ನಾವು ಶತ್ರುವಿನೊಂದಿಗೂ ಸಭ್ಯತೆಯಿಂದ ವರ್ತಿಸುತ್ತೇವೆ: ಮಮತಾ ಬ್ಯಾನರ್ಜಿ

ನಾವು ಶತ್ರುವಿನೊಂದಿಗೂ ಸಭ್ಯತೆಯಿಂದ ವರ್ತಿಸುತ್ತೇವೆ: ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಅತಿಥಿಗಳನ್ನು ಮತ್ತು ಶತ್ರುಗಳನ್ನು ಸಹ ಸೌಜನ್ಯದಿಂದ ಸ್ವಾಗತಿಸುವುದು ಬಂಗಾಳದ ಸಂಸ್ಕೃತಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ ಮಾತುಗಳು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪ್ರಧಾನಿ ಮೋದಿ ಕೋಲ್ಕತ್ತಾ ಭೇಟಿಯ ಸಮಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಕುರಿತು ಚರ್ಚೆ ನಡೆಸಿದ ಕುರಿತು ಚರ್ಚೆ ನಡೆಸಿದ ನಂತರದಲ್ಲಿ ತಮ್ಮ ಪಕ್ಷದ ವಿದ್ಯಾರ್ಥಿಗಳ ವಿಭಾಗವಾದ ಟಿಎಂಸಿಪಿಯ ಧರಣಿಯನ್ನು ಉದ್ದೇಶಿಸಿ ಮಾತನಾಡುವಾಗ, ನಾವು ನಮ್ಮ ಶತ್ರುಗಳಿಗೂ ಸೌಜನ್ಯವನ್ನು ತೋರಿಸುತ್ತೇವೆ. ಇದು ಭಾರತದ ಬಂಗಾಳದ ಸಂಸ್ಕೃತಿ, ಆದರೆ ಇದರ ಅರ್ಥ ಬಿಜೆಪಿ ಮತ್ತು ಟಿಎಂಸಿ ಸ್ನೇಹಿತರೆಂದಲ್ಲ ಎಂದಿದ್ದಾರೆ.

ಎಡಪಂಥೀಯ ಮತ್ತು ಕಾಂಗ್ರೆಸ್‌ ವಿದ್ಯಾರ್ಥಿ ಸದಸ್ಯರು ಕೋಲ್ಕತ್ತಾದ ತೃಣಮೂಲ ಕಾಂಗ್ರೆಸ್‌ ಚತ್ರ ಪರಿಷತ್‌ ಕಾರ್ಯಕ್ರಮದಲ್ಲಿ ಮಮತಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಟಿಎಂಸಿ ಹಾಗೂ ಬಿಜೆಪಿಯ ಸಂಬಂಧವನ್ನು ಅಲ್ಲಿ ನೇರವಾಗಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ ಮತ್ತು ಎಡಪಂಥೀಯರು ಮಮತಾ ಹಾಗೂ ಮೋದಿಯ ಮಧ್ಯ ಏನು ಚರ್ಚೆ ನಡೆದಿದೆ ಎಂದು ಪ್ರಶ್ನಿಸಿದ್ದಷ್ಟೇ ಅಲ್ಲದೇ, ಅವರು ಪರಸ್ಪರವಾಗಿ ಗುಪ್ತ ಒಪ್ಪಂದವಾಗಿದೆ ಎಂದು ಆರೋಪಿಸಿದ್ದಾರೆ.

ಕಾನೂನು ಬದ್ದವಾಗಿ ಹೊಂದಿರುವ ಪೌರತ್ವವನ್ನು ಕಸಿದುಕೊಳ್ಳಲು ಹಾಗೂ ಬಿಜೆಪಿಗೆ ಸಹಾಯ ಮಾಡಿದ ವಿದೇಶಿಗರಿಗೆ ಅದನ್ನು ನೀಡಲು ಪೌರತ್ವ ತಿದ್ದುಪಡಿ ಕಾಯ್ದೆ ಒಂದು ತಂತ್ರವಾಗಿ ಕೇಂದ್ರವು ಬಳಸಿಕೊಳ್ಳುತ್ತಿದೆ ಎಂದು ಮಮತಾ ಆರೋಪಿಸಿದರು.

ಬಿಜೆಪಿಯವರು ನಮ್ಮ ಪಕ್ಷದ ಮುಖಂಡರಿಗೆ ಜಮ್ಮು, ಉತ್ತರಪ್ರದೇಶ, ಗುವಾಹಟಿ(ಅಸ್ಸಾಂ) ಮತ್ತು ಜೆಎನ್‌ಯು(ದೆಹಲಿಗ)ಗೆ ಹೋಗಲು ಅವಕಾಶನೀಡಲಿಲ್ಲ. ವಿವಿಧ ಸಂಸ್ಥೆ ಮತ್ತು ನಿಯೋಗಗಳಿಂದ ತೃಣಮೂಲ ಕಾಂಗ್ರೆಸ್‌ ಹೊರಗುಳಿಯುವುದನ್ನು ಬ್ಯಾನರ್ಜಿ ತಿಳಿಸಿದ್ದಾರೆ.

ಕಳೆದ ವಾರಾಂತ್ಯದಲ್ಲಿ ಪ್ರಧಾನಿ ಅವರ ಕೋಲ್ಕತ್ತಾ ಭೇಟಿಯ ವೇಳೆಯಲ್ಲಿ ಮಮತಾ ರಾಜ್‌ ಭವನದಲ್ಲಿ ಭೇಟಿಯಾಗಿದ್ದರು.  ಹಾಗೂ ಒಂದು ಸಮಾರಂಭದಲ್ಲಿ ಅವರೊಟ್ಟಿಗೆ ವೇಧಿಕೆಯನ್ನು ಸಹ ಹಂಚಿಕೊಂಡಿದ್ದರು ಇದನ್ನು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿದ್ದರು.

ಮೊದಲಿನಿಂದಲೂ ಮಮತಾ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಾ ಬಂದಿದ್ದಾರೆ. ತಮ್ಮ ಪಕ್ಷಕ್ಕೆ ವಿದೇಶಿ ಹಣವನ್ನು ಪಡೆಯಲು ಹಾಗೂ ಕಪ್ಪು ಹಣವನ್ನು ಬಿಳಿಹಣವನ್ನಾಗಿ  ಮಾಡುವವರಿಗೆ ಮಾತ್ರ ಪೌರತ್ವ ನೀಡಲಾಗುತ್ತದೆ ಎಂದು ಆರೋಪಿಸಿದರು.

ಈ ಕಾಯ್ದೆ ಕಾನೂನು ಬದ್ದ ನಾಗರಿಕ ಪೌರತ್ವವನ್ನು ಕಿತ್ತುಕೊಂಡು ಬಿಜೆಪಿಗೆ ಹಣದ ಸಹಾಯ ಮಾಡುವ ವಿದೇಶಿಗರಿಗೆ ನೀಡುವ ತಂತ್ರವೇ? ಇದು ಬಿಜೆಪಿ ಆಟದ ಒಂದು ಯೋಜನೆಯೇ? ಎಂದು ಪ್ರಶ್ನಿಸಿದ್ದಾರೆ.