ಬಾಬ್ರಿ ಮಸೀದಿ ಧ್ವಂಸಗೊಳಿಸಿರುವಾಗ ನಡೆದಂಥ ಹಿಂಸಾಚಾರ ಈಗ ಕೊಲ್ಕತ್ತಾದಲ್ಲಿ ನಡೆಯುತ್ತಿದೆ : ಮಮತಾ ಬ್ಯಾನರ್ಜಿ

ಬಾಬ್ರಿ ಮಸೀದಿ ಧ್ವಂಸಗೊಳಿಸಿರುವಾಗ ನಡೆದಂಥ ಹಿಂಸಾಚಾರ ಈಗ  ಕೊಲ್ಕತ್ತಾದಲ್ಲಿ ನಡೆಯುತ್ತಿದೆ : ಮಮತಾ ಬ್ಯಾನರ್ಜಿ

ಕೊಲ್ಕತ್ತಾ : ಬಾಬ್ರಿ ಮಸೀದಿ ಧ್ವಂಸಗೊಳಿಸಿದಾಗ ನಡೆದ ಹಿಂಸಾಚಾರ ಕೊಲ್ಕತ್ತಾದಲ್ಲೂ ಪುನರಾವರ್ತಿಸುತ್ತಿದೆ ಎಂದು ಈಶ್ವರ್‌ ಚಂದ್ರ ವಿದ್ಯಾಸಾಗರ್‌ ಅವರ ಪ್ರತಿಮೆ ಧ್ವಂಸಗೊಳಿಸಿರುವುದನ್ನು ಖಂಡಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ .

ಅಮಿತ್‌ ಶಾ ಕೊಲ್ಕತ್ತಾದಲ್ಲಿ ನಡೆಸಿದ ರ್ಯಾಲಿಯ ಬಳಿಕ ಬಿ.ಜೆ.ಪಿ ಮತ್ತು ಟಿ.ಎಂ.ಸಿ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ವಿದ್ಯಾಸಾಗರ್‍ ಕಾಲೇಜಿನಲ್ಲಿ ಪ್ರತಿಮೆ ಧ್ವಂಸಗೊಂಡಿತ್ತು. ಈಶ್ವರ್‌ ಚಂದ್ರ ವಿದ್ಯಾಸಾಗರ್‌ ಪ್ರತಿಮೆ ಧ್ವಂಸಗೊಳಿಸುವ ಕೃತ್ಯವನ್ನು ಬಿ.ಜೆ.ಪಿ ಕಾರ್ಯಕರ್ತರೇ ನಡೆಸಿದ್ದರು ಎಂದು ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಟಿ.ಎಂ.ಸಿ ಪಕ್ಷದ ಹಿರಿಯ ನಾಯಕರೊಬ್ಬರು ಆರೋಪಿಸಿದ್ದರು,

ಪ್ರತಿಮೆ ಧ್ವಂಸವಾಗಿರುವ ಘಟನೆಗೆ ಬಿ.ಜೆ.ಪಿ ವಿರುದ್ಧ ವಾಗ್ದಾಳಿ ನಡೆಸಿರುವ ಮಮತಾ ಬಿ.ಜೆ.ಪಿ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದೆ ಎಂದು ಹೇಳಿದ್ದಾರೆ.