ಗೂರ್ಖಾ ,ಕೋಚ್ ರಾಜ್ ಬಾಂಗ್ ಶಿ ಮತ್ತು ಬೋಡೋ ಸಮುದಾಯದ ಹಕ್ಕುಗಳ ಬಗ್ಗೆ ಮೋದಿ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆ ಮೌನ

ಗೂರ್ಖಾ ,ಕೋಚ್ ರಾಜ್ ಬಾಂಗ್ ಶಿ ಮತ್ತು ಬೋಡೋ ಸಮುದಾಯದ ಹಕ್ಕುಗಳ ಬಗ್ಗೆ ಮೋದಿ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆ ಮೌನ

ಗೋ ರಕ್ಷಣೆಯ ಬಗ್ಗೆ ಕಾಳಜಿ ವಹಿಸುವಂತೆ ತೋರಿಸಿಕೊಳ್ಳುವ ಬಿಜೆಪಿ, ನಿಜವಾದ ಗೋರಕ್ಷಕರಾದ ಗೂರ್ಖಾ ಸಮುದಾಯದ ಬಗ್ಗೆ ತಲೆಕೆಡಿಸಿಕೊಳ್ಳದ ಕಾರಣ  ಈ ಸಮುದಾಯ ಬಹಳ ಕೆಳಸ್ತರದಲ್ಲಿದೆ.

ಅಸ್ಸಾಂ ಪೌರತ್ವ ತಿದ್ದುಪಡಿ ಮಸೂದೆ ಒಂದು ಬಗೆಹರಿಯದ ಸಮಸ್ಯೆ ,ಇದು ವಲಸೆ ಮತ್ತು ಪೌರತ್ವ ಸಮಸ್ಯೆಗಳಿಗೆ ಉತ್ತರವಲ್ಲ ಎಂದು  ಗೂರ್ಖಾ ವಿದ್ಯಾರ್ಥಿ ಸಂಘದ ಕಾರ್ಯಕರ್ತರು ತಮ್ಮ ಹೆಸರನ್ನು ಅಂತಿಮ ರಾಷ್ಟ್ರೀಯ ನಾಗರಿಕರ ನೋಂದಣಿ(ಎನ್ ಆರ್ ಸಿ) ಯಿಂದ ಹೊರಗಿಡುವುದನ್ನು ವಿರೋಧಿಸಿ ,ಗುವಾಹಟಿಯಲ್ಲಿ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಅಸ್ಸಾಂನ ರಾಜಕೀಯ ಈಗ ‘ಬಿಸಿ ಆಲೂಗಡ್ಡೆ’ಯಾಗಿ ಪರಿಣಾಮಿಸಿದೆ. ರಾಷ್ಟ್ರಿಯ ನಾಗರಿಕರ ನೋಂದಣಿಯನ್ನು ತಿರಸ್ಕರಿಸುವ ಆತುರದಲ್ಲಿ ,ಬಿಜೆಪಿ ಈಗ ಬಹುಮಟ್ಟಿಗೆ ಅಸಾಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆಯನ್ನು ಹೊಸ “ಜಾದೂ ಮಾತ್ರೆ’ಯಾಗಿ ಬಳಸಿಕೊಂಡು ವಲಸಿಗರನ್ನ  ಹೊರಹಾಕುತ್ತಿದೆ .

ಆದರೆ ಮಸೂದೆಯಲ್ಲಿ ಎನ್ ಆರ್ ಸಿ ಸಮಸ್ಯೆಯ ನಿರ್ವಹಣೆಯಲ್ಲಿ ಅಂತರ್ಗತವಾಗಿರುವ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾದ ಹಲವು ಅಂಶಗಳಿವೆ,ಈ ಮಸೂದೆ ಮತ್ತೊಂದು ಟೊಳ್ಳಾದ ಭರವಸೆ ಎಂದು ನಿರೂಪಿಸುತ್ತಿದೆ. ಅಸ್ಸಾಂನ ಅಂತಿಮ ಎನ್ ಆರ್ ಸಿ ಯಿಂದ ಹೊರಗುಳಿದ ಜನರಿಂದ ಬಿಜೆಪಿ ಎದುರಿಸುತ್ತಿರುವ ಒತ್ತಡವನ್ನು ನಿವಾರಿಸುವ ಭರವಸೆಯೊಂದಿಗೆ ಗೃಹ ಸಚಿವ ಅಮಿತ್ ಶಾ ಅವರು ಪೌರತ್ವ ತಿದ್ದುಪಡಿ ಮಸೂದೆ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿದ್ದಾರೆ.

ಅಫ್ಘಾನಿಸ್ತಾನ,ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂಗಳು ,ಸಿಖ್ಖರು ಬೌದ್ಧರು ,ಜೈನರು,ಪಾರ್ಸಿಗಳು ಮತ್ತು ಕ್ರೈಸ್ತ  “ನಿರಾಶ್ರಿತರು”ಈ ಬಗ್ಗೆ ಚಿಂತೆ ಮಾಡಲು ಏನೂ ಇಲ್ಲ ಎಂದು ಶಾ ಬಹಿರಂಗವಾಗಿ ಹೇಳಿದ್ದಾರೆ.ನರೇಂದ್ರ ಮೋದಿ ಸರ್ಕಾರವೂ ಎನ್ ಆರ್ ಸಿ ನಿಯಮವನ್ನು ಉಳಿದ ದೇಶಗಳಿಗೆ ವಿಸ್ತರಿಸಲು ಯೋಜಿಸಿದೆ.ಆದರೆ ಪೌರತ್ವ ತಿದ್ದುಪಡಿ ಮಸೂದೆ ತಮ್ಮ ಗುರುತಿನ ಪರಿಶೀಲನಾ ದಾಖಲೆಗಳಲ್ಲಿನ ಸಣ್ಣ ದೋಷಗಳಿಂದಾಗಿ ಒಂದು ಲಕ್ಷಕ್ಕೂ ಹೆಚ್ಚು ಹೊರಗಿಡುವಿಕೆಗಳನ್ನು ಎದುರಿಸುತ್ತಿರುವ ಗೂರ್ಖಾ ಸಮುದಾಯದ ಹಕ್ಕುಗಳ ಬಗ್ಗೆ ಬಿಜೆಪಿ ಸರ್ಕಾರ ಮೌನವಹಿಸಿದೆ.

ಗೋ ರಕ್ಷಣೆಯ ಬಗ್ಗೆ ಕಾಳಜಿವಹಿಸುವಂತೆ ತೋರಿಸಿಕೊಳ್ಳುವ ಬಿಜೆಪಿ, ನಿಜವಾದ ಗೋರಕ್ಷಕರಾದ ಗೂರ್ಖಾ ಸಮುದಾಯದ ಬಗ್ಗೆ ತಲೆಕೆಡಿಸಿಕೊಳ್ಳದ ಕಾರಣ ಈ ಸಮುದಾಯ ಬಹಳ ಕೆಳಸ್ತರದಲ್ಲಿದೆ.ಅನಾದಿಕಾಲದಿಂದಲೂ ಅಸ್ಸಾಂನಲ್ಲಿ ವಾಸಿಸುತ್ತಿದ್ದ ಕೋಚ್ ರಾಜ್ ಬಾಂಗ್ಷಿ ಮತ್ತು ಬೋಡೋದಂಥ ಸ್ಥಳೀಯ ಬುಡಕಟ್ಟು ಜನಾಂಗದವರಿಗೆ ಇದೇ ರೀತಿಯ ಸಮಸ್ಯೆ ಕಾಡುತ್ತಿದೆ. ಆದರೆ ಈ ಸಮುದಾಯದವರನ್ನ ಅಂತಿಮ ಎನ್ ಆರ್ ಸಿ ಪಟ್ಟಿಯಿಂದ ಹೊರಗಿಡಲಾಗಿದೆ.

ಪೌರತ್ವ ತಿದ್ದುಪಡಿ ಮಸೂದೆಯ ನೇರ ಫಲಾನುಭವಿಗಳಲ್ಲಿ ,ರಾಜ್ಯದ ಗುರಿ ಸಾಧನೆ ಸಾಮರ್ಥದ ಬಗ್ಗೆ ಅಪನಂಬಿಕೆ ಬೆಳೆಯುತ್ತಿದೆ.ಮಸೂದೆಯಲ್ಲಿ ನಿಗದಿಪಡಿಸಿರುವ ಮಾರ್ಗಸೂಚಿಗಳು ಸ್ಪಷ್ಟವಾಗಿಲ್ಲ,ಮತ್ತು ತಜ್ಞರು ತಮ್ಮ ಪೌರತ್ವವನ್ನು ಸಾಬೀತುಪಡಿಸಲು ವ್ಯಕ್ತಿಗಳು ತಮ್ಮ ಮೂಲ ದೇಶವನ್ನು ಬಾಂಗ್ಲಾದೇಶ ಅಥವಾ ಪಾಕಿಸ್ತಾನ ಎಂದು ಸಾಬೀತುಪಡಿಸುವ ದಾಖಲೆಗಳು ಮತ್ತು ಭಾರತದಲ್ಲಿ ಅವರ ಪ್ರವೇಶದ  ವಿವರಗಳನ್ನು ಒಳಗೊಂಡಿರುವ ದಾಖಲೆಗಳು ಬೇಕಾಗಬಹುದು ಎಂದು ಹೇಳುತ್ತಾರೆ ,ಅನೇಕ ಬಡತನದ ಅಂಚಿನಲ್ಲಿರುವ ಕುಟುಂಬಗಳಿಗೆ ಈ ದಾಖಲೆಗಳನ್ನ ಸಂಗ್ರಹಿಸುವುದು ಎನ್ ಆರ್ ಸಿ ಗೆ ಅಗತ್ಯವಾದ ದಾಖಲೆ ಸಂಗ್ರಹಕ್ಕಿಂತ ಸವಾಲಿನ ಕೆಲಸವಾಗಿದೆ.ಈ ದಾಖಲೆಗಳನ್ನು ಪಡೆಯಲು ಸರ್ಕಾರಿ ಕಚೇರಿಗಳಲ್ಲಿ ಹೆಚ್ಚಿನ ಹಣವನ್ನು ನೀಡಬೇಕಾಗುತ್ತೆ ಹೊರತು ಬೇರೆ ಆಯ್ಕೆ ಇರುವುದಿಲ್ಲ.

ಸುಪ್ರೀಂ ಕೋರ್ಟ್ ಹಸ್ತಕ್ಷೇಪಕ್ಕೆ ಸಕಾಲ

ಈಗಿನ ಪ್ರಕ್ಷುಬ್ಧತೆಯ ಮಧ್ಯೆ 2013 ರಿಂದ ಎನ್ ಆರ್ ಸಿ ನಿಯಮವನ್ನು ಮೇಲ್ವಿಚಾರಣೆ ಮಾಡುತ್ತಿರುವ ಸುಪ್ರೀಂ ಕೋರ್ಟ್ ಈಗ ಮೌನವಹಿಸಿದೆ,ಈ ಸಂಬಂಧ ಅಸ್ಸಾಂನ ವಿವಿಧ ಸಮುದಾಯಗಳ ಬಿಕ್ಕಟ್ಟು ಬಗೆಹರಿಸಲು ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ವಹಿಸುವುದು  ಮುಖ್ಯವಾಗಿದೆ.

ಎನ್ ಆರ್ ಸಿ ಯನ್ನು ತಪ್ಪಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ಅಸ್ಸಾಂನ ಬಿಜೆಪಿ ಸರ್ಕಾರ ಸುಪ್ರೀಂ ಕೋರ್ಟ್ ನೇಮಕ ಮಾಡಿದ ಅಧಿಕಾರಿ ಪ್ರತೀಕ್ ಹಜೆಲಾ ಅವರನ್ನು ದೂಷಿಸುತ್ತಿದೆ , ಎಂಬ ಅಂಶವನ್ನು  ಉನ್ನತ ನ್ಯಾಯಾಲಯ ಗಂಭೀರವಾಗಿ ಗ್ರಹಿಸಬೇಕು. ಅಮಿತ್ ಷಾ ಅವರ ಇತ್ತೀಚಿನ ಭಾಷಣಗಳಲ್ಲಿನ ಕೋಮುವಾದಿ ಮಾತುಗಳನ್ನು ಸುಪ್ರೀಂಕೊರ್ಟ್  ಗಮನಿಸಬೇಕು ಮತ್ತು ಅಸಾಂವಿಧಾನಿಕ  ಮಸೂದೆ ಕಾನೂನು ಪುಸ್ತಕಗಳಲ್ಲಿ ಪ್ರವೇಶಿಸದಂತೆ ನೋಡಿಕೊಳ್ಳಬೇಕು.

ಭಾರತದಲ್ಲಿ ಪೌರತ್ವವನ್ನು ಧರ್ಮದ ಆಧಾರದ ಮೇಲೆ ಎಂದಿಗೂ ನೀಡಲಾಗಿಲ್ಲ ಮತ್ತು ಈ ಉದ್ದೇಶಿತ ಶಾಸನವು ಆ ಮೂಲಭೂತ ಜಾತ್ಯತೀತ ತತ್ವವನ್ನು ರದ್ದುಗೊಳಿಸುವ ಗುರಿಯನ್ನು ಹೊಂದಿದೆ.ಅಂತಿಮವಾಗಿ ಪೌರತ್ವ ತಿದ್ದುಪಡಿ ಮಸೂದೆಯು ಎನ್ ಆರ್ ಸಿ ಯನ್ನು ವಾಸ್ತವಿಕವಾಗಿ ಅನಗತ್ಯವಾಗಿಸುತ್ತದೆ ಎಂಬ ಅಂಶವನ್ನು ಸುಪ್ರೀಂ ಕೋರ್ಟ್ ತೀರ್ಮಾನಿಸಬೇಕು .

ಎನ್ ಆರ್ ಸಿ ಫಲಿತಾಂಶದ ಅನಾನುಕೂಲತೆ

ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ,ಎನ್ ಆರ್ ಸಿ ಯನ್ನು ನವೀಕರಿಸುವ ನಿಯಮವು ಅಸ್ಸಾಂ  ಜನರ ಐತಿಹಾಸಿಕವಾಗಿ ನಿರ್ಲಕ್ಷಿಸಲ್ಪಟ್ಟ ಬೇಡಿಕೆಗಳಿಗೆ ಪ್ರತಿಕ್ರಿಯಿಸುವ ಬದಲು ಕೋಮು ಪ್ರಚಾರದ ಸಾಧನವಾಯಿತು 2019 ರ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಬಿಜೆಪಿ ಎನ್ ಆರ್ ಸಿ ಸಮಸ್ಯೆಯನ್ನು ಕೈಗೆತ್ತಿಕೊಂಡಿತು. ಎನ್ ಆರ್ ಸಿಯ ಎರಡನೇ ಕರಡು ಜುಲೈ 2018ರಲ್ಲಿ ಬಿಡುಗಡೆಯಾದ ನಂತರ ಆಗ ಬಿಜೆಪಿ ಅಧ್ಯಕ್ಷರಾಗಿದ್ದ ಅಮಿತ್ ಶಾ,ಇಡೀ ನಿಯಮದ ಮನ್ನಣೆ ಪಡೆಯಲು ಸಮಯ ವ್ಯರ್ಥಮಾಡಲಿಲ್ಲ .

ನಂತರ ಅವರು ಹೊರಗಿಡಲ್ಪಟ್ಟವರನ್ನು ‘ಗೆದ್ದಲುಗಳು’ಎಂದು ಹೆಸರಿಸಿದರು.ಪೌರತ್ವ ತಿದ್ದುಪಡಿ ಮಸೂದೆಯೊಂದಿಗೆ ಗಾಯಗಳನ್ನು ಗುಣಪಡಿಸಲು ಬಯಸಿದೆ ಎಂದರು. ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಂತಿಮ ಪಟ್ಟಿಯಿಂದ ಹೊರಗುಳಿದ ಹಿಂದೂ ವಲಸಿಗರನ್ನ ದೇಶದಿಂದ ಹೊರಹೋಗುವಂತೆ ಒತ್ತಾಯಿಸಲಾಗುವುದಿಲ್ಲ ಎಂದು ಒತ್ತಿ ಹೇಳಿದರು.

ಸಂವಿಧಾನದ ಆಶಯವನ್ನು ಕೊಲ್ಲುವುದು            

ಅಸ್ಸಾಂನಲ್ಲಿ ವಲಸೆ ಮತ್ತು ಪೌರತ್ವದ ಸಮಸ್ಯೆಯ ಬಗ್ಗೆ ಬಿಜೆಪಿ ಯಾವುದೇ ಸ್ಪಷ್ಟತೆಯನ್ನು ನೀಡಿಲ್ಲ ,ಹಿಂದೆಂದಿಗಿಂತಲೂ ಹೆಚ್ಚಾಗಿ ಬಾರತದ ಸಾಮಾಜಿಕ ರಾಜಕೀಯ ಭೂದೃಶ್ಯವನ್ನು ಧ್ರುವೀಕರಿಸುವಾಗ ಬಿಜೆಪಿಯ ರಾಜಕೀಯವು ಸಂವಿಧಾನದ ಆಶಯವನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿದೆ. ಈ ಪೌರತ್ವ ತಿದ್ದುಪಡಿ ಮಸೂದೆ ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ.

 

.