ಖೇಲೋ ಇಂಡಿಯಾ ; ಆರ್ಚರಿ ಕ್ರೀಡಾಪಟುವಿನ ಭುಜಕ್ಕೆ ಚುಚ್ಚಿದ ಬಾಣ

ಖೇಲೋ ಇಂಡಿಯಾ ; ಆರ್ಚರಿ ಕ್ರೀಡಾಪಟುವಿನ ಭುಜಕ್ಕೆ ಚುಚ್ಚಿದ ಬಾಣ

ನವದೆಹಲಿ: ಖೇಲೋ ಇಂಡಿಯಾದಲ್ಲಿ  ಆರ್ಚರಿ ಅಭ್ಯಾಸ ನಡೆಸುತ್ತಿದ್ದ ವೇಳೆ ಬಾಲಕಿ ಶಿವಾಂಗಿನಿ ಗೋಹೈನ್ ಅವರ  ಭುಜಕ್ಕೆ ಬಾಣ ಚುಚ್ಚಿದ ಘಟನೆ ನಡೆದಿದೆ. ಅದೃಷ್ಟವಶಾತ್ ಯುವ ಆರ್ಚರಿ ಪಟು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು  ಅಸ್ಸಾಂ ಆರ್ಚರಿ ಅಸೋಸಿಯೇಷನ್ ಹೇಳಿವೆ.

ಗುವಾಹಟಿಯ ದಿಬ್ರುಗರ್‌ ಜಿಲ್ಲೆಯ ಚಬುವಾದಲ್ಲಿ ಆರ್ಚರಿ ಅಭ್ಯಾಸ ನಡೆಸುತ್ತಿದ್ದ ವೇಳೆ 12ರ ಹರೆಯದ ಬಾಲಕಿ ಶಿವಾಂಗಿನಿ ಗೋಹೈನ್ ಭುಜಕ್ಕೆ ತೀಕ್ಷ್ಣವಾದ ಬಾಣ ಚುಚ್ಚಿಕೊಂಡಿದೆ. ಬಾಲಕಿಯನ್ನು ಪ್ರಾಥಮಿಕ ಚಿಕಿತ್ಸೆಯನ್ನು  ಸ್ಥಳೀಯ  ಆಸ್ಪತ್ರೆಯಲ್ಲಿ ನೀಡಿದ ತದನಂತರ   ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬಾಲಕಿ ಚೇತರಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 

ಬಾಲಕಿಯ ಬೇಕಾಗಿರುವ ಚಿಕಿತ್ಸೆಯ ಎಲ್ಲ ವೆಚ್ಚವನ್ನು ಭರಿಸುವುದಾಗಿ ಭಾರತೀಯ ಕ್ರೀಡಾ ಪ್ರಾಧಿಕಾರ ಘೋಷಿಸಿದ್ದಾರೆ. ಬಿಲ್ಲುಗಾರಿಕೆಯಲ್ಲಿ ಪ್ರವೀಣೆಯಾಗಿರುವ ಶಿವಾಂಗಿನಿ ಈಗಾಗಲೇ ಅನೇಕ ಪದಕಗಳನ್ನು ಗೆದಿದ್ದಾರೆ. ಆಂಧ್ರ ಪ್ರದೇಶದಲ್ಲಿ ನಡೆದ 65ನೇ ರಾಷ್ಟ್ರೀಯ ಶಾಲಾ ಕ್ರೀಡಾ ಆರ್ಚರಿ ಚಾಂಪಿಯನ್‌ ಶಿಪ್‌ ನಲ್ಲೂ ಭಾಗವಹಿಸಿದ್ದರು.