ಐಪಿಎಲ್ 2019: ಸೋತ ಕೆಕೆಆರ್, ಸನ್ ರೈಸರ್ಸ್ ಗೆ ದಕ್ಕಿದ ಅದೃಷ್ಟ

ಐಪಿಎಲ್ 2019: ಸೋತ ಕೆಕೆಆರ್, ಸನ್ ರೈಸರ್ಸ್ ಗೆ ದಕ್ಕಿದ ಅದೃಷ್ಟ

ವಾಂಖೆಡೆ(ಮುಂಬೈ): ಭಾನುವಾರ ರಾತ್ರಿ ನಡೆದ ಐಪಿಎಲ್ -2019 ಸರಣಿಯ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಕೆಕೆಆರ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲುಕಂಡಿದ್ದು, ಕೆಕೆಆರ್ ತಂಡದ ಈ ಸೋಲು ಸನ್ ರೈಸರ್ಸ್ ತಂಡ ಪ್ಲೇ ಆಫ್ ಗೆ  ಪ್ರವೇಶಿಸಲು ವರದಾನವಾಗಿದೆ.

ಭಾನುವಾರ ರಾತ್ರಿ ಮುಂಬೈ ನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್(ಕೆಕೆಆರ್) ತಂಡವು 20 ಓವರ್ ಗಳಲ್ಲಿ 7 ವಿಕೆಟ್   ನೀಡಿದ 133 ಸಾಧಾರಣ ಮೊತ್ತವನ್ನು ಬೆನ್ನತ್ತಿದ್ದ ರೋಹಿತ್ ಶರ್ಮ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಕೇವಲ ಒಂದು ವಿಕೆಟ್ ಕಳೆದುಕೊಂಡು ಇನ್ನೂ 4 ಓವರ್ ಇರುವಂತೆಯೇ ಗೆಲುವಿನ ದಡ ಮುಟ್ಟಿ, ಕೆಕೆಆರ್ ತಂಡವು ಸರಣಿಯಿಂದ ಹೊರಬೀಳುವಂತೆ ಮಾಡಿತು.

ಈ ಪಂದ್ಯದ ನಂತರ ಸರಣಿಯ ಅಂಕಪಟ್ಟಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ‍್ಕತ್ತಾ ನೈಟ್ ರೈಡರ್ಸ್ ತಂಡಗಳು ಸಮ ಬಲದ ಅಂಕ(12) ಹೊಂದಿದ್ದರು ರನ್ ಗಳಿಕೆಯ ಸರಾಸರಿಯಲ್ಲಿ ಸನ್ ರೈಸರ್ಸ್(+0.557) ತಂಡವು ಕೆಕೆಆರ್ (+.0028) ಗಿಂತ ಹೆಚ್ಚು  ಸರಾಸರಿಯನ್ನು ಹೊಂದಿದೆ. ಈಗಾಗಿ ಸನ್ ರೈಸರ್ಸ್ ತಂಡವು ಅಂಕಪಟ್ಟಿಯ ಅಗ್ರ ನಾಲ್ಕು ಸ್ಥಾನಗಳಲ್ಲಿ ಸ್ಥಾನ ಪಡೆದು ಪ್ಲೇ ಆಫ್ ಗೆ ಪ್ರವೇಶಿಸಿದೆ.

ಈ ಪಂದ್ಯದೊಂದಿಗೆ 2019ರ ಐಪಿಲ್ ಸರಣಿಯ ಎಲ್ಲಾ ಲೀಗ್ ಹಂತಗಳು ಮುಕ್ತಾಯಗೊಂಡಿದ್ದು , ಇನ್ನು ಮುಂದೆ ಪ್ಲೇ ಆಫ್ ನಲ್ಲಿರುವ 4 ತಂಡಗಳು ಸೆಮಿಫೈನಲ್ ಗೆ ಹೋಗಲು ಸೆಣಸಾಡಲಿವೆ.