ಹಸು ಸಗಣಿಯ ಮೇಲೆ ಹೆಚ್ಚಿನ ಸಂಶೋಧನೆಗಳು ನಡೆಯಲಿ:ಗಿರಿರಾಜ್ ಸಿಂಗ್

ಹಸು ಸಗಣಿಯ ಮೇಲೆ ಹೆಚ್ಚಿನ ಸಂಶೋಧನೆಗಳು ನಡೆಯಲಿ:ಗಿರಿರಾಜ್ ಸಿಂಗ್

ದೆಹಲಿ : ಹಸು ಸಗಣಿಯ ಕುರಿತು ಸಂಶೋಧನೆ ನಡೆಸುವಂತೆ ಕೇಂದ್ರ ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಗಿರಿರಾಜ್ ಸಿಂಗ್ ವಿಜ್ಞಾನಿಗಳಿಗೆ ಸಲಹೆ ನೀಡಿದ್ದಾರೆ.

ಪಶುವೈದ್ಯ ಅಧಿಕಾರಿಗಳ ಕಾರ್ಯಾಗಾರದಲ್ಲಿ ಮಾತನಾಡಿದ ಅವರು,ಈ ವೇಳೆ ಹಸು ಹಾಲು ಕೊಡುವುದು ನಿಲ್ಲಿಸಿದ ಬಳಿಕವೂ ರೈತರಿಗೆ ನೆರವಾಗಬೇಕು. ರೈತರಿಗೆ ಹಸು ಆರ್ಥಿಕವಾಗಿ ಲಾಭದಾಯಕ ಆಗಬೇಕೆಂದರೆ ಸಗಣಿಯ ಕುರಿತು ಹೆಚ್ಚಿನ ಸಂಶೋಧನೆಗಳು ನಡೆಯಬೇಕು. ಆಗ ಹಸು ರೈತರಿಗೆ ಇನ್ನಷ್ಟು ಆರ್ಥಿಕವಾಗಿ ಲಾಭದಾಯಕವಾಗಲಿದೆ ಎಂದು ಹೇಳಿದರು.

ಹಾಲು ನೀಡುವುದು ನಿಲ್ಲಿಸಿದ ಬಳಿಕ ಗೊಡ್ಡು ಹಸುಗಳನ್ನು ಹೊರಹಾಕಲಾಗುತ್ತದೆ. ಮುಂದೆ ಹೀಗಾಗದಂತೆ ತಡೆಯಲು ಹಸು ಸಗಣಿಯ ಕುರಿತು ಸಂಶೋಧನೆ ನಡೆಸಬೇಕಿದೆ. ಈ ಸಂಶೋಧನೆಯಿಂದ ರೈತರು ಹಸುಗಳ ಸಗಣಿ ಮತ್ತು ಮೂತ್ರದಿಂದ ಹಣ ಸಂಪಾದನೆ ಮಾಡಲು ಸಾಧ್ಯವಾಗಬೇಕು. ಆಗ ಯಾರು ಗೊಡ್ಡು ಹಸುಗಳನ್ನು ಹೊರಹಾಕುವುದಿಲ್ಲ ಎಂದು ಗಿರಿರಾಜ್​​​ ಸಿಂಗ್​​ ಅಭಿಪ್ರಾಯಪಟ್ಟರು.

ಹಾಲು, ಸಗಣಿ ಮತ್ತು ಗೋಮೂತ್ರದ ಮೇಲೆ ಸಂಶೋಧನೆಗಳು ನಡೆದರೆ ದೇಶದ ಆರ್ಥಿಕತೆಗೆ ದೊಡ್ಡಮಟ್ಟದ ಕೊಡುಗೆ ಸಿಗುತ್ತದೆ. ಇದರಿಂದ ದೇಶದ ರೈತರು ಪ್ರಗತಿ ಹೊಂದುತ್ತಾರೆ ಎಂದು ​ಹೇಳಿದರು.

2025ರ ವೇಳೆಗೆ 10 ಕೋಟಿ ವೀರ್ಯಾಣುಗಳನ್ನು ಪೂರೈಕೆ ಮಾಡಲು ಉದ್ದೇಶಿಸಲಾಗಿದೆ. ಅದು 10 ಕೋಟಿ ಹಸುಗಳ ಹುಟ್ಟಿಗೆ ಕಾರಣವಾಗಲಿದೆ. ಈ ಮೂಲಕ ನಾವು ದೇಶದಲ್ಲಿ ಹಸುಗಳ ಉತ್ಪಾದಿಸುವ ಕಾರ್ಖಾನೆ ನಿರ್ಮಿಸಲಿದ್ದೇವೆ. ದೇಶಾದ್ಯಂತ ಅಧಿಕ ಸಂಖ್ಯೆಯಲ್ಲಿ ಹಸುಗಳ ಉತ್ಪಾದನೆಯಾಗಲಿದೆ. ಇದಲ್ಲದೆ ಹಾಲು ಉತ್ಪಾದನೆಯಲ್ಲೂ ಗಣನೀಯ ಸಾಧನೆಯಾಗಲಿದೆ. ಹೊಸ ತಂತ್ರಜ್ಞಾನದ ಮೂಲಕ ಹಸುಗಳು 20 ಲೀಟರ್ ವರೆಗೆ ಹಾಲು ಉತ್ಪಾದನೆ ಮಾಡಲಿವೆ.ಇದು ಸಾಧ್ಯವಾದರೆ ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ ದೊಡ್ಡ ಕ್ರಾಂತಿಯಾಗಲಿದೆ  ಎಂದು ಗಿರಿರಾಜ್​​ ಸಿಂಗ್​​ ಹೇಳಿದರು