ಕಲಬುರ್ಗಿಯಲ್ಲಿ ಅನಾವಶ್ಯಕವಾಗಿ ಮನೆಯಿಂದ ಹೊರ ಬರುವವರಿಗೆ ಬೀದಿ ಕಸ ಗುಡಿಸುವ ಶಿಕ್ಷೆ

ಕಲಬುರ್ಗಿಯಲ್ಲಿ ಅನಾವಶ್ಯಕವಾಗಿ ಮನೆಯಿಂದ ಹೊರ ಬರುವವರಿಗೆ ಬೀದಿ ಕಸ ಗುಡಿಸುವ ಶಿಕ್ಷೆ

ಕಲಬುರಗಿ : ಕೊರೋನಾ ಭೀತಿ ಹಿನ್ನಲೆಯಲ್ಲಿ ರಾಜ್ಯವನ್ನೇ ಲಾಕ್‌ ಡೌನ್‌ ಮಾಡಲಾಗಿದೆ ಆದರೂ ಕೆಲ ಜನರು ಬೀದಿಗಳಿಯುತ್ತಿದ್ದಾರೆ. ಈ ರೀತಿ ನಿಯಮ ಉಲ್ಲಂಘಿಸುವವರಿಗೆ ಚೌಕ್‌ ಪೊಲೀಸ್‌ ಠಾಣೆಯ ಪಿ.ಎಸ್‌. ಐ ಪೊರಕೆ ನೀಡಿ ಬೀದಿಯ ಕಸ ಗುಡಿಸುವಂತೆ ಮಾಡಿದ್ದಾರೆ.

ನಿನ್ನೆ ಕಲಬುರ್ಗಿಯಲ್ಲಿ ನಿಯಮ ಪಾಲಿಸದೇ ಇರುವವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದರು. ಕೆಲವರಿಗೆ ಬಸ್ಕಿ ಹೊಡೆಸಿದ್ದರು ಆದರೆ ಮತ್ತೆ ಇಂದು ಚೌಕ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅನಾವಶ್ಯಕವಾಗಿ ಬೀದಿಗೆ ಇಳಿದ ಕೆಲವರಿಗೆ ಪೊಲೀಸರು ಇಂದು ಪೊರಕೆ ನೀಡಿ ಬೀದಿ ಕಸ ಗುಡಿಸುವಂತೆ ಅಜ್ಞಾಪಿಸಿದ್ದಾರೆ.ಹಾಗೂ ಸುಖಾ ಸುಮ್ಮನೆ ಬೀದಿಗೆ ಬರಬೇಡಿ ಮನೆಯಲ್ಲಿಯೇ ಇರಿ ಜಿಲ್ಲಾಡಳಿಯ ಆದೇಶ ಪಾಲಿಸಿ ಎಂದು ತಾಕೀತು ಮಾಡಿದೆ.