ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ದೇಶದಲ್ಲಿನ ಬೆಳವಣಿಗೆಯಿಂದ ಬೇಸರ: ಮೈಕ್ರೋಸಾಪ್ಟ್ ಸಿಇಒ ಸತ್ಯ ನಾಡೆಲ್ಲಾ

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ದೇಶದಲ್ಲಿನ ಬೆಳವಣಿಗೆಯಿಂದ ಬೇಸರ: ಮೈಕ್ರೋಸಾಪ್ಟ್ ಸಿಇಒ ಸತ್ಯ ನಾಡೆಲ್ಲಾ

ದೆಹಲಿ: ನರೇಂದ್ರ ಮೋದಿ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಬೇಸರ ವ್ಯಕ್ತಪಡಿಸಿದ್ದಾರೆ, ಇತ್ತೀಚೆಗೆ ಅಂಗೀಕರಿಸಲ್ಪಟ್ಟ ಪೌರತ್ವ ಕಾಯ್ದೆಯಿಂದ ಬೇಸರತಂದಿದೆ. ಮುಂದಿನ ದಿನಗಳಲ್ಲಿ ಬಾಂಗ್ಲಾದೇಶದ ವಲಸಿಗರು ಭಾರತದಲ್ಲಿ ಹೆಚ್ಚಾಗಲಿದ್ದಾರೆ ಎಂದಿದ್ದಾರೆ.

ನ್ಯೂಯಾರ್ಕ್ ಮೂಲಕ ಪತ್ರಿಕೆಯೊಂದರ ಸಂಪಾದಕರೊಂದಿಗೆ ಮಾತನಾಡಿದ ಸತ್ಯ ನಾಡೆಲ್ಲಾ, ದೇಶದಲ್ಲಿ ಏನಾಗುತ್ತಿದೆ ಎಂಬುದು ದುಃಖಕರವಾಗಿದೆ. ಭಾರತದಲ್ಲಿ ನಡೆಯುತ್ತಿರುವುದು ಬೇಸರ ತಂದಿದೆ. ಮುಂದಿನ ದಿನಗಳಲ್ಲಿ ಬಾಂಗ್ಲಾದೇಶಿಯರೇ ಭಾರತದಲ್ಲಿ ತುಂಬಲಿದ್ದು, ಇನ್ಫೋಸಿಸ್ ನ ಮುಂದಿನ ಸಿಇಒ ಆಗಲಿದ್ದಾರೆ ಎಂದರು.

ಪ್ರತಿಯೊಂದು ದೇಶವು ತನ್ನ ಗಡಿ  ಮತ್ತು ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಬೇಕು. ಅದಕ್ಕೆ ತಕ್ಕಂತೆ ವಲಸೆ ನೀತಿಯನ್ನು ರೂಪಿಸಬೇಕು.  ಪ್ರಜಾಪ್ರಭುತ್ವದಲ್ಲಿ, ಜನ ಹಾಗೂ ಸರ್ಕಾರ ಈ ಬಗ್ಗೆ ಚರ್ಚಿಸಿ ಆ ಮಿತಿಯಲ್ಲೇ ಇದನ್ನು ವ್ಯಾಖ್ಯಾನಿಸಬೇಕು. ನಾನು ನನ್ನ ಭಾರತೀಯ ಪರಂಪರೆಯಿಂದ ರೂಪುಗೊಂಡಿದ್ದೇನೆ, ಬಹುಸಂಸ್ಕೃತಿಯ ಭಾರತದಲ್ಲಿ ಬೆಳೆದವನು. ವಲಸಿಗನಾಗಿ ಅಮೆರಿಕಾಕ್ಕೆ ಬಂದಿದ್ದೇನೆ. ಭಾರತದಲ್ಲಿ ಒಬ್ಬ ವಲಸಿಗ ದೇಶದ ಸಮಾಜ ಹಾಗೂ ಆರ್ಥಿಕತೆಗೆ ಲಾಭವಾಗುವ ಸಮೃದ್ಧ ಸ್ಟಾರ್ಟ್ ಅಪ್ ಸ್ಥಾಪಿಸುವ ಕನಸು ಕಾಣುವ ಅಥವಾ ಬಹುರಾಷ್ಟ್ರೀಯ ಸಂಸ್ಥೆಯೊಂದರ ಮುಖ್ಯಸ್ಥರಾಗುವ ಕನಸು ಕಾಣುವಂತಾಬೇಕು ಎಂದು ತಿಳಿಸಿದರು.

ನಾಡೆಲ್ಲಾ ಹೈದರಾಬಾದ್ ಮೂಲದವರಾಗಿದ್ದು, ಅಮೆರಿಕಕ್ಕೆ ತೆರಳುವ ಮೊದಲು ಮಣಿಪಾಲ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ. ಸಾಂಸ್ಕೃತಿಕವಾಗಿ ಆ ಸ್ಥಳದಲ್ಲಿ ನನ್ನ ಪರಂಪರೆಯನ್ನು ನಾನು ಎಲ್ಲಿ ಪಡೆಯುತ್ತೇನೆ ಎಂಬುದರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ, ನಾನು ಹೈದರಾಬಾದ್ ನಗರದಲ್ಲಿ ಬೆಳೆದಿದ್ದೇನೆ, ನಾನು ಬೆಳೆಯಲು ಉತ್ತಮ ಸ್ಥಳವೆಂದು ಯಾವಾಗಲೂ ಭಾವಿಸಿದ್ದೇನೆ. ನಾವು ಈದ್ ಆಚರಿಸುತ್ತೇವೆ, ನಾವು ಕ್ರಿಸ್‌ಮಸ್, ದೀಪಾವಳಿ, ಈ ಮೂರು ಹಬ್ಬಗಳು ದೊಡ್ಡಹಬ್ಬಗಳು ಹೇಳಿದರು.