ಜೈ ಜಗದೀಶ್ ಪುತ್ರಿಯರ ‘ಯಾನ’ ನಾಳೆ ಶುರು

ಜೈ ಜಗದೀಶ್ ಪುತ್ರಿಯರ ‘ಯಾನ’ ನಾಳೆ ಶುರು

ಕನ್ನಡ ಸಿನಿಮಾ ಇಂಡಸ್ಟ್ರಿಗೆ ಯಾನ ಸಿನಿಮಾದ ಮೂಲಕ ಮೂವರು ಹೀರೋಯಿನ್ ಗಳು ಹಾಗೂ ಮೂವರು ಹೀರೋಗಳು ನಾಳೆ ಪರಿಚಿತರಾಗ್ತಿದ್ದಾರೆ. ಜತೆಗೆ ಸಹ ಕಲಾವಿದರು ತಂತ್ರಜ್ಞರು ಕೂಡ ಈ ಸಿನಿಮಾದ ಮೂಲಕ ಲಾಂಚ್ ಆಗ್ತಿದ್ದಾರೆ. ಜೈ ಜಗದೀಶ್ ಹಾಗೂ ವಿಜಯ್ ಲಕ್ಷ್ಮಿ ಸಿಂಗ್ ಹೋಮ್ ಬ್ಯಾನರ್ ನಲ್ಲಿ ಮೂಡಿಬರ್ತಿರೋ ಯಾನ ಚಿತ್ರವನ್ನು ವಿಜಯ ಲಕ್ಷ್ಮಿಯವ್ರೇ ನಿರ್ದೇಶಿಸಿದ್ದಾರೆ.

ಯುವ ಮನಸುಗಳಿಗೆ ಕೆನೆಕ್ಟ್ ಆಗೋ ಕಥಾಹಂದರ ಹೋಂದಿರೋ ಯಾನ ಸಿನಿಮಾ ಸಾಕಷ್ಟು ವಿಶೇ‍ಷತೆಗಳನ್ನು ಹೊಂದಿದೆ. ವೈಭವಿ, ವೈನಿಧಿ ಹಾಗೂ ವೈಸಿರಿ ಲೀಡ್ ರೋಲ್ ನಲ್ಲಿ ಅಭಿನಯಿಸಿದ್ದಾರೆ. ಟ್ರೇಲರ್, ಪ್ರೊಮೋಷನಲ್ ಸಾಂಗ್ಸ್ ಮೂಲಕ ಈಗಾಗ್ಲೇ ಮೂವರು ಮುದ್ದು ಹುಡುಗಿಯರು ಸುದ್ದಿಯಲ್ಲಿದ್ದಾರೆ. ಈ ಮೂವರಿಗೆ ಸುಮುಖ್, ಚಕ್ರವರ್ತಿ, ಅಭಿಷೇಕ್‌ ಜೋಡಿಯಾಗಿದ್ದಾರೆ. ಇನ್ನುಳಿದಂತೆ ಸಿನಿಮಾದಲ್ಲಿ  ಅನಂತ್​ನಾಗ್, ಸುಹಾಸಿನಿ, ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ, ರಾಮಕೃಷ್ಣ, ಸುಂದರ ರಾಜ್, ವೀಣಾ ಸುಂದರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಬೆಂಗಳೂರು, ಕೊಡಗು, ಗೋವಾ ಸೇರಿದಂತೆ ರಾಜ್ಯದ ಬಹುತೇಕ ತಾಣಗಳಲ್ಲಿ ಚಿತ್ರದ ಶೂಟಿಂಗ್ ನಡೆದಿದೆ. ಯಾನ ಸಿನಿಮಾ ಹೇಗಿರಲಿದೆ ಅನ್ನೋ ಕುತೂಹಲಕ್ಕೆ ನಾಳೆ ತೆರೆಬೀಳಲಿದೆ.