ಕ್ರಿಕೆಟಿಗ ಧೋನಿ ಕುರಿತ ಲತಾ ಮಂಗೇಷ್ಕರ್ ಟ್ವೀಟ್ ವೈರಲ್

ಕ್ರಿಕೆಟಿಗ ಧೋನಿ ಕುರಿತ ಲತಾ ಮಂಗೇಷ್ಕರ್ ಟ್ವೀಟ್ ವೈರಲ್

ಭಾರತ ಕ್ರಿಕೆಟ್ ತಂಡದ ಆಟಗಾರ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ನಿಂದ ನಿವೃತ್ತಿ ಹೊಂದುತ್ತಾರೆ ಅನ್ನೋ ಮಾತುಗಳು ಹರಿದಾಡ್ತಿವೆ. ಈ ಗಾಳಿಸುದ್ದಿ ಕೇಳಿ ಖ್ಯಾತ ಗಾಯಕಿ ಲತಾ ಮಂಗೇಷ್ಕರ್ ಟ್ವೀಟ್ ಮಾಡಿದ್ದಾರೆ. "ನಮಸ್ಕಾರ ಎಂ ಎಸ್ ಧೋನಿ ಜೀ. ನೀವು ನಿವೃತ್ತಿ ಘೋಷಿಸಲಿದ್ದೀರಿ ಎಂಬ ಸುದ್ದಿ ನನ್ನ ಕಿವಿಗೆ ಬಿತ್ತು. ದಯವಿಟ್ಟು ರೀತಿ ಮಾಡಬೇಡಿ. ದೇಶಕ್ಕೆ ನಿಮ್ಮ ಆಟ ಅಗತ್ಯವಾಗಿ ಬೇಕಿದೆ. ಇದು ನನ್ನ ಬೇಡಿಕೆ ಕೂಡ. ನಿವೃತ್ತಿ ಎಂಬ ಪದವನ್ನು ನಿಮ್ಮ ಮನಸ್ಸಿನಲ್ಲೂ ಸುಳಿಯಲು ಬಿಡಬೇಡಿ"  ಅಂತ ಟ್ವೀಟ್ ಮಾಡಿದ್ದಾರೆ. ಜತೆಗೆ ಧೋನಿ ಅವರಿಗೂ ಟ್ಯಾಗ್ ಮಾಡಿದ್ದಾರೆ.

ಲತಾ ಮಂಗೇಷ್ಕರ್ ಅವ್ರ ಟ್ವೀಟ್ ಗೆ ಸಾವಿರಾರು ರೀಟ್ವೀಟ್ ಗಳು ಬಂದಿವೆ. ಲತಾ ಜೀ ನೀವು ಇಡೀ ದೇಶದ ಮನಸಿನ ಮಾತನ್ನು ಹೇಳಿದ್ದೀರಿ. ನಿಮ್ಮ ಟ್ವೀಟ್ ಅನ್ನು ನಾವು ನಿಮ್ಮದೇ ಧ್ವನಿಯಲ್ಲಿ ಓದಿದ್ದೇವೆ. ನಿಮ್ಮಂಥ ಲೆಜೆಂಡ್ ವ್ಯಕ್ತಿ ಮಾತ್ರ ಈ ರೀತಿ ಹೇಳೋಕೆ ಸಾಧ್ಯ ಅಂತ ಧೋನಿ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.