಿತಿನ ಮೊದ್ಲ ಸರಿಮಾಡ್ಲಿ ಅಂತ್ ಚುಚ್ಚಾರ"!.

ಹೌದು... ಈ ಮೌನಿ ಬಾಬಾ ಯಾರೋ...?

ಏ... ಅಷ್ಟು ಗೊತ್ತಿಲ್ಲೇನ್ರೀ ನಿಮ್ಗ...! ಸಿಂಗ್ ಸಾಹೇಬರು.. ಮನಮೋಹನ್ ಸಿಂಗ್ ಅವ್ರು!. 

ಓ ಅವ್ರ,  "ಅವ್ರು ಯಾವಾಗ ಮೌನ ವೃತಾ ಮುರದ್ರೋ"...? "ಯಾವಾಗ ನೋಡಿದ್ರೂ ಬಾಯಿಗೆ ಬೀಗಾ ಹಾಕ್ಕೋಂಡು ಇರ್ತಿದ್ದ ಆಸಾಮಿ ಯಾಕೋ ಬಾಯಿ ಬಿಟ್ಟಾರಲ್ಲೋ ಎಪ್ಪಾ"..! "ಅಂತು ಮೋದಿ ಸಾಹೇಬ್ರ ತಪ್ಪಗಳನ್ನ ಈ ಸಿಂಗ್ ಸಾಹೇಬ್ರು ಎತ್ತಿ ತೋರ್ಸಾರಲ್ಲ...! ಆತು ಬೀಡು. ಈಗರ್ ಮೋದಿ ಸಾಹೇಬ್ರು, ಈರೇಣಮ್ಮ ದೇಶದ ಕಡಿಗೆ ಸ್ವಲ್ಪರ ಗಮ್ನಾ ಕೊಡ್ಲಿ.".."ಪದೇ ಪದೆ ಸುಳ್ಳನ್ನು ಹತ್ತಸತ ಹೇಳ್ತಾ ಕುತಗಂಡ್ರ, ಜನಾ 'ಏನ ಸುಳ್ಳಬರುಕ ಅದಾನ ಈ ಮನುಷಾ ಅಂತ್' ಬೇಸ್ರಾಮಾಡಿಕೊಳ್ಳತಾರ ಅಂತ್ ಅವ್ರು ಬಂದಿರಾಕಿಲ್ಲ!.  

"ಈಗ ಹೆಂಗೂ ಏಳ್ನೆ ತಾರೀಕು ರಾಜ್ಯಕ್ಕ ಬರ್ತಾರಂತಲ್ಲ! ಬರ್ಲೀ ಬಿಡ್ರೀ".. "ಅವ್ರ ಬಂದ್ ಹೊತ್ತಿನ್ಯಾಗ್ ಎಲ್ಲಾನೂ ನೊಡ್ಕೊಂಡು, ಅವ್ರ ಮನ್ಸ್ಗಿಇಲ್ಲಿ ಸ್ಥಿತಿ ಗೊತ್ತಾದ್ರ ಅವ್ರು ಹೆಚ್ಗಿ ಪರಿಹಾರ ಕೊಟ್ಟ್ರು ಕೊಡಬಹುದು"!.. ಸದ್ಯಕ್ಕ ನನ್ಗಂತು ಗೊತ್ತಿಲ್ಲಾ. "ಗಣಪ್ಪನ್ನ... ಅವ್ರ ಅವ್ವನ್ನ... ಕಳ್ಸಬೇಕು, ಖರ್ಚಿಕಾಯಿ ಕರಾಕ  ಒಳ್ಳೆಣ್ಣಿ ಇಲ್ಲಾ" ಅಂತ್ ನಮ್ಮ ಮನಿಯಾಕಿ ನಿನ್ನೇನ ಹೇಳಿದ್ಲು... ರಾತ್ರಿ ತಡಾ ಆಗಿ ಹೋಗಿದ್ದ್ರಿಂದ್ ಶೆಟ್ರ ಕಿರಾಣಿ ಅಂಗ್ಡಿ ಬಾಗ್ಲಾ ಹಾಕಿತ್ತು. ಎಣ್ಣಿ ತಗೊಂಡ ಹೋಗಾಕ್ ಆಗಲಿಲ್ಲ... ಕಾಕಾರ್, ಹೊತ್ತಾತು ನಿಮ್ಮ ಜೊತಿಗೆ ಮಾತಾಡ್ತಾ .... ಮಾತಾಡ್ತಾ ಹೊತ್ತಹೋಗಿದ್ದ ಗೊತ್ತಾಗಲಿಲ್ಲ, ಬರ್ತನೀ ಕಾಕಾರ ಎನ್ನುತ್ತಾ ಬಸ್ಯಾ ಶೆಟ್ರ ಅಂಗ್ಡಿ ಕಡೆಗೆ ಓಡಿದಾ....