ಒಂಬತ್ತು  ಒಂಬತ್ತು... ಯಾವ ಪಕ್ಷ ಹಳ್ಳಕ್ಕೆ ಬಿತ್ತು?

ಒಂಬತ್ತು  ಒಂಬತ್ತು... ಯಾವ ಪಕ್ಷ ಹಳ್ಳಕ್ಕೆ ಬಿತ್ತು?

ಇನ್ನು ಒಂಬತ್ತು ದಿನಗಳು ಕಳೆದರೆ ಒಕ್ಕೂಟ ಸರ್ಕಾರವನ್ನು ಯಾರು ಮುನ್ನಡೆಸುತ್ತಾರೆ ಎನ್ನುವುದು ಗೊತ್ತಾಗಲಿದೆ. ಈಗಾಗಲೇ ಬಂದಿರುವ ಸಮೀಕ್ಷೆಗಳ ಹಿನ್ನೆಲೆಯಲ್ಲಿ  ಜಿ.ಆರ್.ಸತ್ಯಲಿಂಗರಾಜು ವಿಶ್ಲೇಷಣೆ.

ಒಂಬತ್ತು ಒಂಬತ್ತು ತೋಳ ಹಳ್ಳಕ್ಕೆ ಬಿತ್ತು.....ಎಂಬ ಹಾಡಿನ ಸಾಲುಗಳಂತೆ ಯಾರು ಹಳ್ಳಕ್ಕೆ ಬೀಳುತ್ತಾರೋ, ಹಳ್ಳಕ್ಕೆ ಬಿದ್ದವರನ್ನ ಮೇಲಕ್ಕೆತ್ತಲು ಯಾರು ನಿಲ್ಲುತ್ತಾರೋ, ಯಾರು ಯಾರನ್ನ ಹಳ್ಳಕ್ಕೆ ತಳ್ಳಿರುತ್ತಾರೋ ಎಂಬುದಕ್ಕೆಲ್ಲ ಪಕ್ಕಾ ಉತ್ತರ ಸಿಗಲು ಬಾಕಿ ಉಳಿದಿರುವುದು ಕೇವಲ ಒಂಬತ್ತು ದಿನಗಳು ಮಾತ್ರ'.

 ಯುಪಿಎ ಎನ್‍ಡಿಎ  ಮಹಾಘಟಬಂಧನ್  ಪೆಡರಲ್ ಫ್ರಂಟ್ ಹೀಗೇ ಯಾರ ಗುಂಪು ಅಧಿಕಾರ ಗದ್ದುಗೆಯನ್ನೇರುತ್ತೆ ಎಂಬ ಸಮೀಕ್ಷೆಗಳು ನಡೆಯುತ್ತಲೇ ಇವೆ. ಅದರ ಆಧಾರದ ಮೇಲೆ ನಾವೆಲ್ಲ ಒಟ್ಟಾಗಿರುವ  ಎಂಬ ಚಾಕಚಕ್ಯತೆಯ ರಾಜಕಾರಣವೂ ಆರಂಭಗೊಂಡಿದೆ

 ಇದರ ಬೆನ್ನಲ್ಲೇ ರಾಜಕೀಯ ತಜ್ಞರು ಸೇರಿಕೊಂಡು ನಡೆಸಿರುವ ಸಮೀಕ್ಷೆ(ಐಎಎನ್‍ಎಸ್) ಹೊರಬಿದ್ದಿದ್ದು, ಇದರನುಸಾರ ಅತಂತ್ರ ಲೋಕಸಭೆಯೇ ಖಚಿತ.  543 ಸ್ಥಾನಗಳಲ್ಲಿ ಎನ್‍ಡಿಎ324, ಯುಪಿಎ 169, ಇತರರು 140 ಸ್ಥಾನ ಪಡೆಯುವ ಸಾಧ್ಯತೆಯನ್ನ ಅಂದಾಜಿಸಿದೆ. ಹೀಗಾದಾಗ ಬಿಜೆಪಿ, ಕಾಂಗ್ರೆಸ್  ಮುಖಂಡತ್ವದ ಮೈತ್ರಿಕೂಟಗಳು ಅಧಿಕಾರಕ್ಕೇರಬೇಕಾದರೆ ಪ್ರಾದೇಶಿಕ ಪಕ್ಷಗಳ ಪಾದವನ್ನೇ ಹಿಡಿಯಬೇಕಾಗುತ್ತೆ.

  ಪ್ರಧಾನಿಯಾಗುವುದು ಯಾರು ಎಂಬುದರ ಹಣೆಬರೆಹವನ್ನ ಪ್ರಾದೇಶಿಕ ಪಕ್ಷಗಳೇ ನಿರ್ಧರಿಸುವುದು ಈ ಸಮೀಕ್ಷೆಯ ಅನುಸಾರವೇ ಫಲಿತಾಂಶ ಬಂದರೆ ಖಚಿತ. ರಾಜ್ಯದ ಬಗ್ಗೆ ಇವರು ಮಾಡಿರುವ ಅಂದಾಜು ಪ್ರಕಾರ ಬಿಜೆಪಿ 17 ಸ್ಥಾನ ಉಳಿಸಿಕೊಳ್ಳುತ್ತೆ, ಮೈತ್ರಿ ಪಕ್ಷಗಳು 11 ಸ್ಥಾನ ಗಳಿಸುತ್ತವೆ.

 ಇಂಥವೆಲ್ಲ ಸಮೀಕ್ಷೆಗಳು ಬಗೆಬಗೆಯಾಗಿ ಬರುತ್ತಿದ್ದು, ಬಹುತೇಕವಾಗಿ ಪ್ರಾದೇಶಿಕ ಪಕ್ಷಗಳೇ ನಿರ್ಣಾಯಕವಾಗುತ್ತವೆ ಎಂಬುದನ್ನೇ ಎತ್ತಿಹಿಡಿಯುತ್ತಿವೆ. ಇದೆಲ್ಲದರ ಸತ್ಯಾಸತ್ಯತೆಗೆ ತೆರೆಬೀಳಲು ಬಾಕಿ ಇರುವ ದಿನಗಳು ಒಂಬತ್ತು ಮಾತ್ರ