ಎಎಪಿ ಶಾಸಕ ಎನ್ ಡಿ ಶರ್ಮಾ ರಾಜೀನಾಮೆ

ಎಎಪಿ ಶಾಸಕ ಎನ್ ಡಿ ಶರ್ಮಾ ರಾಜೀನಾಮೆ

ದೆಹಲಿ: ವಿಧಾನಸಭಾ ಚುನಾವಣೆಗೆ ಮುನ್ನ ಬದಾರಪುರ್ ದ ಎಎಪಿ ಶಾಸಕ ಎನ್ ಡಿ ಶರ್ಮಾ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅಭ್ಯರ್ಥಿಗಳಿಗೆ ಟಿಕೆಟ್ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು 20 ಕೋಟಿ ರೂಪಾಯಿ ಪಡೆದು ಭೂ ಮಾಫಿಯಾಗೆ ಚುನಾವಣಾ ಟಿಕೆಟ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಕೇಜ್ರಿವಾಲ್ ಅವರು ಪಕ್ಷದ ಶಾಸಕರಿಂದ ಹಣ ಸಂಗ್ರಹಿಸುತ್ತಿದ್ದಾರೆ. ನನಗೂ 10 ಕೋಟಿ ರೂ. ನೀಡುವಂತೆ ಕೇಳಿದ್ದರು. ಆದರೆ ನಾನು ಪ್ರಾಮಾಣಿಕನಾಗಿದ್ದು, ನನ್ನ ಬಳಿ ಅಷ್ಟೊಂದು ಹಣ ಇಲ್ಲ. ಹೀಗಾಗಿ ನಾನು ಪಕ್ಷ ತೊರೆದಿದ್ದೇನೆ ಎಂದು ಬದಾರಪುರ್ ಶಾಸಕ ಹೇಳಿದ್ದಾರೆ.

ನಾನು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ನಾವು ಶುದ್ಧ ರಾಜಕಾರಣಕ್ಕಾಗಿ ಎಎಪಿಗೆ ಸೇರಿಕೊಂಡೆವು. ಆದರೆ ಎಎಪಿ ಮತ್ತು ಇತರ ರಾಜಕೀಯ ಪಕ್ಷಗಳ ನಡುವಿನ ವ್ಯತ್ಯಾಸವೇನು ಎಂದು ಪ್ರಶ್ನಿಸಿದ್ದಾರೆ. ಹಾಲಿ ಶಾಸಕ ಶರ್ಮಾ ಅವರಿಗೆ ಆಪ್ ಟಿಕೆಟ್ ಕೈತಪ್ಪುವುದು ಖಚಿತವಾದ ಹಿನ್ನಲೆಯಲ್ಲಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.