ಉಂಡ್ ಉರಿಲೇ ಮೂಳಾ ಅಂದ್ರ ....ಇಲ್ಲಾ ನಾ ಉಪಾಸಾನ ಉರೇವಾ ಅನ್ನೊವಗ್ ಏನ್ ಹೇಳಾಕ ಆಗೋದಿಲ್ಲ

"ಟಿಕೆಟಂದ್ರ ಹುಡ್ಗಾಟ್ಗಿ ಅನ್ನೋಂಡಿಯೇನೋ"...! "ಅದೇನ ತಗೋಂಬರಾಕ ಬಸ್, ಲಾರಿ, ಟ್ರೇನು, ವಿಮಾನದ ಟಿಕೆಟ್ ಅಲ್ಲೋ"?.  ಅದು "ಬಿಪಾರ್ಮು..... ಅದ್ನ ಪಕ್ಷದವ್ರು ಅಷ್ಟು ಸುಲಭಕ್ಕ ಕೊಡೋದಿಲ್ಲೋ"?. ಅದ್ಕು ನೂರಾ ಎಂಟ್ ನಮೂನಿ ಕಂಡಿಷನ್ ಇರ್ತಾವು?..... ನಿ... ಅದ್ನ ಅಷ್ಟ ಸರಳಾ ಅಂತ್ ತಿಳ್ಕೋಬಾಡ..!.

ಉಂಡ್ ಉರಿಲೇ ಮೂಳಾ ಅಂದ್ರ ....ಇಲ್ಲಾ ನಾ ಉಪಾಸಾನ ಉರೇವಾ ಅನ್ನೊವಗ್ ಏನ್ ಹೇಳಾಕ ಆಗೋದಿಲ್ಲ

ಯಾಕೋ ಬಸಣ್ಣ ಜೋರ್ ಹೊಂಟಿಯಲ್ಲೋ...! ಅಂತಾದ್ದೇನ್ಪಾ ಅರ್ಜಂಟು...?

ಕಾಕಾರ ಉಪಚುನಾವಣೆ ಘೋಷ್ಣಾ ಮಾಡ್ಯಾರಲ್ರೀ... ಚುನಾವಣಾ ಆಯೋಗದವ್ರೂ....! ಅದ್ಕ "ಅರ್ಜಂಟಾಗಿ ಹಿರೇಕೆರೂರು, ರಾಣೇಬೆನ್ನೂರು ಕಡಿಗೆ ಒಂದ ರೌಂಡ್ ಹೊಡ್ದ ಬಂದ್ರಾತು ಅಂತ್ ಹೊಂಟಿದ್ದೆ...!. ಅಷ್ಟ್ರಾಗ ನಿಮ್ಮ ಸಾಡೇಸಾತಿ ಮುಖದ ದರ್ಶನಾ ಆತು...! ಇನ್ನು ನನ್ನ ಕೆಲ್ಸಾ ಆದಂಗಾತು ಬಿಡ್ರೀ....

ಅಲ್ಲೋ ತಮ್ಮ ಇಲೇಕ್ಷನ್ ಘೋಷ್ಣಾ ಆದ್ರ ನಿ...ಯಾಕ್ ರಾಣೇಬೆನ್ನೂರು-ಹಿರೇಕೆರೂರುಕಡಿಗೆ ಹೊಂಟಿದಿ..? ಅದು ಹೊತ್ತಮುಳ್ಗಿ ಕತ್ಲು ಆಗೋಹೊತ್ತಿನ್ಯಾಗ..? 17 ಕ್ಷೇತ್ರದಾಗ, 15 ಕ್ಷೇತ್ರಕ್ಕ  ಇಲೇಕ್ಷನ್ ಘೋಷ್ಣಾ ಮಾಡ್ಯಾರ ಇಲೇಕ್ಷನ್ ಕಮೀಷನರ್. "ಉಳ್ದ 13ಕ್ಷೇತ್ರಾ ಬಿಟ್ಟು   ರಾಣೇಬೆನ್ನೂರು-ಹಿರೇಕೆರೂರಾಗ್  ಏನ್ಪಾ ನಿನ್ಗ ಕೆಲ್ಸಾ"..? ಯಾಕೋ ನಿನ್ನ ವರ್ತನೆ ನೋಡಿದ್ರ "ಮಗ್ನ ಉಂಡ್ ಉರಿಲೇ ಮೂಳಾ ಅಂದ್ರ ....ಇಲ್ಲಾ ನಾ ಉಪಾಸಾನ ಉರೇವಾ" ಅನ್ನೋ ಹಂಗ್  ಉರ್ಯಾಕ ಹತ್ತೀ....  ಅಲ್ಲಲೇ ಅಲ್ಲೇನ್ ನಿನ್ಗ ಕೆಲ್ಸಾ ಅಂತನೀ....?

ಏನ್  ಕೆಲ್ಸಾ ಅಂದ್ರ...! ನೂರಾ ಎಂಟ್ ಇರ್ತಾವ್ರೀ..! "ಇಲೇಕ್ಷನ್  ಬಂದೈತಿ ಅಂದ್ ಮ್ಯಾಕ್ ನಾನು ಯಾಕ್ ಒಂದ್ ಕೈನೋಡಬಾರ್ದು ಅಂತ್ ಹೊಂಟನೀ ನೋಡ್ರೀ"....! ನಿಮ್ಮ ಹತ್ರಾ ಮುಚ್ಚು-ಮರಿ ಏನು ಇಲ್ಲಾ. "ನಮ್ಮ ಜಿಲ್ಲಾದಾಗ ಹೆಂಗಿದ್ರು ಎರ್ಡ್ ಕ್ಷೇತ್ರಕ್ಕ ಉಪ ಚುನಾವಣೆ ನಡ್ಯಾಕ ಹತ್ತೇತಿ",  ಅದ್ಕ "ಈ ಎರ್ಡ ಕ್ಷೇತ್ರದಾಗ ಯಾವ್ದಾದ್ರೂ  ಒಂದ್ ಕ್ಷೇತ್ರಾ ನನ್ಗ ಅಟಿತೇತನ ಅಂತ್ ಪ್ರಯತ್ನಾ ನಡಿಸೇನಿ ನೋಡ್ರೀ"....

ಬಪ್ಪರೆ ಮಗ್ನ...! "ಅಲ್ಲಲೇ ಕುಂಡಿ ಮ್ಯಾಗ್ ಚೊಣ್ಣ ಹರ್ದ್ರ ಅದ್ನ ಹೊಲ್ಸಾಕ ಹತ್ತಬಾರಿ ವಿಚಾರಾ ಮಾಡೋ ಮಗಾ ನೀ".... ಅಂತಾದ್ರಾಗ ಇಲೇಕ್ಷನ್ಗೆ ನಿಲ್ಲತಿಯಾ ನೀ..?  "ಅಲ್ಲಲೇ ಇಲೇಕ್ಷನ್ ಅಂದ್ರ ಹಂಗ್ ಅಂತ್ ತಿಳ್ಕಂಡೀ...? ಮೊನ್ನೆ ಪ್ರವಾಹ ಬಂದಾಗ್ ಹರಿತಲ್ಲ ರಾಡಿ ನೀರು...ಹಂಗ್ ರೊಕ್ಕಾ ಹರ್ಸಬೇಕೋ ತಮ್ಮಾ"!."ಕೋಟಿ...ಕೋಟಿ  ರೊಕ್ಕ ಬೇಕೋ ತಮ್ಮ ರೊಕ್ಕಾ. ರೊಕ್ಕಕ್ಕ ಏನ್ ಮಾಡ್ತೀ"...? 

ಏನ್ ಮಾಡ್ತಿ ಅಂದ್ರ.... ಏನರ್ ಮಾಡೋಣಂತ ಬಿಡ್ರೀ!. ರೊಕ್ಕ ಹೆಂಗಾದ್ರು ಬಂದ್ ಬಿಳತೈತಿ?. "ಇಲೇಕ್ಷನ್ ಒಳ್ಗ ಕಲೆಕ್ಷನ್ ಏನು ಕಮ್ಮಿ ಆಗೋದಿಲ್ಲ"!. "ಬಂಧು-ಬಳ್ಗದವ್ರು ಇದ್ದ ಇರ್ತಾರ್?. ಅವ್ರು ಎಲ್ಲಿಂದಾರ ರೊಕ್ಕಾನ ಹೊಂದಿಸ್ಕೊಂಡು ಬಂದು ಕೊಡ್ತಾರ್"!.   

ಯಾವ್ ಬಂಧುಗಳು...! "ಅಲ್ಲಲೇ ನಿನ್ನ ಬಂಧುಗಳು ನನ್ಗ ಗೊತ್ತಿಲ್ಲಾ....? ಅವ್ರ ಪಾಪಾ ತಿರ್ಕಂಡು ತಿಂತಾವು....ಅಂತಾದ್ರಾಗ ಅವರು ಎಲ್ಲಿಂದಾ ತಂದ್ ಕೊಡ್ತಾರ್ಪಾ ನಿನ್ಗ".

ಅ...ಬಂಧುಗಳಲ್ರೀ....ನನ್ನ ಈ…ಬಂಧುಗಳು ಬ್ಯಾರೇ ಅದಾರ್!, "ಕಂಟ್ರಾಕ್ಟರು, ಅಧಿಕಾರಿಗಳು, ಹೈಕಮಾಂಡು, ಲೋ ಕಮಾಂಡು,  ವಿಸ್ಕಿಯವ್ರು, ಇಸ್ಕಿಯವ್ರು, ಇಸ್ಪೇಟ್‍ನವ್ರು, ಗಿಸ್ಪೇಟನವ್ರು, ಓಸಿಯವ್ರು, ಹೇಸಿಯವ್ರು, ಮರಳ್ನವರು, ಕರಳ್ನಿನವರ್ರು ಹಿಂಗ್ ಯಾರ್ಯಾರೋ   ರೊಕ್ಕಾನ ಕಂತಿ ಮ್ಯಾಗ ಕಂತಿ ಹಂಗ್ ತಂದ್ ಕೊಟ್ಟ ಹೊಕ್ಕಾರ್"?. "ರೊಕ್ಕದ ಬಗ್ಗೆ ನಂಗೇನು ಚಿಂತಿ ಇಲ್ರೀ!. ನನ್ಗ ಟಿಕಿಟಿಂದ್ ಚಿಂತಿ"?....."ರೊಕ್ಕಕ್ಕ ಏನಾದ್ರು ಮಾಡಿದ್ರಾತು ಬಿಡ್ರೀ ಕಾಕಾ..... ಮೊದ್ಲ ಟಿಕೆಟ್ ಸಿಗ್ಲಿ. ಆಮ್ಯಾಲ್ ರೊಕ್ಕದ ಬಗ್ಗೆ ವಿಚಾರಾ ಮಾಡಿದ್ರಾತು"..!

"ಟಿಕೆಟಂದ್ರ ಹುಡ್ಗಾಟ್ಗಿ ಅನ್ನೋಂಡಿಯೇನೋ"...! "ಅದೇನ ತಗೋಂಬರಾಕ ಬಸ್, ಲಾರಿ, ಟ್ರೇನು, ವಿಮಾನದ ಟಿಕೆಟ್ ಅಲ್ಲೋ"?.  ಅದು "ಬಿಪಾರ್ಮು..... ಅದ್ನ ಪಕ್ಷದವ್ರು ಅಷ್ಟು ಸುಲಭಕ್ಕ ಕೊಡೋದಿಲ್ಲೋ"?. ಅದ್ಕು ನೂರಾ ಎಂಟ್ ನಮೂನಿ ಕಂಡಿಷನ್ ಇರ್ತಾವು?..... ನಿ... ಅದ್ನ ಅಷ್ಟ ಸರಳಾ ಅಂತ್ ತಿಳ್ಕೋಬಾಡ..!.

ಹೌದ್ರೀ ಕಾಕಾ.... ಹೌದು, ಅದು ನನ್ಗು ಗೊತ್ತೈತಿ....! "ನೀವು ಹೇಳೋದು ಹುಲ್‍ಹೊರಿ ಪಕ್ಷಾ-ಪ್ಯಾಂಟ್ ಲೆಸ್ -ಪ್ಯಾಂಟ್ ಮ್ಯಾಲ್ ಹಾಪ್ಯಾಂಟು ಹಾಕೋ ಪಕ್ಷದ ಟಿಕೆಟ್ ಪಡ್ಯಾಕ ಕೈಯಾಗ್-ಮೈಯಾಗ ಜಿಗ್ಟು ಬೇಕು"?. "ಆದ್ರ ನಾನು ಆ ಮೂರು ಬಿಟ್ಟಿರೋ ಪಕ್ಷಾನ್ ಬಿಟ್ಟು ಈ ತೆಂಗಿನಕಾಯ್ ಪಕ್ಷಾ, ಬಾಳಿ ಹಣ್ಣಿನ ಪಕ್ಷಾ, ಜೋಡಿನ ಪಕ್ಷಾ, ಬಿಲ್ಲೂ ಭಾಣದ ಪಕ್ಷ, ಕೈಪಂಪ್-ಕಾಲ್ ಪಂಪ್ ಪಕ್ಷಾ, ವಾಟಾಳು-ಗೋಟಾಳ ಪಕ್ಷ, ಕನ್ನಡ ಪಕ್ಷಾ, ಹಿಂದಿ ಪಕ್ಷಾ, ಮುಂದು ಪಕ್ಷಾ ಹಿಂಗ್ ಹತ್ತಾರ್ ಪಕ್ಷ ಅದಾವ್ರೀ ಅವ್ಕೇನೂ ದಾಡಿರೀ".. "ಯಾವುದಾದರು ಒಂದ್ ಪಕ್ಷದಾಗಿಂದ ಸ್ಪರ್ಧಿಸಿದ್ರಾತು ಬಿಡ್ರೀ"... ನಾನು ನಾಮಪತ್ರ ಸಲ್ಸಾಕ ತಯಾರಿ ಮಾಡ್ಕೋಬೇಕು ?. "ಕೈ"ಬಿಡ್ರೀ... ನನ್ನ , ನಾನು ಅರ್ಜಂಟಾಗಿ ಹೋಗಬೇಕು. ಮತ್ ಯಾವಾಗರ ಮಾತಾಡೋಣು ನಾ ಬರ್ತನಿ....

ಎಷ್ಟ್ ಅರ್ಜಂಟ್ ಮಾಡ್ತಾನಲೇ ಇವಾ.! ಬಾರ್ಲೇ ಬಾ.. "ಚುನಾವಣೆ ಖರ್ಚಿಗೆ ಏನ್ಮಾಡ್ತೀ"...?

ಏನ್ ಮಾಡು ಅಂತಿರೀ.... "ಚುನಾವಣೆ ಅಂದ್ ಮ್ಯಾಲ್ ಖರ್ಚ ಇರೋವ್"!. ಮೊನ್ನೆ ಹೊಲಾ ಮಾರಿದ್ದ ರೊಕ್ಕಾ ಹಂಗ್ ಐತ್ರೀ. ಪಾರ್ಟಿಯವ್ರೂ ಕೊಡಮಟಾ ಅದ್ನ ಖರ್ಚಮಾಡತನಿ".

ಲೇ...ಲೇ "ಹೊಲಾಮ್ಯಾರಿ ಇಲೇಕ್ಷನ್ ಮಾಡ್ತಾರೇನೋ.... ಎಂತಾ ಹುಚ್ಚದಿ ನೀ"...! "ಬಕಬಾರ್ಲೆ ಬಿದ್ದ ಹೊಕ್ಕೀ...ಅಲ್ಲೋ ಹೊಲಾಮಾರಿದ್ದ ರೊಕ್ಕ ಎಷ್ಟ್ ಐತಿ ಹೇಳೂ."...?  

ಹತ್ತ ಲಕ್ಷ ಐತ್ರೀ...!

"ಎದ್ಕ ಆಕೈತೋ ಹತ್ತ ಲಕ್ಷಾ"...? "ಈಗೇನಿದ್ರು ಕೋಟಿ...ಕೋಟಿ...ಮ್ಯಾಲ್ ರೊಕ್ಕ ಬೇಕು"!. "ನಿನ್ನ ಹತ್ತ ಲಕ್ಷಾ ಬರಿ ಒಂದ್ ದಿನಕ್ಕ್ ಸಾಲೋದಿಲ್ಲೋ ಹುಚಮಂಗ್ಯಾ?".  "ಇರೋ ರೊಕ್ಕಾನ್ ಯಾಕ್ ಹಾಳ್ ಮಾಡ್ಕೋತೀ"?.. "ಮಕ್ಳು-ಮರಿ ಇರೋವಾ ನಿ. ಸುಮ್ನ ರೊಕ್ಕಾ ಇಟಗೊಂಡು ಮಕ್ಳು-ಮರಿ ಜೊತಿಗೆ ಚಂದಾಗಿ ಇರೋದ್ ಬಿಟ್ಟು ಇಲೇಕ್ಷನ್ಗೆ ನಿಲ್ಲತಾನಂತ್ ಈ ಮಗಾ" ...! "ಹೋಗ್ಲೇ ಹೋಗು ಸುಮ್ನ ಮನಿಗೆ ತಿರ್ಗಿ ನೋಡದಂಗ್ ಹೋಗು...ಬಂದಾನಿಲ್ಲೇ ಬೋಸುಡಿಕೆ. ಹೋಗ್ಲೇ ಹೋಗೂ"!.

"ಹಂಗ್ಯಾಕ ಅಂತೀರಿ ಕಾಕಾ..., ಯಾಕ್ ರೊಕ್ಕಾ ಇಲ್ದ ಇಲೇಕ್ಷನ್ ಮಾಡಾಕ ಆಗೋದಿಲ್ಲಾ ಅಂತಿರೇನು"..?

"ಕಣಿ ಕೇಳೋ ಮಗ್ನ...ಕಣಿ". ಅಲ್ಲಲೇ "ಯಾವ್ ಬೋಳಿಮಗಾ ಹೇಳಿದ್ನಪಾ ನಿನ್ಗ, ಇಲೇಕ್ಷನ್ಗೆ ನಿಲ್ಲು ಅಂತ್."?... 

ಅವಾ ಯಾವಾನ ಸ್ವಾಮಿ ಅಂತ್ರೀ... "ಹೆಣ್ಣಮಕ್ಕಳು ಹಾಕ್ಕೋಂತಾರಲ್ರೀ....  ನೈಟಿ ಇದ್ದಂಗ್ ಇತ್ರಿ.! ಆದ್ರ ಬಣ್ಣಾ ಪೂರ್ತಿ ಕೆಂಪ್ಗ ಇತ್ರೀ"..... ಅದ್ನ ಹಾಕ್ಕೊಂಡಿದ್ದ ಒಬ್ಬಾ ಮೊನ್ನೆ ಮನಿಗೆ ಬಂದು, "ನೋಡು ಬಸಣ್ಣಾ... ನಿನ್ಗ ಅದೃಷ್ಟ ಒದ್ದಕೊಂಡು ಬಂದೈತಿ". "ನಿನ್ಗ ಒಳ್ಳೇ ಭವಿಷ್ಯಾ ಐತಿ..... ನಿನ್ಗ ಎಮ್‍ಎಲ್‍ಎ ಆಗೋ ಯೋಗಾ ಐತಿ... ನಿನ್ನ ಮುಕದಾಗ ಕಾಣಾಕ್ ಹತ್ತೇತಿ.... ನೀ ಇಲೇಕ್ಷನ್ಗೆ ನಿಂತ್ರ ಆರ್ಸಿ ಬರೋದು ನಿಕ್ಕಿ ಅಂತ್ ಹೇಳಿದ್ದಾ"....

ಹೌದಾ...! "ಅವಾ ಹೇಳ್ದಾ, ಇವಾ ಕೇಳ್ದಾ"... "ಅಲ್ಲಲೇ ಹಿಂಗ್ ಹೇಳದಾಂವ್ ಎಷ್ಟ ಇಸ್ಕಂಡಾ. ದಕ್ಷ್ಣೀ"..

"ಏನೋ ನಿನ್ಗ ಏನ್ ತಿಳಿತೇತೋ ಅದ್ನ ಕೊಡು ಅಂದ್"!." ನಾನು ಇರ್ಲಿ ಅಂತ್ , ಐದು ಗಾಂಧಿ ಚಿತ್ರಾ ಇರೋ ನೋಟು ಕೊಟ್ಟೆ ನೋಡ್ರೀ"... !

"ಏನ್ ಹೊಲ್ಸ್ ಅದಿಯಲೇ!. ಅಳೋ ಮಕ್ಕಳಿಗೆ ಒಂದ್ ರೂಪಾಯಿ ಕೋಡ್ದಾವ್ ನಿ"...?  ಅಂತಾದ್ರಾಗ್ "ಹತ್ತ ಸಾವ್ರಾ ರೊಕ್ಕಾನ ಭವಿಷ್ಯಾ ಹೇಳ್ದವಂಗ್ ಕೊಟ್ಟಿಯಂದ್ರ... ಎದ್ರೆಲೆ ಹೊಡಿಬೇಕೋ ನಿನ್ನ...?.... "ಹಾಳಾಗಿ ಹೊಕ್ಕಿಲೇ ನಿ..... ಸುಮ್ನ ನನ್ನ ಮಾತಕೇಳಿ ಹೊಳ್ಳಿ ಮನಿಗೆ ಹೋಗೋದು ಕಲ್ಕಾ ಮಗ್ನ".

ಆತ ಬಿಡ್ರೀ... ಕಾಕಾ,  "ನೀವು ಹೇಳಿದ ಮ್ಯಾಲ್ ಇಲೇಕ್ಷನ್ಗೆ ನಿಲ್ಲೋ ವಿಚಾರ ಇಲ್ಗೆ ಬಿಟ್ಟೇನಿ ನೋಡ್ರೀ"..!

ಹಂಗ್ ಬಾ...ದಾರಿಗೆ ಮಗ್ನ.... "ಅಲ್ಲೋ ಈ ವಿಚಾರ ಮನ್ಯಾಗ್ ನಿನ್ನ ಹೆಂಡ್ತಿಗೆ ಗೊತ್ತಿದ್ದಂಗ್ ಕಾಣೋದಿಲ್ಲ....?

ಇಲ್ರೀ... ಕಾಕಾ,  ಆಕಿಗೆ ಗೊತ್ತಿಲ್ಲಾ?. "ಗೊತ್ತಾಗಿದ್ರ ನನ್ನ ಕುಟಾಕ ಮೂರ್ನೆ ಮಾಹಾ ಯುದ್ದಾನ ಮಾಡಿರಕಿ ಆಕಿ"!.

ಆತು ಬಿಡು ..."ಚಲೋ ಮಾಡಿ,  ಮನ್ಯಾಗ ಈ ವಿಷ್ಯಾ ಹೇಳದಂಗ್ ಅದ್ನ ಅತ್ಲಾಗ ಸೈಡಿಗೆ ಇಡೂ"!. ಮತ್ತೇನ್ಪಾ ವಿಷ್ಯಾ ?.   ಅಂತು ಇಲೇಕ್ಷನ ಬಂದಂಗ್ ಆಗೇತಿ, ಯಾರ್ಯಾರೂ ನಿಲ್ಸತಾರಂತ್ ಇಲೇಕ್ಷನ್ಗೆ...?.

"ಕಾಂಗ್ರೆಸ್‍ನ್ಯಾಗ್ ರಾಣೇಬೆನ್ನೂರಿಂದ ಮಾಜಿ ಸ್ಪೀಕರ್ ಕೋಳಿವಾಡ್ರು... ಇಲ್ಲಾಂದ್ರ ಅವ್ರ ಮಗಾ  ನಿತಗೊಳ್ಳತಾರಂತ್". ಇನ್ನು ಈ ಇಲೇಕ್ಷನ್ ಮ್ಯಾಟರ್  ಕೋರ್ಟಿನ್ಯಾಗ ಇರೋದ್ರಿಂದಾ ಕೋರ್ಟು ಏನ್ ತೀರ್ಪು ನಿಡತೈತೋ ಅನ್ನೋದ್ರಮ್ಯಾಗ್ 15 ಕ್ಷೇತ್ರಗಳಿಗೆ ಎಂಎಲ್‍ಎ ಆಗಿ ಅತೃಪ್ತರಾಗಿದ್ರಲ್ಲ ಅವ್ರ ಸಮಾದಿ ಆಕ್ಕೈತೋ... ಹೊಸಾ ಜೀವ್ನಾ ಪ್ರಾರಂಭ ಆಕೈತೋ ಅನ್ನೋದು ಗೊತ್ತಾಕೈತಿ.

"ಅಲ್ಲೋ ಮೊನ್ನೆ ಸಿಎಂ ಯಡೆಯೂರ್ಸಪ್ಪ ಅತೃಪ್ತರನ್ನು ದಿಲ್ಲಿಗೆ ಕರ್ಕಕ್ಕೊಂಡು ಹೋಗಿ ಈ "ಶಾ"ನ್ ಬೆಟ್ಟಿ ಮಾಡ್ಸಾಕ ಹೋಗಿತ್ತಲ್ಲ ಏನಾತದು? . ಆ ಶಾ ಇವ್ರನ್ ಬೆಟ್ಟ್ಯಾತೋ ಇಲ್ಲೋ"...?

ಬೆಟ್ಟಿ ಆಗೇತಂತ್ರಿ ಆದ್ರ ವಿಷ್ಯಾ ಎನು ಅಂತ್ ನನ್ಗ ಗೊತ್ತಿಲ್ಲ, ಮ್ಯಾಲಿನಮನಿ ಪರಮೇಶಪ್ಪ ಇವ್ರು ಕುಟಾಗ ದಿಲ್ಲಿಗೆ ಹೋಗಿತ್ತಂತ್ ಅದ್ನ ಕೇಳಿದ್ರ ವಿಷ್ಯಾ ಗೊತ್ತಾಗ ಬಹ್ದು ನೋಡ್ರೀ...ಕಾಕಾ.

"ಆದ್ರ ಚುನಾವಣೆಗೆ ಅನರ್ಹರು ನಿತ್ಗಾ ಬಹ್ದು ಅಂತ್ ಚುನಾವಣಾ ಕಮೀಷ್ನರ್  ಹೊಳ್ಳಿ ಮತ್ತ ಹೇಳ್ಕಿಕೊಟ್ಟಾರ್"!. "ಒಟ್ಟಿನ್ಯಾಗ್ ಅನರ್ಹರು ಚುನಾವಣೆಗೆ ಸ್ಪರ್ಧಿಸತಾರೋ..? ಇಲ್ಲೋ ಅನ್ನೋದು ಇನ್ನು ಪಕ್ಕಾಆಗಿಲ್ಲ ನೋಡು".

ಅಲ್ರೀ…ಕಾಕಾ "ಗೊಲ್ಲರಹಟ್ಟಿಗೆ ಎಂಪಿ ದಲಿತಾ ಅನ್ನೋ ಕಾರಣಕ್ಕ ಅವನ್ ಒಳ್ಗ ಬಿಟಗಳ್ದ ಹಂಗ್ ಹಟ್ಟಿಯಿಂದ ಹೊರ್ಗ ಕಳ್ಸಿದ್ದ್ರಲ್ಲ ಏನಾತ್ರಿ ಆ ಪ್ರಕರಾ"್ಣ…?.

ಎಂಪಿ ಹಣೆ ಬರಹಾನ ಹಿಂಗ್. ಇನ್ನು ಯಾವ್ದು ಅದ್ಕಿಕಾರ ಇಲ್ದ ನಮ್ಮ ದಲಿತ ಬಾಂಧವರ ಸ್ಥಿತಿ ಇನ್ನ ಹೆಂಗ್ಯ? ಇರಬೇಕು ಅಂತೇನಿ"…!.ಈಜಾತಿ ಅನ್ನೋ ರೋಗಕ್ಕ ಮದ್ದಿಲ್ಲಾ ಅಂತಿರೇನೂ?.

ಯಾಕ್ ಇಲ್ಲೋ ಐತಿ. ಇಂತಾ ಮನಸ್ಥಿತಿಯಿಂದ್ ಮೊದ್ಲ ಜನ್ರನ್ನ ಹೊರಗ್ ತರ್ಬೇಕು. ಮೊನ್ನೆ ನೋಡಿದಿಲ್ಲ…… "ನಮ್ಮ ಅಕ್ಕ ಡಾ.ಅನಸೂಯಾ ಅವ್ರು ವರ್ಗ ಆಗಿ ಹಾವೇರಿಗೆ ಬಂದಿದ್ರಲ್ಲ. ಅವ್ರೀಗೆ ಬಾಡ್ಗಿ ಮನಿ ಹುಡ್ಕಾಕಂತ್ ಹೋದ ಹೊತ್ತಿನ್ಯಾಗ ಮನಿ ಮಾಲಕರು ನಿಮ್ಮ ಜಾತಿ ಯಾವ್ದು?, ನೀವು ಕಪ್ಪು-ಕಡಿ ತಿಂತಿರೇನು?, ಕಪ್ಪು-ಕಡಿ ತಿನ್ನೋರಿಗೆ ನಾವು ಮನಿ ಬಾಡ್ಗಿ ಕೋಡೋದಿಲ್ಲ ಅಂತ್ ಹೇಳಿದ್ರು".

ಅದ್ಕ ನಾನು ಹೇಳ್ದೆ, ನೋಡ್ರೀ "ಇವ್ರು ಕಪ್ಪು-ಕಡಿ ತಿನ್ನೋರಲ್ಲಾ.... ಅವ್ರ ಮಕ್ಕಳು ದಿಲ್ಲಿ ಒಳ್ಗ ನೌಕರಿ ಮಾಡ್ತಾರಾ, ಇವ್ರು ಇಲ್ಲೇ ಗೌರ್ನಮೆಂಟ್ ಕಾಲೇಜಿನ್ಯಾಗ ಪ್ರೊಪೇಸರ್ ಅದಾರ, ಸಂಬಂಧದೊಳ್ಗ ನನ್ಗ ಅಕ್ಕಾರು ಅಂತ್ ನಾನು ಹೇಳಿದ್ರು ಕೇಳವಲ್ರು!. ಕಡಿಗೆ ಕುಲಕರ್ಣಿ ಸತೀಶಣ್ಣಾರನ್ನ ಕರ್ಕೋಂಡ ಬಂದು ಅವ್ರ ಕಡಿಂದ ಹೇಳ್ಸಿದಮ್ಯಾಕ ಮನಿ ಬಾಡ್ಗಿ ಕೊಟ್ರು". 

ಹಿಂಗಾದ್ರ ಹೆಂಗ್ಯರೀ. ಅಂತಾ ದೊಡ್ಡೋರ ಗತಿನ ಹಿಂಗಾದ್ರ ಸಣ್ಣರ ಗತಿ ಏನ್ರೀ…ಸಾಕ್ರೆಪಾ...ಸಾಕು, ಕೇಳಾಕ ಆಗವಲ್ದು ಕಾಕಾರ. ನಾಳೆ ಸಿಗ್ತನಿ ಎನ್ನುತ್ತಾ ಬಸ್ಯಾ ಕತ್ತಲಲ್ಲಿ ಕಣ್ಮರೆಯಾದ.