50 ರೈಲು ಮಾರ್ಗಗಳ ಖಾಸಗೀಕರಣಕ್ಕೆ ಮೋದಿ ಸರ್ಕಾರ ಸಿದ್ಧತೆ : ಪ್ರಯಾಣದ ದರ ನಿಗದಿ ಹಕ್ಕು ಕೂಡ ಅವರಿಗೇ 

50 ರೈಲು ಮಾರ್ಗಗಳ ಖಾಸಗೀಕರಣಕ್ಕೆ ಮೋದಿ ಸರ್ಕಾರ ಸಿದ್ಧತೆ : ಪ್ರಯಾಣದ ದರ ನಿಗದಿ ಹಕ್ಕು ಕೂಡ ಅವರಿಗೇ 

ರೈಲ್ವೇ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಖಾಸಗಿಯವರಿಗೆ ಆಧುನಿಕ ರೈಲುಗಳನ್ನು ಓಡಿಸಲು ಇತ್ತೀಚಿನ ರೈಲ್ವೇ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೇಶದ ಅತಿದೊಡ್ಡ ಉದ್ಯೋಗದಾತ ವ್ಯವಸ್ಥೆಯಾಗಿರುವ ಭಾರತೀಯ ರೈಲ್ವೇ ಮುಂಬರುವ ದಿನಗಳಲ್ಲಿ 50 ಮಾರ್ಗಗಳನ್ನು ಖಾಸಗಿಯವರಿಗೆ ಒಪ್ಪಿಸಲು ಮೋದಿ ಸರ್ಕಾರ ಸಿದ್ಧವಾಗಿದೆ. ಶುಕ್ರವಾರ ನಡೆದ ರೈಲ್ವೇ ಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ.

 ರೈಲ್ವೇ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಆಧುನಿಕ ರೈಲುಗಳನ್ನು ಓಡಿಸಲು ಖಾಸಗಿಯವರಿಗೆ ಅನುಮತಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಯೋಜನೆಯ ಮೊದಲ ಹಂತದಲ್ಲಿ ದೆಹಲಿ-ಮುಂಬೈ, ದೆಹಲಿ-ಲಕ್ನೋ, ದೆಹಲಿ-ಜಮ್ಮು. ದೆಹಲಿ-ಹೌರಾ, ಸಿಕಂದರಾಬಾದ್-ಹೈದರಾಬಾದ್, ಸಿಕಂದರಾಬಾದ್ –ದೆಹಲಿ, ದೆಹಲಿ-ಚೆನ್ನೈ, ಮುಂಬೈ-ಚೆನ್ನೈ, ಹೌರಾ-ಚೆನ್ನೈ ಮತ್ತು ಹೌರಾ-ಮುಂಬೈನಂಥ ದೀರ್ಘಾವಧಿ ಪ್ರಯಾಣದ ಮಾರ್ಗಗಳನ್ನು ಒಪ್ಪಿಸಲು ತೀರ್ಮಾನಿಸಲಾಗಿದೆ. 

ಯೋಜನೆಯ ಯಶಸ್ಸು ಆಧರಿಸಿ ಇನ್ನಷ್ಟು ಮಾರ್ಗಗಳನ್ನು ಖಾಸಗೀಕರಣ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಮಾರ್ಗಗಳಲ್ಲಿ ಪ್ರಯಾಣ ದರ ನಿಗದಿಪಡಿಸುವ ಹಕ್ಕನ್ನೂ ಖಾಸಗೀ ಮಂದಿಗೆ ನೀಡಲು ಮೋದಿ ಸರ್ಕಾರ ತತ್ವಶಃ ಒಪ್ಪಿಗೆ ನೀಡಿದೆ.