ಕೊರೊನಾ ಜಾಗೃತಿ: ಟಿಕ್‌ ಟಾಕ್‌ ಬಳಸಿಕೊಂಡ ಸರ್ಕಾರ

ಕೊರೊನಾ ಜಾಗೃತಿ: ಟಿಕ್‌ ಟಾಕ್‌ ಬಳಸಿಕೊಂಡ ಸರ್ಕಾರ

ಬೆಂಗಳೂರು: ಕೊರೊನಾವೈರಸ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕರ್ನಾಟಕ ರಾಜ್ಯ ಸರ್ಕಾರ   ಟಿಕ್ ಟಾಕ್ ಬಳಕೆ ಮಾಡಿಕೊಂಡಿದ್ದು,  10 ವಿಡಿಯೋಗಳನ್ನು ಪೋಸ್ಟ್ ಮಾಡಿದೆ.

ಒಂದು ವಿಡಿಯೋದಲ್ಲಿ, ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಸಹೋದರಿ ಮನೆಗೆ ಹೋಗೋಣ ಎಂದು ಪತ್ನಿಯೊಬ್ಬಳು ಪತಿಯನ್ನು ಕೇಳಿದ್ದು, ಈ ವೇಳೆ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡುವ ಪತಿ, ಹೋಗೋಣ, ಹಾಗೆಯೇ ಕೊರೊನಾವೈರಸ್ 'ನ್ನು ಹುಡುಕೋಣ, ಮನೆಗೆ ಕರೆತರೋಣ  ಎಂದು ಹೇಳುತ್ತಾನೆ.

ಮತ್ತೊಂದು ವಿಡಿಯೋದಲ್ಲಿ ಸಾಮಾಜಿಕ ಅಂತರ ಹಾಗೂ ಬಂದ್ ನಿಂದಾಗಿ ಬೇಸತ್ತ ಜನರು, ಬೇಸರ ದೂರಾಗಿಸಿಕೊಳ್ಳಲು ಮನೆಯಿಂದ ಹೊರಗೆ ಹೋಗಲು ನಿರ್ಧರಿಸುತ್ತಾರೆ. ಬಳಿಕ ಹೊರಗೆ ಹೋದರೆ ತಮ್ಮ ಆರೋಗ್ಯ ಹಾಳಾಗುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸುತ್ತಾರೆ. ಇನ್ನೊಂದು ವಿಡಿಯೋದಲ್ಲಿ ಪಾತ್ರೆ ತೊಳೆಯುವ ಮಹಿಳೆಯೊಬ್ಬರು, ಯಾವಾಗಲೂ ಪಾತ್ರೆ ತೊಳೆಯುವ ಕಾಲವಿತ್ತು. ಆದರೆ, ಇದೀಗ ಎಲ್ಲಾ ಸಮಯದಲ್ಲೂ ಕೈತೊಳೆಯುವ ಕಾಲ ಬಂದಿದೆ. ಪಾತ್ರೆ ತೊಳೆಯದೇ ಹೋದರೂ ಕೂಡ ನಾವು ಬದುಕುತ್ತೇವೆ. ಆದರೆ, ಕೈತೊಳೆಯದೇ ಹೋದರೆ ಬದುಕುವುದಿಲ್ಲ ಎಂದು ಹೇಳುತ್ತಾರೆ.