ಓರ್ವ ಪ್ರೇಮಿಗೆ ಪ್ರಣಯ ದ್ರೋಹ ಮಾಡುವುದು ಹೇಯ ಅನ್ನಿಸಿದರೂ ಅಪರಾಧವಲ್ಲ: ದೆಹಲಿ ಹೈಕೋರ್ಟ್ 

ದೆಹಲಿ: ಪ್ರೇಮಿಗೆ ಪ್ರಣಯದ್ರೋಹ ಮಾಡುವುದು ಇತರರಿಗೆ ಹೇಯ ಅನ್ನಿಸಿದರೂ ಅದು ಅಪರಾಧವಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಓರ್ವ ಪ್ರೇಮಿಗೆ ಪ್ರಣಯ ದ್ರೋಹ ಮಾಡುವುದು ಹೇಯ ಅನ್ನಿಸಿದರೂ ಅಪರಾಧವಲ್ಲ: ದೆಹಲಿ ಹೈಕೋರ್ಟ್ 

ಮಹಿಳೆಯೊಬ್ಬರನ್ನ ಮದುವೆಯಾಗುವುದಾಗಿ ಭರವಸೆ ನೀಡಿ ಅತ್ಯಾಚಾರ ನಡೆಸಿದ ಆರೋಪ ಇರುವ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯನ್ನು ಅಧೀನ ನ್ಯಾಯಾಲಯ ಖುಲಾಸೆಗೊಳಿಸಿರುವುದನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ.

ಲೈಂಗಿಕ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿರುವ ಗಣನೀಯ ಅವಧಿಯ ಒಂದು ಆತ್ಮೀಯ ಸಂಬಂಧ ಮುಂದುವರಿದಿದ್ದರೆ ಅದನ್ನು ಸ್ವಯಂಪ್ರೇರಿತವಲ್ಲ ಎಂದು ಹೇಳಲಾಗದು ಎಂದು ನ್ಯಾಯಮೂರ್ತಿ ವಿಭು ಬಖ್ರು, ಹೇಳಿದ್ದಾರೆ.

ಪ್ರಕರಣವೊಂದರಲ್ಲಿ ಆರೋಪಿ ಮತ್ತು ಆತನ ಕುಟುಂಬದ ಸದಸ್ಯರು ಮದುವೆಗೆ ಸಮ್ಮತಿಸಿದ್ದರೂ ಫಿರ್ಯಾದಿ ಮಹಿಳೆಯ ಪೋಷಕರು ಆರೋಪಿಯ ಜತೆ ಮದುವೆಯಾಗುವುದನ್ನು ವಿರೋಧಿಸಿ ಮದುವೆ ನಡೆಯದಿದ್ದರೆ ಆತ ತಪ್ಪಿತಸ್ಥನಾಗುವುದಿಲ್ಲ ಎಂದು ಹೇಳಿರುವ ಅಧೀನ ನ್ಯಾಯಾಲಯ ದೂರು ನೀಡಿದ ಮಹಿಳೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಪುರುಷನನ್ನು ಆರೋಪ ಮುಕ್ತಗೊಳಿಸಿತ್ತು.

ಪ್ರೇಮಿಗೆ ಪ್ರಣಯದ್ರೋಹ ಮಾಡುವುದು ಅಪರಾಧವಲ್ಲ

ಒಪ್ಪಿಗೆ ಮೂಲಕ ಇಬ್ಬರು ವಯಸ್ಕರು ದೈಹಿಕ ಸಂಬಂಧವನ್ನು ಸ್ಥಾಪಿಸುವುದು ಅಪರಾಧವಲ್ಲ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳುವುದು ಬಹಳ ಮುಖ್ಯ. ಪ್ರೇಮಿಗೆ ಪ್ರಣಯ ದ್ರೋಹ ಮಾಡುವುದು ಕೆಲವರಿಗೆ ಎಷ್ಟೇ ಹೇಯ ಅನ್ನಿಸಿದರೂ ಐಪಿಸಿ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಲ್ಲ ಎಂದು ನ್ಯಾಯಾಲಯ ಹೇಳಿದೆ. 

'ಇಲ್ಲ ಎಂದರೆ ಇಲ್ಲ'  'ಹೌದು ಎಂದರೆ ಹೌದು'

ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಒಪ್ಪಿಗೆಗೆ ಸಂಬಂಧಿಸಿದಂತೆ 1990ರ ದಶಕದಲ್ಲಿ ಪ್ರಾರಂಭವಾದ 'ಇಲ್ಲ ಎಂದರೆ ಇಲ್ಲ' ಎಂಬ ಅಭಿಯಾನವು ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ನಿಯಮವನ್ನು ಒಳಗೊಂಡಿದೆ. ಮೌಖಿಕವಾಗಿ 'ಇಲ್ಲ' ಎನ್ನುವುದು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಒಪ್ಪಿಗೆ ನೀಡದಿರುವುದರ ಒಂದು ನಿರ್ದಿಷ್ಟ ಸೂಚನೆಯಾಗಿದೆ. 'ಇಲ್ಲ ಎಂದರೆ ಇಲ್ಲ' ಎಂಬ ನಿಯಮದಿಂದ 'ಹೌದು ಎಂದರೆ ಹೌದು' ಎಂಬ ಮುಂದುವರಿಯಲು ಈಗ ವ್ಯಾಪಕವಾದ ಸ್ವೀಕಾರವಿದೆ. ಹೀಗಾಗಿ, ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ದೃಢವಾದ, ಪ್ರಜ್ಞಾಪೂರ್ವಕ ಮತ್ತು ಸ್ವಯಂಪ್ರೇರಿತ ಒಪ್ಪಿಗೆ ಇಲ್ಲದಿದ್ದರೆ ಅದು ಅಪರಾಧವಾಗಿದೆ ಎಂದು ನ್ಯಾಯಾಲಯ ಹೇಳಿದೆ..

ಮದುವೆಗೆ ಭರವಸೆ ನೀಡುವ ಮೂಲಕ ದೈಹಿಕ ಸಂಬಂಧವನ್ನು ಹೊಂದಲಾಗಿತ್ತೇ ಹೊರತು ಅದು ಸ್ವಯಂಪ್ರೇರಿತವಲ್ಲ. ಪ್ರಚೋದನೆಯಿಂದ ಲೈಂಗಿಕ ಸಂಬಂಧ ಹೊಂದಲಾಗಿತ್ತು ಎಂಬುದನ್ನು ದೂರುದಾರರು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.