ತಾಳೆ ಎಣ್ಣೆ ಆಮದಿನ ಮೇಲೆ ನಿರ್ಬಂಧ ವಿಚಾರ ಜಮ್ಮು ಕಾಶ್ಮೀರ ವಿವಾದದ ಜತೆ ಥಳಕು ಹಾಕಿಕೊಂಡಿದ್ದೇಕೆ?

ಜನವರಿ 8 ರಂದು ಅಧಿಸೂಚನೆ ಹೊರಡಿಸಿದ್ದ ಸರ್ಕಾರ, ಸಂಸ್ಕರಿಸಿದ ತಾಳೆ ಎಣ್ಣೆಯನ್ನು ಮೂರು ವರ್ಗಗಳಾಗಿ ವಿದೇಶಿ ವ್ಯಾಪಾರ ನೀತಿಯಡಿಯಲ್ಲಿ ಮುಕ್ತವಾಗಿ ನಿರ್ಬಂಧಿಸಿ ಎಂದು ತಿದ್ದುಪಡಿ ಮಾಡಿತ್ತು.

ತಾಳೆ ಎಣ್ಣೆ ಆಮದಿನ ಮೇಲೆ ನಿರ್ಬಂಧ ವಿಚಾರ ಜಮ್ಮು ಕಾಶ್ಮೀರ ವಿವಾದದ ಜತೆ ಥಳಕು ಹಾಕಿಕೊಂಡಿದ್ದೇಕೆ?

ದೆಹಲಿ; ಮಲೇಷ್ಯಾದಿಂದ ತಾಳೆಎಣ್ಣೆ ಆಮದು ಮಾಡಿಕೊಳ್ಳುವ ಬಗ್ಗೆ ಭಾರತ ಸರ್ಕಾರ ಹೇರಿರುವ ಹೊಸ ನಿರ್ಬಂಧದ ವಿಚಾರ ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ವಿವಾದದ ಜತೆ ಥಳಕು ಹಾಕಿಕೊಂಡಿದೆ.

ಮಲೇಷಿಯಾ ಪ್ರಧಾನಿ ಮಹಾತೀರ್‌ ಮೊಹ್ಮದ್‌ ಈ ಹಿಂದೆ ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹೇಳಿಕೆ ನೀಡಿದ್ದ ಒಂದು ವರ್ಷದ ನಂತರ ಮಲೇಷ್ಯಾದಿಂದ ತಾಳೆಎಣ್ಣೆ ಆಮದು ಮಾಡಿಕೊಳ್ಳುವ ಸಂದರ್ಭದಲ್ಲಿ ಹೊಸ ನಿರ್ಬಂಧಗಳನ್ನು ಹೇರಿರುವುದು ಮುನ್ನೆಲೆಗೆ ಬಂದಿದೆ.

2018 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜಮ್ಮು ಕಾಶ್ಮೀರವನ್ನು ಭಾರತವು ಆಕ್ರಮಿಸಿಕೊಂಡಿದೆ ಎಂದು ಮಲೇಷಿಯಾ ಪ್ರಧಾನಿ ಮಹಾತೀರ್ ಮೊಹಮದ್ ಹೇಳಿಕೆಯನ್ನು ನೀಡಿದ್ದರು. ಇದಾದ ಒಂದು ವರ್ಷದಲ್ಲಿಯೇ ಕೇಂದ್ರ ಸರ್ಕಾರ ಈ ಹೇಳಿಕೆ ಪ್ರತಿಕಾರವಾಗಿ ಮಲೇಷಿಯಾದಿಂದ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುವ ಬಗ್ಗೆ  ಹೊಸದಾಗಿ ನಿರ್ಬಂಧಗಳನ್ನು ಹೇರಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಜನವರಿ 6 ಸೋಮವಾರದಂದು ಖಾದ್ಯ ತೈಲ ಉದ್ಯಮದ ಸದಸ್ಯರೊಂದಿಗೆ ಸಭೆ ನಡೆಸಿದ್ದ ವಾಣಿಜ್ಯ ಸಚಿವಾಲಯವು, ಮಲೇಷಿಯಾದ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿ ಅದರ ಬದಲು ಇಂಡೋನೆಷ್ಯಾದಿಂದ ಆಮದು ಮಾಡಿಕೊಳ್ಳುವರ ಬಗ್ಗೆ ಚರ್ಚೆ ನಡೆಸಲಾಗಿತ್ತು. ಇದಾದ ನಂತರ ಆಮದು ವಿಚಾರದಲ್ಲಿ ಹೊಸದಾಗಿ ನಿರ್ಬಂಧ ಹೇರಿತ್ತು.

ಜನವರಿ 8 ರಂದು ಅಧಿಸೂಚನೆ ಹೊರಡಿಸಿದ್ದ ಸರ್ಕಾರ, ಸಂಸ್ಕರಿಸಿದ ತಾಳೆ ಎಣ್ಣೆಯನ್ನು ಮೂರು ವರ್ಗಗಳಾಗಿ ವಿದೇಶಿ ವ್ಯಾಪಾರ ನೀತಿಯಡಿಯಲ್ಲಿ ಮುಕ್ತವಾಗಿ ನಿರ್ಬಂಧಿಸಿ ಎಂದು ತಿದ್ದುಪಡಿ ಮಾಡಿತ್ತು.

‘ದೇಶ ನಿರ್ದಿಷ್ಟವಲ್ಲ’ವಾದರೂ ವಿದೇಶಗಳಿಂದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವಾಗ ಭಾರತೀಯ ಉದ್ಯಮಿಗಳಲ್ಲಿ ದ್ವಿಪಕ್ಷೀಯ ಸಂಬಂಧಗಳ ಸ್ಥಿತಿಯು ಸಹ ಕಾರಣವಾಗುತ್ತದೆ ಎಂದು ಗುರುವಾರ ನಡೆದಿದ್ದ ವಾರದ ಸಂಕ್ಷಿಪ್ತ ವರದಿಯಲ್ಲಿ ಎಂಇಎ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.

ವ್ಯಾಪಾರದಲ್ಲಿ ಸಂಬಂಧದ ಸ್ಥಿತಿ ಬಹಳ ಮುಖ್ಯ ಪಾತ್ರವಹಿಸುತ್ತದೆ. ನಾನು ಆಮದುದಾರನಾಗಿದ್ದರೆ ಮತ್ತು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ನಿರ್ದಿಷ್ಟ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಬೇಕಾದರೆ ಎರಡು ದೇಶಗಳಲ್ಲಿನ ಸಾಮಾಜಿಕ ಸ್ಥಿತಿ ಹೇಗಿದೆ ಎಂಬುದರ ಬಗ್ಗೆ ನಮಗೆ ಅರಿವಿರಬೇಕಾಗುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಹಿಂದೆ ಮಲೇಷಿಯಾ ಪ್ರಧಾನಿ ಮಂತ್ರಿರವರು ಸಹ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕೆಲವೊಮ್ಮೆ ತುಂಬಾ ಬಲವಾಗಿಯೇ ಪ್ರತಿಕ್ರಿಯಿಸಿದ್ದಾರೆ.  ಭಾರತ ಮತ್ತು ಮಲೇಷ್ಯಾ ಜತೆ ಹಳೆಯ ಸಂಬಂಧಗಳಿವೆ. ನಮ್ಮಲ್ಲಿ ಉತ್ತಮ ವ್ಯಾಪಾರ ಸಂಬಂಧವಿದೆ. ಹಾಗಾಗಿ ಕೆಲವು ವಿಷಯಗಳ ಬಗ್ಗೆ ನಮ್ಮಲ್ಲಿರುವ ಸೂಕ್ಷ್ಮತೆಗಳ ಬಗ್ಗೆ ನೆನಪಿಟ್ಟುಕೊಳ್ಳಬೇಕಾಗುತ್ತದೆ ಎಂದು ರವೀಶ್ ಕುಮಾರ್ ಪ್ರತಿಪಾದಿಸಿದರು.

ಭಾರತಕ್ಕೆ ಹೆಚ್ಚಾಗಿ ತಾಳೆ ಎಣ್ಣೆಯನ್ನು ಮಲೇಷಿಯಾ,ಇಂಡೋನೇಷ್ಯಾ ಮತ್ತು ಇತ್ತೀಚಿಗೆ ನೇಪಾಳದಿಂದಲೂ ಸಹ ಆಮದು ಮಾಡಿಕೊಳ್ಳಲಾಗುತ್ತಿದೆ.ಭಾರತವು 2018 ರಲ್ಲಿ ಮಲೇಷಿಯಾದಿಂದ 425 ಮಿಲಿಯನ್ ಮೌಲ್ಯದ ರಿಫೈನ್ಡ್ ಬ್ಲೀಚ್ ಡಿಯೋಡರೈಸ್ಡ್ ಪಾಮೋಲಿನ್ ಆಮದು ಮಾಡಿಕೊಂಡಿತ್ತು. 2019-20 ಏಪ್ರಿಲ್ ನಿಂದ ನವೆಂಬರ್ ನಲ್ಲಿ 949 ಮಿಲಿಯನ್ ರಷ್ಟು ಹೆಚ್ಚಾಗಿದೆ ಎಂದು ವಾಣಿಜ್ಯ ಸಚಿವಾಲಯದ ರಫ್ತು ,ಆಮದು ಅಂಕಿ ಅಂಶಗಳ ತಿಳಿಸಿವೆ.

ಆದರೆ ಇಂಡೋನೇಷ್ಯಾಕ್ಕೆ ಈ ಸಂಖ್ಯೆಗಳನ್ನು ಹೋಲಿಸಿದರೆ ಆಮದು ಮೌಲ್ಯವು 2018-19 ರಲ್ಲಿ 985 ಮಿಲಿಯನ್ ಇದ್ದರೆ 2019 20 ರಲ್ಲಿ ಇದು ಕೇವಲ 74 ಮಿಲಿಯನ್ ಗೆ ಇಳಿದಿದೆ. ರಿಫೈನ್ಡ್ ಬ್ಲೀಚ್ಟ್ ಡಿಯೋಡರೈಸ್ಡ್ ಪಾಮ್ ಆಯಿಲ್ ನ್ನು ಭಾರತವು ಮಲೇಷಿಯಾದಿಂದ ಆಮದು ಮಾಡಿಕೊಂಡಿರುವುದು 2.67 ಮಿಲಿಯನ್ ಆಗಿದ್ದರೆ. ಇಂಡೋನೇಷ್ಯಾದ ಆಮದು 2019 19 ರಲ್ಲಿ 567 ಮಿಲಿಯನ್ ಹೆಚ್ಚಾಗಿತ್ತು.

ಆದರೆ ಮಲೇಷಿಯಾ ಸರ್ಕಾರ ಇಂತಹ ಕಠಿಣ ಕ್ರಮಗಳನ್ನು ತಗೆದುಕೊಳ್ಳಲಿಲ್ಲ. ಬದಲಾಗಿ ಹೆಚ್ಚಿನ ಭಾರತೀಯ ರಫ್ತು ವಸ್ತುಗಳನ್ನು ಖರೀದಿಸುವ ಮೂಲಕ ಮಲೇಷಿಯಾ ಉದ್ವಿಗ್ನತೆಯನ್ನು ಸರಾಗಗೊಳಿಸಲು ಮುಂದಾಗಿದೆ ಎಂದು ಕೆಲ ವರದಿಗಳು ಹೇಳಿವೆ.

ಕಳೆದ ವರ್ಷ ನವೆಂಬರ್‌ನಲ್ಲಿ ಮಲೇಷಿಯಾದಿಂದ ತಾಳೆ ಎಣ್ಣೆಯ ಆಮದು ವಹಿವಾಟಿನಲ್ಲಿ ಏರಿಕೆಯಾಗಿದೆ ಎಂದು ವಾಣಿಜ್ಯ ಸಂಸ್ಥೆ ವರದಿ ಮಾಡಿದೆ. ಕೆಲ ಸಂಸ್ಕರಣಾ ಲಾಬಿಗಳ ಕಾರಣದಿಂದ ಭಾರತವು ಆರ್ ಪಿ ಒ ಆಮದನ್ನು ನಿಯಂತ್ರಿಸಿಕೊಳ್ಳಲು ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ ಇದರಲ್ಲಿ ಮಲೇಷಿಯಾ ಏನು ಹೊರತಾಗಿಲ್ಲ. ಎಂದು ಅಭಿಪ್ರಾಯ ಪಟ್ಟಿದೆ.

ಕಳೆದ ಎರಡು ವರ್ಷಗಳಲ್ಲಿ ಪಾಮ್ ಆಯಿಲ್ ರಫ್ತು ಮಾಡುವದರಲ್ಲಿ ನೇಪಾಳ ಮುಂಚೂಣಿಯಲ್ಲಿದೆ. ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಭಾರತೀಯ ಮಾರುಕಟ್ಟೆಯ ಕಡಿಮೆ ಸುಂಕದ ಲಾಭವನ್ನು ಪಡೆಯಲು ವ್ಯಾಪಾರ ಗುಂಪುಗಳು ಮರು ಪ್ಯಾಕೇಜಿಂಗ್ ಸೌಲಭ್ಯಗಳನ್ನು ಸೃಷ್ಟಿಸಿವೆ ಎಂದು ಹೇಳಿದೆ.

ನೇಪಾಳದ ತಯಾರಕರ ಸಂಘದ ಅಧ್ಯಕ್ಷ ಸಂದೀಪ್ ಅಗರ್ ವಾಲ್ ಡಿ ಜಿ ಎಫ್ ಟಿ ಅಧಿಸೂಚನೆಯ ಪ್ರಕಾರ ಭಾರತಕ್ಕೆ ಎಲ್ಲಾ ರಫ್ತುಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಭಾರತದಲ್ಲಿರುವ ನಮ್ಮ ಸಹವರ್ತಿಗಳು ಈ ಹೊಸ ವ್ಯವಸ್ಥೆಯ ಬಗ್ಗೆ ಅರ್ಥವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಅಲ್ಲಿಯವರೆಗೂ ಭಾರತಕ್ಕೆ ರಫ್ತಾಗುತ್ತಿದ್ದ ಎಲ್ಲವನ್ನು ನಿಲ್ಲಿಸಲಾಗಿದೆ ಎಂದು ಹೇಳಿದರು.

ಜನವರಿ 8 ರಂದು ಅಧಿಸೂಚನೆ ಹೊರಡಿಸಿದ ನಂತರ ಸುಮಾರು 25 ಸಾವಿರದಿಂದ 30 ಸಾವಿರ ಟನ್ ತಾಳೆ ಎಣ್ಣೆ ಆಮದು ಮಾಡಿಕೊಳ್ಳುವ ಒಪ್ಪಂದಗಳು ಬಾಕಿ ಇದೆ. ಶೀಘ್ರದಲ್ಲೇ ಈ ನಿಯಮಗಳ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಅಗರ್ ವಾಲ್ ತಿಳಿಸಿದ್ದಾರೆ.