ಉದ್ಯೋಗ ಸೃಷ್ಟಿಯ ಮೇಲೆ ಪರಿಣಾಮ ಬೀರುತ್ತಿವೆಯೇ ಕಾರ್ಮಿಕ ಕಾನೂನುಗಳಲ್ಲಿನ ಸುಧಾರಣೆಗಳು?

ಉದ್ಯೋಗ ಕ್ಷೇತ್ರದಲ್ಲಿ ಬೆಳವಣಿಗೆ ಕಡಿಮೆಯಾಗಿರುವ ಕಾರಣ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಅನೌಪಚಾರಿಕ ವಲಯದ ಕಾರ್ಮಿಕರಿಗೆ ಕಲ್ಯಾಣ ಮಂಡಳಿಗಳನ್ನು ಬಲಪಡಿಸುವುದು ಮತ್ತು ಪ್ರಸ್ತುತ ಇರುವ ಕಾರ್ಮಿಕ ಕಾನೂನುಗಳನ್ನು ಬದಲಾಯಿಸಬೇಕು ಎಂದು ಕಾರ್ಮಿಕ ಸಂಘಟನೆಗಳು ಪ್ರತಿಪಾದಿಸುತ್ತಿವೆ.

ಉದ್ಯೋಗ ಸೃಷ್ಟಿಯ ಮೇಲೆ ಪರಿಣಾಮ ಬೀರುತ್ತಿವೆಯೇ ಕಾರ್ಮಿಕ ಕಾನೂನುಗಳಲ್ಲಿನ ಸುಧಾರಣೆಗಳು?

ಬೆಂಗಳೂರು: ಉದ್ಯೋಗ ಸೃಷ್ಟಿ ಮತ್ತು ಕಾರ್ಮಿಕರ ಹಿತಾಸಕ್ತಿ ರಕ್ಷಣೆ ವಿಚಾರದಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಹಿನ್ನಡೆ ಸಾಧಿಸಿವೆ. ಕೌಶಲ್ಯ ಮಿಷನ್‌ ಕ್ರಿಯಾಶೀಲವಾಗದ ಕಾರಣ ಉದ್ಯೋಗ ಸೃಷ್ಟಿ ಮತ್ತು ಕಾರ್ಮಿಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಹಾಕಿಕೊಂಡಿದ್ದ ಗುರಿಯನ್ನು  ತಲುಪಿಲ್ಲ.

ಇದರ ಮಧ್ಯೆ ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಎರಡು ದಿನಗಳ ಹಿಂದೆ ಬಿಡುಗಡೆ ಮಾಡಿರುವ ವರದಿಯೂ ಇನ್ನಷ್ಟು ಸತ್ಯಗಳನ್ನು ಹೊರಗೆಡವಿದೆ. 2019-20ರಲ್ಲಿ ಒಟ್ಟು ಆರ್ಥಿಕ ಬೆಳವಣಿಗೆ ಶೇ.5ರಷ್ಟು ಇದೆ. ಇದು 2018-19ರ ಬೆಳವಣಿಗೆಗಿಂತ ಶೇ.1.8ರಷ್ಟು ಕಡಿಮೆಯಾಗಿದೆ. ದೇಶದಲ್ಲಿ 688 ಮಿಲಿಯನ್‌ನಷ್ಟು ದುಡಿಯುವ ಜನಸಂಖ್ಯೆ ಇದೆ. ಆದರೆ ಕಡಿಮೆ ಉದ್ಯೋಗಗಳ ಸೃಷ್ಟಿ, ದೇಶದ ಬೆಳವಣಿಗೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಕಾರ್ಮಿಕ ಮತ್ತು ಉದ್ಯೋಗ ನೀತಿಗಳು ಹೇಳುತ್ತಿವೆ.

ಉದ್ಯೋಗ ಕ್ಷೇತ್ರದಲ್ಲಿ ಬೆಳವಣಿಗೆ ಕಡಿಮೆಯಾಗಿರುವ ಕಾರಣ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಅನೌಪಚಾರಿಕ ವಲಯದ ಕಾರ್ಮಿಕರಿಗೆ ಕಲ್ಯಾಣ ಮಂಡಳಿಗಳನ್ನು ಬಲಪಡಿಸುವುದು ಮತ್ತು ಪ್ರಸ್ತುತ ಇರುವ ಕಾರ್ಮಿಕ ಕಾನೂನುಗಳನ್ನು ಬದಲಾಯಿಸಬೇಕು ಎಂದು ಕಾರ್ಮಿಕ ಸಂಘಟನೆಗಳು ಪ್ರತಿಪಾದಿಸುತ್ತಿವೆ.

'ಉದ್ಯೋಗಗಳ ಸೃಷ್ಟಿ,  ಭಾರತದ ಬೆಳವಣಿಗೆಯನ್ನು ತೋರಿಸುತ್ತದೆ. ಕಳೆದ ಏಳು ವರ್ಷಗಳಲ್ಲಿ ಒಟ್ಟು ಉದ್ಯೋಗದ ಪ್ರಮಾಣವೂ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಬೆಳವಣಿಗೆ ನಡೆದಿದೆ,' ಎಂದು  ಸಂತೋಷ್‌ ಮೆಹ್ರೋತ್ರಾ ಮತ್ತು ಜಜತಿ ಕೆ ಪರಿಡಾ ಅವರು ನೀಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
2014 ರ ರಾಷ್ಟ್ರೀಯ ಮಾದರಿ ಸಮೀಕ್ಷೆಯ ವರದಿಯ ಪ್ರಕಾರ, 2011-12ರಲ್ಲಿ ಮಹಿಳೆಯರು ಉದ್ಯೋಗ ಕ್ಷೇತ್ರದಲ್ಲಿ ಶೇ.25 ಕ್ಕಿಂತ ಹೆಚ್ಚಿರಲಿಲ್ಲ. 2005 ರಲ್ಲಿ ಶೇ. 33 ರಷ್ಟು ಉದ್ಯೋಗ ಕ್ಷೇತ್ರದಲ್ಲಿ ಕಾಣಬಹುದಿತ್ತು. ಹಾಗೆಯ ನೆರೆ ರಾಷ್ಟ್ರಗಳಾದ ಬಾಂಗ್ಲಾದೇಶವು ಶೇ.29, ನೇಪಾಳ ಶೇ.52 ಮತ್ತು ಶ್ರೀಲಂಕಾ ಶೇ.34ರಷ್ಟು ಉದ್ಯೋಗಾವಕಾಶವನ್ನು ನೀಡಿದೆ.

ಕಾರ್ಮಿಕ ಸುಧಾರಣೆಗಳ ಪರಿಣಾಮಗಳು

ಕಾರ್ಮಿಕ ಸುಧಾರಣೆಗಳು ಉದ್ಯೋಗ ಕ್ಷೇತ್ರದ ಬೆಳವಣಿಗೆ ಹೆಚ್ಚಿಸುವುದು ಮತ್ತು ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಬೇಕು. ಆದರೆ, ಕಾರ್ಮಿಕ ನಿಯಮಗಳ ವಿಷಯದಲ್ಲಿ ಇನ್ನೂ ಸ್ಪಷ್ಟತೆಯ ಕೊರತೆಯಿದೆ. ಕಾರ್ಮಿಕ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೂಡಿಕೆದಾರರು ನಿಶ್ಚಿತತೆ ಮತ್ತು ಸ್ಪಷ್ಟತೆ ಹೊಂದಿಲ್ಲ. ಹಾಗೆಯೇ ಹೊಸ ಸುಧಾರಣೆಯಲ್ಲಿ ಪಾರದರ್ಶಕತೆಗೆ ವಿರೋಧವಾಗಿದೆ" ಎಂದು ಸಂಶೋಧನಾ ಸಂಸ್ಥೆಯ ಜಸ್ಟ್ ಜಾಬ್ಸ್ ನೆಟ್‍ವರ್ಕ್ (ಜೆಜೆಎನ್)ನ ಅಧ್ಯಕ್ಷೆ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ಸಬೀನಾ ದಿವಾನ್ ಹೇಳಿದ್ದಾರೆ.

ಉದಾಹರಣೆಗೆ, ಸಾಮಾಜಿಕ ಭದ್ರತಾ ಸಂಹಿತೆಯು ಕಾರ್ಮಿಕರನ್ನು  ಉಲ್ಲೇಖಿಸುತ್ತದೆ. ಆದರೆ ಕಾರ್ಮಿಕರು ಹೇಗೆ ವಿಮೆ ಪಡೆಯಬೇಕು ಎಂಬುದನ್ನು ಅದು ತಿಳಿಸುವುದಿಲ್ಲ. ಅಲ್ಲದೆ, ವೇಗವಾಗಿ ಬದಲಾಗುತ್ತಿರುವ ಆರ್ಥಿಕತೆಯಲ್ಲಿ ಕಾರ್ಮಿಕರನ್ನು ರಕ್ಷಿಸಲು ಈ ಸುಧಾರಣೆಗಳು ನಿರೀಕ್ಷಿತ ಪ್ರಮಾಣದಲ್ಲಿ ಫಲಿತಾಂಶ ನೀಡುವುದಿಲ್ಲ.

ಕಾರ್ಮಿಕ ಕಾನೂನುಗಳ ಕಠಿಣತೆ ಮತ್ತು ಕಾರ್ಮಿಕರನ್ನು ನಿಗದಿತ ಅವಧಿಗೆ ನೇಮಕ ಮಾಡುವ ನಿರ್ಬಂಧಗಳ ಬಗ್ಗೆ ಮಾಲೀಕರು ದೂರು ನೀಡಿದ್ದರೂ ಸಹ, ಕಾನೂನುಗಳನ್ನು ಮೀರಿ ಕಾರ್ಮಿಕರನ್ನು ಗುತ್ತಿಗೆ ಕಾರ್ಮಿಕರನ್ನಾಗಿ ನೇಮಿಸಿಕೊಂಡಿದ್ದಾರೆ. ಕಾನೂನಿನ ಬದಲಾವಣೆಯು ಯಾವುದೇ ಉದ್ಯೋಗದ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನುತ್ತಾರೆ ಇಂಡಿಯನ್ ಕೌನ್ಸಿಲ್ ಫಾರ್ ರಿಸರ್ಚ್ ಆನ್ ಇಂಟನ್ರ್ಯಾಷನಲ್ ಎಕನಾಮಿಕ್ ರಿಲೇಶನ್ಸ್‌ನ ರಾಧಿಕಾ ಕಪೂರ್.
ಮಾರುಕಟ್ಟೆಯ ಗಾತ್ರಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿವೆ. ಬಂಡವಾಳ ರಚನೆ, ಸಾಲ ಲಭ್ಯತೆ, ಮೂಲಸೌಕರ್ಯ ಮತ್ತು ಸರ್ಕಾರದ ನೀತಿಗಳು  ಕೈಗಾರಿಕಾ ಬೆಳವಣಿಗೆಯ ವೇಗ ಮತ್ತು ಅದರ ಸಂಯೋಜನೆಯನ್ನು ನಿರ್ಧರಿಸುತ್ತದೆ. ಅಲ್ಲದೆ ಉದ್ಯೋಗ ಮತ್ತು ವ್ಯಾಪ್ತಿಯನ್ನೂ ಹೆಚ್ಚಿಸುತ್ತದೆ ಎಂದು ವಿವರಿಸುತ್ತಾರೆ ರಾಧಿಕಾ ಕಪೂರ್‌.

ಉದ್ಯೋಗ ಕ್ಷೇತ್ರದಲ್ಲಿನ ಬೆಳವಣಿಗೆಯನ್ನು ಹೆಚ್ಚಿಸಿ, ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲು ಅಸ್ತಿತ್ವದಲ್ಲಿರುವ ಕಾರ್ಮಿಕ ಕಾನೂನುಗಳು ಕಾರ್ಯನಿರ್ವಹಿಸುತ್ತವೆ. ಕೈಗಾರಿಕೆಗಳ ಮೇಲಿನ ನಿಯಂತ್ರಣದ ಹೊರೆಯನ್ನು ಕಡಿಮೆ ಮಾಡುತ್ತವೆ.  ಕಾರ್ಮಿಕರ ಕಲ್ಯಾಣ ಮಸೂದೆಯು ಅವರ ಉದ್ಯೋಗಕ್ಕೆ ಅನುಗುಣವಾಗಿ ಅವರಿಗೆ ಉದ್ಯೋಗದಾತರಿಗೆ ರಿಯಾಯಿತಿ ಮತ್ತು ಬೆಲೆಯನ್ನು ನೀಡಲಾಗುತ್ತಿದೆ ಎಂದು ಕಾರ್ಮಿಕ ಸಂಘಗಳು ತಿಳಿಸಿವೆ.

ನಿಷ್ಪ್ರಯೋಜಕ ಕೌಶಲ್ಯ ಅಭಿವೃದ್ಧಿ ಮಿಷನ್

ಶಿಕ್ಷಣದ ಮಟ್ಟ ಕಡಿಮೆ ಇರುವುದು ಭಾರತದಲ್ಲಿ ನಿರುದ್ಯೋಗ ಸಮಸ್ಯ ಭಾಗಶಃ ಹೆಚ್ಚಿದೆ. ಸಮಾಜವನ್ನು ತೊರೆದವರ ಬೆಲೆ, ಕಾರ್ಮಿಕ ಮಾರುಕಟ್ಟೆಯ ಅಸಮತೆ, ಬೇಡಿಕೆಯ ಪೂರೈಕೆ ಮತ್ತು ಯುವಜನರ ಹೆಚ್ಚಿನ ಆಕಾಂಕ್ಷೆಗಳ ನಡುವೆ ಹೊಂದಾಣಿಕೆಯಿಲ್ಲ.

ಸರ್ಕಾರದ ಪ್ರಧಾನ್ ಮಂತ್ರಿ ಕೌಶಲ್ ವಿಕಾಸ್ ಯೋಜನೆ ಅಥವಾ ಪಿಎಂಕೆವಿವೈ (ಪ್ರಧಾನ ಮಂತ್ರಿಗಳ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ) 2020 ರಿಂದ ನಾಲ್ಕು ವರ್ಷಗಳಲ್ಲಿ 10 ದಶಲಕ್ಷಕ್ಕೂ ಹೆಚ್ಚು ಯುವಕರನ್ನು ಕೌಶಲ್ಯಗಳನ್ನು ನೀಡುವ ಗುರಿ ಹೊಂದಿದೆ. ಆದರೆ ಕೌಶಲ್ಯ ಅಭಿವೃದ್ಧಿ ಸಚಿವಾಲಯವು ಜುಲೈ 31, 2019 ರ ವೇಳೆಗೆ ಗುರಿಯ ಅರ್ಧದಷ್ಟು ಮಾತ್ರ ಕೌಶಲ್ಯಗಳನ್ನು ಬೆಳೆಸಲು ಯಶಸ್ವಿಯಾಗಿತ್ತು. ಇದಲ್ಲಿ ನುರಿತವರು, ಕಾಲು ಭಾಗದಷ್ಟು (1.3 ಮಿಲಿಯನ್) ಮಾತ್ರ ಉದ್ಯೋಗದಲ್ಲಿದ್ದಾರೆ ಎಂದು ನವೆಂಬರ್ 2019ರ ಲೋಕಸಭಾ ಸ್ಥಾಯಿ ಸಮಿತಿಯ ವರದಿಯೊಂದು ತಿಳಿಸಿದೆ.