ಭಾರತದಲ್ಲಿ ಮಹಾಮಾರಿ ಕೊರೊನಾ: ಕೇವಲ 15 ದಿನಗಳಲ್ಲಿ ಲಕ್ಷಕ್ಕೆ ಏರಿದ ಸೋಂಕಿತರ ಸಂಖ್ಯೆ

ಭಾರತದಲ್ಲಿ ಮಹಾಮಾರಿ ಕೊರೊನಾ: ಕೇವಲ 15 ದಿನಗಳಲ್ಲಿ ಲಕ್ಷಕ್ಕೆ ಏರಿದ ಸೋಂಕಿತರ ಸಂಖ್ಯೆ

ದೆಹಲಿ: ಕೊರೊನಾ ಮಹಾಮಾರಿ ಜನರನ್ನು ಪ್ರತೀ ದಿನ ಸಂಕಷ್ಟಕ್ಕೆ ದೂಡುತ್ತಿದೆ. ದೇಶದ ಜನರಲ್ಲಿ ದಿನೇ ದಿನೇ ಸೋಂಕಿನ ಪ್ರಮಾಣವೂ ಅಧಿಕವಾಗುತ್ತಿದೆ. ಸದ್ಯ ರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 2 ಲಕ್ಷಕ್ಕೆ ಏರಿಕೆ ಕಂಡಿದೆ. ಇನ್ನೂ ಕೇವಲ 15 ದಿನಗಲಲ್ಲಿ 1 ಲಕ್ಷ ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ರಾಷ್ಟ್ರದಲ್ಲಿ ಮೊದಲ ಸೋಂಕಿತ ಪತ್ತೆಯಾಗಿದ್ದು ಜನವರಿ 30ರಂದು ಕೇರಳದಲ್ಲಿ. ಚೀನಾದ ವುಹಾನ್ ನಿಂದ ಕೇರಳಕ್ಕೆ ಹಿಂತಿರುಗಿದ್ದ ವಿದ್ಯಾರ್ಥಿ ರಾಷ್ಟ್ರದ ಮೊದಲ ಸೋಂಕಿತ. ಮಾರ್ಚ್ 10ರಂದು ರಾಷ್ಟ್ರದಲ್ಲಿ ಕೇವಲ 50 ಮಂದಿಯಲ್ಲಿ ಮಾತ್ರ ಸೋಂಕು ಪತ್ತೆಯಾಗಿತ್ತು. ಮೇ 18ರಂದು ಸೋಂಕಿತರ ಸಂಖ್ಯೆ ಒಂದು ಲಕ್ಷಕ್ಕೆ ಏರಿಕೆಯಾಯಿತು. ನಂತರ 15 ದಿನಗಳಲ್ಲಿ ಈ ಸಂಖ್ಯೆ 2 ಲಕ್ಷಕ್ಕೆ ಏರಿಕೆಯಾಯಿತು. ರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 2 ಲಕ್ಷಕ್ಕೆ ಏರಿಕೆಯಾಗಿದ್ದರೂ ಇತರ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಕಡಿಮೆ.