ಕ್ರಿಕೆಟ್ ಸಲಹಾ ಸಮಿತಿಗೆ ಕಪಿಲ್ ದೇವ್ ರಾಜೀನಾಮೆ...!

ಕ್ರಿಕೆಟ್ ಸಲಹಾ ಸಮಿತಿಗೆ ಕಪಿಲ್ ದೇವ್ ರಾಜೀನಾಮೆ...!

ಮುಂಬೈ: ಭಾರತದ ಮಾಜಿ ನಾಯಕ ಕಪಿಲ್ ದೇವ್ ಕ್ರಿಕೆಟ್ ಸಲಹಾ ಸಮಿತಿಗೆ(ಸಿಎಸಿ)ರಾಜೀನಾಮೆ ನೀಡಿದ್ದಾರೆ. ಸಮಿತಿಗೆ  ರಾಜೀನಾಮೆ ನೀಡಿರುವ ಎರಡನೇ ಸದಸ್ಯರಾಗಿದ್ದಾರೆ. ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಅಜೀವ ಸದಸ್ಯ ಸಂಜೀವ್ ಗುಪ್ತಾ ಸ್ವಹಿತಾಸಕ್ತಿ ಸಂಘರ್ಷ ದೂರು ದಾಖಲಿಸಿದ ಬಳಿಕ ಬಿಸಿಸಿಐಯ ಎಥಿಕ್ಸ್ ಅಧಿಕಾರಿ ಡಿ.ಕೆ ಜೈನ್ ಸಮಿತಿ ಸದಸ್ಯರುಗಳಾದ ಅಂಶುಮಾನ್ ಗಾಯಕ್ವಾಡ್ ಹಾಗೂ ಶಾಂತಾ ರಂಗಸ್ವಾಮಿಗೆ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಪಿಲ್ ದೇವ್ ಕೂಡ ತನ್ನ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ತಳೆದಿದ್ದಾರೆ.

ನೋಟಿಸ್ ಲಭಿಸಿದ ಮರುದಿನವೇ ಶಾಂತಾರಂಗಸ್ವಾಮಿ ಸಿಎಸಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ವಿಶೇಷವಾಗಿ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ರನ್ನು ಆಯ್ಕೆ ಮಾಡಲು ಸಿಎಸಿ ಭಾಗವಾಗಿರುವುದು ಒಂದು ಉತ್ತಮ ಅವಕಾಶವಾಗಿತ್ತು. ನಾನು ಸಿಎಸಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಸುಪ್ರೀಂ ಕೋರ್ಟ್ ನಿಂದ ನೇಮಕವಾಗಿರುವ ಆಡಳಿತಾಧಿಕಾರಿ ಸಮಿತಿಯ ಮುಖ್ಯಸ್ಥ ವಿನೋದ್ ರಾಯ್ ಹಾಗೂ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿಗೆ ಕಳುಹಿಸಿರುವ ಇ-ಮೇಲ್ ನಲ್ಲಿ ಕಪಿಲ್ ದೇವ್ ಬರೆದಿದ್ದಾರೆ.