ನರೇಂದ್ರ ಮೋದಿ-ಸಿಂಧು ಭೇಟಿ: ಶುಭಕೋರಿದ ಪ್ರಧಾನಿ

ನರೇಂದ್ರ ಮೋದಿ-ಸಿಂಧು ಭೇಟಿ:  ಶುಭಕೋರಿದ ಪ್ರಧಾನಿ

ದೆಹಲಿ: ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಬಂಗಾರದ ಸಾಧನೆಯನ್ನು ಮಾಡಿದ ಪಿ ವಿ ಸಿಂಧು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಅವರ ನಿವಾಸದಲ್ಲಿ ಭೇಟಿ ಮಾಡಿದರು. ಈ ವೇಳೆ ಕ್ರೀಡಾರಂಗದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿರುವ ಸಿಂಧು ಅವರಿಗೆ ಸಿಂಧು ದೇಶದ ಹೆಮ್ಮೆ ಎಂದು ಪ್ರಧಾನಿ ಮೋದಿ ಶುಭಕೋರಿದರು.

ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಳೆದೆರಡು ವರ್ಷ ರಜತ ಪದಕಕ್ಕೆ ತೃಪ್ತಿಪಟ್ಟಿದ್ದ ಸಿಂಧು, ಈ ಬಾರಿ ಫೈನಲ್ನಲ್ಲಿ ಜಪಾನ್ನ ನಜೊಮಿ ಒಕುಹರಾ ವಿರುದ್ಧ ಸುಲಭ ಜಯ ದಾಖಲಿಸುವ ಮೂಲಕ 3ನೇ ಪ್ರಯತ್ನದಲ್ಲಿ ಸ್ವರ್ಣ ಪದಕ ಒಲಿಸಿಕೊಂಡಿದ್ದರು. ಸಿಂಧು ಭೇಟಿಯ ಬಳಿಕ ಪ್ರಧಾನಿ ಮೋದಿ, ‘ಭಾರತದ ಹೆಮ್ಮೆ, ತವರಿಗೆ ಸ್ವರ್ಣ ಮತ್ತು ಭಾರಿ ಘನತೆ ತಂದ ಚಾಂಪಿಯನ್. ಸಿಂಧು ನಿಮ್ಮನ್ನು ಭೇಟಿಯಾಗಿದ್ದು ಖುಷಿ ತಂದಿದೆ. ಅಭಿನಂದನೆಗಳು ಮತ್ತು ಭವಿಷ್ಯದ ಟೂರ್ನಿಗಳಿಗೆ ಶುಭಹಾರೈಕೆಗಳು  ಎಂದು ಟ್ವೀಟಿಸಿದ್ದಾರೆ.  

ಸಿಂಧು ಜತೆಗೆ ತಂದೆ ಪಿವಿ ರಮಣ, ಕೋಚ್ಗಳಾದ ಪುಲ್ಲೇಲಾ ಗೋಪಿಚಂದ್, ಕಿಮ್ ಜಿ-ಹ್ಯೂನ್, ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ಹಿಮಾಂತ್ ಬಿಸ್ವ ಸರ್ಮ ಹಾಜರಿದ್ದರು. ಸಿಂಧು ತಂದೆ ಪಿವಿ ರಮಣ 1986ರ ಏಷ್ಯನ್ ಗೇಮ್್ಸ ಕಂಚು ವಿಜೇತ ಭಾರತ ವಾಲಿಬಾಲ್ ತಂಡದ ಸದಸ್ಯರೂ ಆಗಿದ್ದಾರೆ.