ನಾನು ಮತ್ತು ಗುಂಡ ಸಿನಿಮಾದ ಮತ್ತೊಂದು ಹಾಡು ಬಿಡುಗಡೆಗೆ ಸಿದ್ದ

ನಾನು ಮತ್ತು ಗುಂಡ ಸಿನಿಮಾದ ಮತ್ತೊಂದು ಹಾಡು ಬಿಡುಗಡೆಗೆ ಸಿದ್ದ

ಕಾಮಿಡಿ ಕಿಲಾಡಿ ಕಾರ್ಯಕ್ರಮದಿಂದ ಚಿರಪರಿಚಿತರಾದ  ಶಿವರಾಜ್​ ಕೆ.ಆರ್​.ಪೇಟೆ ನಾಯಕನಾಗಿ ನಟಿಸಿರುವ   ನಾನು ಮತ್ತು ಗುಂಡ ಚಿತ್ರದ  ಮತ್ತೊಂದು ಹಾಡು  ಬಿಡುಗಡೆಗೆ ಸಿದ್ಧಗೊಂಡಿದೆ. ಈ ಮೊದಲು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಿದ  'ಅಯ್ಯಯ್ಯೋ ರಾಮ ರಾಮ' ಎಂಬ ಹಾಡು  ಸಿನಿರಸಿಕನ್ನು ರಂಜಿಸುತ್ತಿದ್ದು, ಆಟೋ ಡ್ರೈವರ್  ಶಂಕರನ ಬೆನ್ನು ಹತ್ತುವ ಗುಂಡನ ಕಾಟವನ್ನು ಹಾಡಿನಲ್ಲಿ ಹಾಸ್ಯದೊಂದಿಗೆ ತೋರಿಸಲಾಗಿದೆ.

ಈಗ ಇನ್ನೊಂದು ಹಾಡು ಬಿಡುಗಡೆಗೆ ಸಿದ್ದವಾಗಿದ್ದು, ಶ್ವಾನ ಪ್ರಿಯರಿಗೆ ಇಷ್ಟವಾಗಲಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.  ಕಾರ್ತಿಕ್ ಶರ್ಮಾ ಕಂಪೋಸ್ ಮಾಡಿರುವ ಕ್ಯಾಚಿ ಟ್ಯೂನ್​​​ ಗೆ ರೋಹಿತ್ ರಮಣ್ ಸಾಹಿತ್ಯವನ್ನು ತುಂಬಿದ್ದಾರೆ. ಇದೇ ತಿಂಗಳ 24ರಂದು 'ನಾನು ಮತ್ತು ಗುಂಡ' ಚಿತ್ರ ರಿಲೀಸ್​ ಆಗಲಿದೆ.