ಜಮ್ಮು ಕಾಶ್ಮೀರದಲ್ಲಿ ಭಾರೀ ಹಿಮಪಾತ; ಒಬ್ಬ ಯೋಧ ನಾಪತ್ತೆ

ಜಮ್ಮು ಕಾಶ್ಮೀರದಲ್ಲಿ ಭಾರೀ ಹಿಮಪಾತ; ಒಬ್ಬ ಯೋಧ ನಾಪತ್ತೆ

ದೆಹಲಿ: ಜಮ್ಮು ಕಾಶ್ಮೀರದಲ್ಲಿ ಭಾರೀ ಹಿಮಪಾತಕ್ಕೆ ಸಿಲುಕಿ ಒಬ್ಬ ಯೋಧ ಐದು ದಿನಗಳಿಂದ ನಾಪತ್ತೆಯಾದ ಘಟನೆ  ಗುಲ್ ಮಾರ್ಗ್ ಸೆಕ್ಟರ್ ನ ಗಡಿನಿಯಂತ್ರಣ ರೇಖೆಯ ನಡೆದಿದೆ.

 ದೈನಂದಿನ ಗಸ್ತು ತಿರುಗುತ್ತಿದ್ದ ವೇಳೆ ಹಿಮದಲ್ಲಿ ಸಿಲುಕಿದ ಗರ್ವಾಲ್ ರೈಫಲ್ಸ್ ರೆಜಿಮೆಂಟ್ ಗೆ ಸೇರಿದ ಯೋಧ ಹವಾಲ್ದಾರ್ ರಾಜೇಂದ್ರ ಸಿಂಗ್ ನಾಪತ್ತೆಯಾಗಿದ್ದಾರೆ.

ನಾಪತ್ತೆಯಾದ ಯೋಧನನ್ನು ಪತ್ತೆಹಚ್ಚಲು ಭಾರತೀಯ ಸೇನೆ  ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಯೋಧ ಹವಾಲ್ದಾರ್ ರಾಜೇಂದ್ರ ಸಿಂಗ್ 2002 ರಿಂದ ಭಾರತೀಯ ಸೇನೆಯ 11ನೇ ಗರ್ವಾಲ್ ರೈಫಲ್ಸ್ ರೆಜಿಮೆಂಟ್ ನಲ್ಲಿ ಕಾರ್ಯನಿರ್ವಹಿಸುತಿದ್ದು, ಇವರು ಮೂಲತಃ ಉತ್ತರಕಾಂಡದ ಡೆಹ್ರಡೂನ್ ನವರು.