ಜೆಎನ್‌ಯು ಹಿಂಸಾಚಾರ: ವಿಡಿಯೋದಲ್ಲಿದ್ದ ಮುಸುಕುಧಾರಿ ಮಹಿಳೆ ಎಬಿವಿಪಿ ಕಾರ್ಯಕರ್ತೆ

ಜೆಎನ್‌ಯು ಹಿಂಸಾಚಾರ: ವಿಡಿಯೋದಲ್ಲಿದ್ದ ಮುಸುಕುಧಾರಿ ಮಹಿಳೆ ಎಬಿವಿಪಿ ಕಾರ್ಯಕರ್ತೆ

ದೆಹಲಿ: ಜನವರಿ 5 ರಂದು ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮೇಲೆ ದಾಳಿ ನಡೆಸಿದ ಮುಸುಕುಧಾರಿಗಳ ಗುಂಪಿನೊಂದಿಗೆ ಇದ್ದ ಮಹಿಳೆಯನ್ನು ಪೊಲೀಸರು ಗುರುತಿಸಿದ್ದಾರೆ.

ವಿಡಿಯೋದಲ್ಲಿ ಗೋಚರವಾಗಿದ್ದ ಮಹಿಳೆಯು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕೋಮಲ್ ಶರ್ಮಾ,  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ಸದಸ್ಯರು ಎಂದು ಪೊಲೀಸರು ಗುರುತಿಸಿದ್ದಾರೆ. ಶರ್ಮಾ ಚೆಕ್ಸ್ ಶರ್ಟ್ ಧರಿಸಿ, ಮುಖವನ್ನು ತಿಳಿ ನೀಲಿ ಬಣ್ಣದ ಸ್ಕಾರ್ಫ್‌ನಿಂದ ಮುಚ್ಚಿಕೊಂಡಿದರು ಹಾಗೂ ಕೋಲು ಹಿಡಿದುಕೊಂಡು ವಿದ್ಯಾರ್ಥಿಗಳನ್ನು ಬೆದರಿಸುವ ವಿಡಿಯೋ ವೈರಲ್ ಆಗಿತ್ತು.

ಮುಸುಕುಧಾರಿಗಳು ಸಬರಮತಿ ಹಾಸ್ಟೆಲ್ ಒಳಗೆ ನುಗ್ಗಿ ವಿದ್ಯಾರ್ಥಿಗಳನ್ನು ಥಳಿಸಿದರು. ಕೊಠಡಿಗಳನ್ನು ಧ್ವಂಸಗೊಳಿಸಿದರು. ಜನವರಿ 5 ರಂದು ಹಲ್ಲೆಗೊಳಗಾದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ಸದಸ್ಯರು ‘ಮುಖವಾಡದ ಗೂಂಡಾಗಳು’ ಎಬಿವಿಪಿ ಸದಸ್ಯರು ಎಂದು ಆರೋಪಿಸಿದರು.