ಶೂಟಿಂಗ್ ನಲ್ಲಿ ಭಾರತಕ್ಕೆ ವಿಶ್ವಕಪ್: ವರ್ಮ ಗೆ ಚಿನ್ನ, ಚೌಧರಿಗೆ ಕಂಚು

ಶೂಟಿಂಗ್ ನಲ್ಲಿ ಭಾರತಕ್ಕೆ ವಿಶ್ವಕಪ್: ವರ್ಮ ಗೆ ಚಿನ್ನ, ಚೌಧರಿಗೆ ಕಂಚು

ದೆಹಲಿ: ಬ್ರೆಜಿಲ್ ನ ರಿಯೋ ಡೆ ಜನೆರಿಯೊ ದಲ್ಲಿ ನಡೆದ ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟದ ವಿಶ್ವ ಕಪ್ ನ 10 ಎಂ ಏರ್ ಪಿಸ್ತೂಲ್, ಶೂಟಿಂಗ್ ಹಾಗೂ ರೈಫಲ್ ಸ್ಪರ್ಧೆಯಲ್ಲಿ  ಏಷ್ಯಿಯನ್ ಕ್ರೀಡೆಗಳ ಪದಕ ವಿಜೇತ ಭಾರತದ ಅಭಿಷೇಕ ವರ್ಮ ಚಿನ್ನದ (244.2) ಪದಕ ಪಡೆದಿದ್ದರೆ, 17 ವರ್ಷದ ಸೌರಭ ಚೌಧರಿ ಅವರು ಕಂಚಿನ ಪದಕ (221.9) ವಿಜೇತರಾಗಿದ್ದಾರೆ.ಟರ್ಕಿಯ ಇಸ್ಮಾಯಿಲ್ ಕೆಲೆಸ್ ಅವರು ಬೆಳ್ಳಿ(243.1) ಗೆದ್ದುಕೊಂಡರು.

ಭಾರತವು ಈವರೆಗೆ ಎರಡು ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನ ಪದಕಗಳನ್ನು ಪಡೆಯುವ ಮೂಲಕ ಉನ್ನತ ಶ್ರೇಣಿಯಲ್ಲಿದೆ. ಗುರುವಾರ ನಡೆದ ಅರ್ಹತಾ ಪರೀಕ್ಷೆಯಲ್ಲಿ ಚೌಧರಿ ಅವರು (584 ಅಂಕ) 4ನೇ ಸ್ಥಾನ, ವರ್ಮ ಅವರು ಅಂತಿಮ ಪಂದ್ಯ ಪ್ರವೇಶಿಸಿದ್ದು5ನೇ ಸ್ಥಾನದಲ್ಲಿದ್ದಾರೆ. ಗೌರವ್ ರಾಣಾ (571 ಅಂಕ) 44ನೇ ಸ್ಥಾನದಲ್ಲಿದ್ದಾರೆ.

ಮಹಿಳೆಯರ 10 ಎಂ ಏರ್ ರೈಫಲ್ ಸ್ಪರ್ಧೆಯಲ್ಲಿಬುಧವಾರ ಎಲವೆನಿಲ್ ವಲರಿವನ್ 10 ಎಂ ಏರ್ ರೈಫಲ್ ಸ್ಪರ್ಧೆಯಲ್ಲಿಚಿನ್ನದ ಪದಕ ಗಳಿಸಿದ್ದರು. ಪುರುಷರ 50 ಎಂ ರೈಫಲ್  ಸ್ಪರ್ಧೆಯಲ್ಲಿ ಸಂಜೀವ್ ರಜಪೂತ್ ಬೆಳ್ಳಿ ಪದಕ ಪಡೆದಿದ್ದರು.

ಕಳೆದ ವರ್ಷ ಜಕಾರ್ತಾದಲ್ಲಿ ನಡೆದ ಏಷ್ಯಾಡ್ ಸ್ಪರ್ಧೆಯಲ್ಲಿ ವರ್ಮ ಕಂಚು ಪದಕ ಗೆದ್ದಿದ್ದರು. ಚೌಧರಿ ಸಹ ಮರುದಿನ ಆಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಪ್ರಸಕ್ತ ವರ್ಷದಲ್ಲಿ 6ನೇ ಆಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟದ ವಿಶ್ವ ಕಪ್ ಸ್ಪರ್ಧೆಯಲ್ಲಿ ಈಗಾಗಲೇ ಅವರು 5 ಚಿನ್ನದ ಪದಕಗಳನ್ನು ಗೆದ್ದಿದ್ದು, ಈ ಬಾರಿ ಮಾತ್ರ ಅವರು ಕಂಚು ಪದಕ ಪಡೆದಿದ್ದಾರೆ.

ವರ್ಮ ಹಾಗೂ ಚೌಧರಿ ಅವರು ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟದ ವಿಶ್ವ ಕಪ್ ಸ್ಪರ್ಧೆಯ 4 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅಂತಿಮ ಸ್ಪರ್ಧೆಗೆ ಅವರ ಹೊಡೆತಗಳ ಅಂಕಗಳು ಕ್ರಮವಾಗಿ 584 ಹಾಗೂ 582 ಇವೆ. ಉಕ್ಕೇನಿಯನ್ ಆಟಗಾರ ಒಮೆಲ್ಚುಕ್ ಅವರ ಅಂಕಗಳು 585 ಇದ್ದು, ಪ್ರಥಮ ಸ್ಥಾನದಲ್ಲಿದ್ದಾರೆ.