ಬಾಕ್ಸಿಂಗ್ ಪ್ರೆಸಿಡೆಂಟ್ಸ್ ಕಪ್ : ಮೇರಿ ಕೋಮ್ ಗೆ ಚಿನ್ನ

ಬಾಕ್ಸಿಂಗ್ ಪ್ರೆಸಿಡೆಂಟ್ಸ್ ಕಪ್ : ಮೇರಿ ಕೋಮ್ ಗೆ ಚಿನ್ನ

ದೆಹಲಿ: ಬಾಕ್ಸಿಂಗ್‌ ವಿಶ್ವಚಾಂಪಿಯನ್‌ ಮೇರಿಕೋಮ್‍ ಅವರು ಇಂಡೋನೇಶ್ಯಾದಲ್ಲಿ ನಡೆದ 23 ನೇ ಪ್ರೆಸಿಡೆಂಟ್ಸ್ ಕಪ್‍ ಪಂದ್ಯಾವಳಿಯಲ್ಲಿ ಜಯಗಳಿಸಿದ್ದಾರೆ.

51 ಕೆ.ಜಿ ವಿಭಾಗದ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾದ ಎಪ್ರಿಲ್‍ ಫ್ರಾಂಕ್‍ ರನ್ನು 5-0 ಅಂತರದಿಂದ ಮಣಿಸಿದ ಮೇರಿ ಕೋಮ್‍ ಚಿನ್ನದ ಪದಕ ತಮ್ಮದಾಗಿಸಿದ್ದಾರೆ.

ಭಾನುವಾರ ಪ್ರೆಸಿಡೆಂಟ್‍ ಕಪ್‍ನಲ್ಲಿ ಗೆಲುವು ಕಂಡ ಬಳಿಕ ಟ್ವೀಟ್‍ ಮಾಡಿರುವ ಮೇರಿ ಕೋಮ್‍ ‘ಗೆಲ್ಲುವುದು ಎಂದರೆ ನಿಮ್ಮನ್ನು ಹೆಚ್ಚು ದೂರ ಸಾಗುವಂತೆ ಮತ್ತು ಇನ್ನಷ್ಟು ಪರಿಶ್ರಮವಹಿಸಲು ಪ್ರೇರಣೆ' ಎಂದು ಹೇಳಿದ್ದಾರೆ.

36 ರ ಹರೆಯದ ಮೇರಿ ಕೋಮ್‍ ಮೇ ತಿಂಗಳಲ್ಲಿ ನಡೆದ ಇಂಡಿಯನ್‍ ಓಪನ್‍ನಲ್ಲೂ ಚಿನ್ನ ಗಳಿಸಿದ್ದರು. ಆರು ಬಾರಿಯ ವಿಶ್ವ ಬಾಕ್ಸಿಂಗ್‍ ಚಾಂಪಿಯನ್ ಆಗಿರುವ ಮೇರಿ ಕೋಮ್ 2020ರ ಒಲಿಂಪಿಕ್ಸ್‌ಗೆ ಪ್ರವೇಶ ಪಡೆಯಲು ಪ್ರಯತ್ನ ಮುಂದುವರಿಸಿದ್ದಾರೆ.