ಪರೋಪಕಾರಿ ಚಿಂತನೆಯಲ್ಲೂ ಮಂಡ್ಯ ಮುಂದು

ಪರೋಪಕಾರಿ ಚಿಂತನೆಯಲ್ಲೂ ಮಂಡ್ಯ ಮುಂದು

ಚುನಾವಣೆ ಮತ್ತು ಫಲಿತಾಂಶದ ಕುರಿತಂತೆ ಸದಾ ಸುದ್ದಿಯ ಕೇಂದ್ರಬಿಂದುವಾಗಿರುವ ಮಂಡ್ಯದಲ್ಲಿ, ಸದ್ದಿಲ್ಲದೆ ದೇಹದಾನದಲ್ಲೂ ವಿಕ್ರಮ ಸಾಧಿಸುತ್ತಿದೆ.

ವೈದ್ಯಕೀಯ ವಿಚಾರಗಳಿಗಾಗಿ ಮನುಷ್ಯನ ಮೃತದೇಹಗಳು ಅತ್ಯಗತ್ಯ. ಇದನ್ನ ಹೊಂದಿಸುವುದಕ್ಕಾಗಿಯೇ ಪಡಿಪಾಟಲು ಪಡುವಂಥದ್ದು ಇತ್ತು. ಆದರೆ ಇತ್ತೀಚೆಗೆ ದೇಹದಾನ ಮಾಡುವುದರ ಅರಿವನ್ನ ಮೂಡಿಸುತ್ತಿರುವ ಪರಿಣಾಮವಾಗಿ ಮೊದಲಿನಷ್ಟು ಸಮಸ್ಯೆಗಳು ಸಂಕೀರ್ಣವಾಗಿಲ್ಲ.

 ಅದರಲ್ಲು ಮಂಡ್ಯದ ಸಾಹಿತಿಗಳು, ರೈತರು, ವೈದ್ಯರು, ಪ್ರಾಧ್ಯಾಪಕರು ಈ ವಿಚಾರದಲ್ಲಿ ಮುಂದಿದ್ದು ಸ್ವಯಂ ಪ್ರೇರಿತವಾಗಿ ದೇಹದಾನಕ್ಕೆ ನೋಂದಾಯಿಸಿಕೊಳ್ಳುತ್ತಿದ್ದಾರೆ. 170 ಜನ ದೇಹದಾನಕ್ಕೆ ನೋಂದಣಿ ಮಾಡಿಸಿದ್ದರೆ, ಪ್ರಸ್ತುತ 100 ಮೃತದೇಹಗಳು ದಾನವಾಗಿ ಬಂದಿದ್ದು, ವಿದ್ಯಾರ್ಥಿಗಳು ನಿರಾತಂಕವಾಗಿ ಕಲಿಯುತ್ತಿದ್ದಾರೆ, ಮಾತ್ರವಲ್ಲ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಚಾಮರಾಜನಗರ ಕೊಡಗು, ಕಾರವಾರ, ಕೊಪ್ಪಳ ವೈದ್ಯಕೀಯ ಕಾಲೇಜುಗಳಿಗೂ ತಲಾ ನಾಲ್ಕು ಮೃತದೇಹಗಳನ್ನ ಕೊಟ್ಟಿದೆ. ಇದು ಈ ಜಿಲ್ಲೆಯಜನರ ಪ್ರಗತಿಪರ ಧೋರಣೆಗೆ ಹಿಡಿದಿರುವ ಕೈಗನ್ನಡಿಯೂ ಹೌದು,

 ಮೃತಭ್ರೂಣಗಳ ಸಂಗ್ರಹದಲ್ಲೂ ಮಂಡ್ಯವೇ ಎರಡನೇ ಸ್ಥಾನದಲ್ಲಿದೆ(ಬೆಳಗಾವಿ ಪ್ರಥಮ). ಬೀದಿಯಲ್ಲಿ ಬಿದ್ದಿದ್ದ ಮೃತಭ್ರೂಣಗಳನ್ನ ಸಂಗ್ರಹಮಾಡುವುದಲ್ಲದೆ, ಎಷ್ಟೋಜನ ಗೌಪ್ಯವಾಗಿ ಮೃತ ಭ್ರೂಣವನ್ನ ಇಲ್ಲಿಗೆ ತಂದಿಡುತ್ತಿರುವುದರಿಂದ, ಅವೆಲ್ಲವನ್ನು ಅಧ್ಯಯನ ದೃಷ್ಟಿಯಿಂದ ಸಂಗ್ರಹಿಸಿಡಲಾಗಿದೆ.

 ಹೀಗಾಗಿ ಮಂಡ್ಯ ರಾಜಕಾರಣಕ್ಕೆ ಮಾತ್ರವಲ್ಲ, ಪರೋಪಕ್ಕಾರಕ್ಕೂ ಮುಂಚೂಣಿಯಲ್ಲೇ ಇದ್ದಂತಾಗಿದೆ,