ಜಿಂದಾಲ್ ಗೆ ಭೂಮಿ ಮಾರಾಟ: ಮರುಪರಿಶೀಲನೆಗೆ ಸೂಚಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ

ಜಿಂದಾಲ್ ಗೆ ಭೂಮಿ ಮಾರಾಟ: ಮರುಪರಿಶೀಲನೆಗೆ ಸೂಚಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ತೀವ್ರ ವಿವಾದಕ್ಕೆ ಕಾರಣವಾಗಿದ್ದ ಜಿಂದಾಲ್ ಗೆ ಭೂಮಿ ಮಾರಾಟದ ವಿಷಯದ ಬಗ್ಗೆ ಮರುಪರಿಶೀಲನೆಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೂಚಿಸಿದ್ದಾರೆ.

ಭೂಮಿ ಮಾರಾಟದ ಬಗ್ಗೆ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಮತ್ತು ಕೈಗಾರಿಕ ಸಚಿವ ಕೆ ಜೆ ಜಾರ್ಜ್ ಜೊತೆ ಚರ್ಚಿಸಿದ್ದು, ಈ ವಿಷಯವನ್ನ ಮರು ಪರಿಶೀಲನೆ ಮಾಡಿ ಸಂಪುಟ ಸಭೆಯಲ್ಲಿ ಚರ್ಚಿಸಲು ಪುನಃ ಮಂಡಿಸುವಂತೆ ಸೂಚಿಸಿದ್ದೇನೆ ಎಂದು ಕುಮಾರಸ್ವಾಮಿ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ಬಳ್ಳಾರಿ ಸಮೀಪದಲ್ಲಿ ಜಿಂದಾಲ್ ಸ್ಟೀಲ್ ಕಂಪನಿಗೆ ಸುಮಾರು 3.667 ಎಕರೆ ಜಮೀನನ್ನು ಮಾರಾಟಮಾಡಲು ಸರ್ಕಾರ ನಿರ್ಧರಿಸಿತ್ತು ಆದರೆ ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆ ಭೂ ಮಾರಾಟ ವಿಷಯನ್ನು ಮರುಪರಿಶೀಲನೆ ಮಾಡುಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ.