ಭಾರತ ಟೆಸ್ಟ್  ಕ್ರಿಕೆಟ್ ತಂಡದ ಯಶಸ್ವಿ ನಾಯಕ ಕೊಹ್ಲಿ

ಭಾರತ ಟೆಸ್ಟ್  ಕ್ರಿಕೆಟ್ ತಂಡದ ಯಶಸ್ವಿ ನಾಯಕ ಕೊಹ್ಲಿ

ಜಮೈಕಾ:  ಭಾರತ ಟೆಸ್ಟ್  ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕ ಎಂದು ವಿರಾಟ್ ಕೊಹ್ಲಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವೆಸ್ಟ್‌ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯ 2ನೇ ಹಾಗೂ ಕೊನೆಯ ಪಂದ್ಯದಲ್ಲೂ ಭಾರತ ತಂಡ ಗೆಲುವು ಸಾಧಿಸಿದ್ದು, ಈ ಜಯದ ಮೂಲಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಪರೂಪದ ಸಾಧನೆ ಮಾಡಿದ್ದಾರೆ ಎಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಎಂಎಸ್ ಧೋನಿ, ಸೌರವ್ ಗಂಗೂಲಿ ಅವರ ಈ ಹಿಂದಿನ ದಾಖಲೆಗಳನ್ನು ಕೊಹ್ಲಿ ಹಿಂದಿಕ್ಕಿದ್ದಾರೆ.

ಕಿಂಗ್ ಸ್ಟನ್ ನಲ್ಲಿ   ಭಾರತ ಸಾಧಿಸಿದ ಗೆಲುವಿನಿಂದ ಭಾರತಕ್ಕೆ ತಂದು ಕೊಟ್ಟ 28ನೇ ಗೆಲುವು ಇದಾಗಿದೆ.  .ಕ್ರಿಕೆಟ್ ನಲ್ಲಿ ಭಾರತದ ಯಶಸ್ವಿ ನಾಯಕ ಎನಿಸಿಕೊಂಡ ಮಹೇಂದ್ರ ಸಿಂಗ್ ಧೋನಿ (27) ರ ಗೆಲುವಿನ ದಾಖಲೆಯನ್ನು ಕೊಹ್ಲಿ ಹಿಂದಿಕ್ಕಿದ್ದಾರೆ, ಧೋನಿ  60 ಪಂದ್ಯಗಳಲ್ಲಿ 27 ದಾಖಲೆ ಮಾಡಿದ್ದಾರೆ ,ಆದರೆ ಕೊಹ್ಲಿ ಕೇವಲ 48  ಪಂದ್ಯಗಳಲ್ಲಿ 28  ಗೆಲುವಿನ ದಾಖಲೆ ಮಾಡಿದ್ದಾರೆ. ನಿನ್ನೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧ 2ನೇ ಪಂದ್ಯದಲ್ಲಿ ಭಾರತ ತಂಡ 257 ರನ್ ಗಳ ಭರ್ಜರಿ ಜಯ ದಾಖಲಿಸಿತ್ತು