ಜಸ್ಪ್ರೀತ್ ಬುಮ್ರಾ ಸಂಪೂರ್ಣ ಪರಿಣಿತಿಯ ಬೌಲರ್: ಕೊಹ್ಲಿ ಪ್ರಶಂಸೆ

ಜಸ್ಪ್ರೀತ್  ಬುಮ್ರಾ ಸಂಪೂರ್ಣ ಪರಿಣಿತಿಯ ಬೌಲರ್: ಕೊಹ್ಲಿ ಪ್ರಶಂಸೆ

ದೆಹಲಿ: ವಿಶ್ವದ ಕ್ರಿಕೆಟ್ ಜಗತ್ತಿನಲ್ಲಿ ಜಸ್ಪ್ರೀತ್ ಬುಮ್ರಾ ಸಂಪೂರ್ಣ ಪರಿಣಿತಿಯ ಬೌಲರ್ ಆಗಿದ್ದಾರೆ ಎಂದು ಭಾರತೀಯ ಕ್ರಿಕೆಟ್ ಜಗತ್ತಿನ ವಿರಾಟ್ ಕೊಹ್ಲಿ ಪ್ರಶಂಸಿಸಿದ್ದಾರೆ.

ಟಿ-20 ಪಂದ್ಯಗಳೊಂದಿಗೆ ಜಸ್ಪ್ರೀತ್ ಬುಮ್ರಾ ಅವರ ಹೆಸರು ಸದಾ ತಳಕು ಹಾಕಿಕೊಂಡಿರುತ್ತದೆ. ಟಿ-20 ಸರಣಿಯ ಪರಿಣಿತ ಎಂದೇ ಆತನನ್ನು ಗುರುತಿಸಬೇಕಾಗುತ್ತದೆ. ಪ್ರತಿ ಬಾರಿಯೂ ಚೆಂಡು ಎಸೆಯುವಾಗ ಗೊಂದಲವುಂಟು ಮಾಡುತ್ತಾರೆ ಎಂದು ಬಣ್ಣಿಸಿದ್ದಾರೆ.

ಈತನ ಹೆಸರು ಟಿ-20 ಯೊಂದಿಗೆ ಜೋಡಿಸುವಾಗ ತುಂಬಾ ಸಂತೋಷವೆನಿಸುತ್ತದೆ ಎಂದು ವೆಸ್ಟ್ ಇಂಡಿಸ್ ವಿರುದ್ಧ ತಾವು 257 ಓಟಗಳನ್ನು ಪಡೆದ ನಂತರ ಅವರು ಜಪ್ರೀತ್ ಬುಮ್ರಾ ಬಗ್ಗೆ ಮಾತನಾಡಿದರು. ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.

ಇಂತಹ ಒಬ್ಬ ಕ್ರಿಕೆಟಿಗ ನಮ್ಮ ತಂಡದಲ್ಲಿರುವುದು ಹೆಮ್ಮೆಯ ಸಂಗತಿ ಎಂದೂ ಹೇಳಿದರು. ಇದರೊಂದಿಗೆ ರವೀಂದ್ರ ಜಡೆಜಾ ಅವರನ್ನೂ ಪ್ರಶಂಸಿಸಿದ ಕೊಹ್ಲಿ, ನಮ್ಮ ತಂಡದಲ್ಲಿ ಎಡಗೈ ಬಾಲರ್ ಇರುವುದು ಸಂತೋಷ. ಫೀಲ್ಡಿಂಗ್, ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲೂ ಅವರು ಪರಿಣಿತಿ ಪಡೆದಿದ್ದಾರೆ ಎಂದರು.

ವಿಶಾಖಪಟ್ಟಣಂನಲ್ಲಿ ಅ.2 ರಂದು ಐಸಿಸಿ ವರ್ಲ್ಡ್  ಚಾಂಪಿಯನ್ ಷಿಪ್ ನಡೆಯಲಿದ್ದು, ದಕ್ಷಿಣ ಆಫ್ರಿಕ ತಂಡದೊಂದಿಗೆ ಸೆಣಸಾಡಬೇಕಿದೆ. ಒತ್ತಡ ಇದ್ದರಷ್ಟೇ ಗೆಲುವು ಸುಲಭವಾಗುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.