ಇರಾನ್‌ ನಲ್ಲಿ ಯುದ್ಧದ ಕಾರ್ಮೋಡ ; ಭಾರತದ ಹೂಡಿಕೆಗೂ ದುಷ್ಪರಿಣಾಮ

ಅಮೆರಿಕ ಇರಾನ್ ಮೇಲೆ ನಿಬಂಧನೆಗಳನ್ನೇರಿದಾಗ, ಭಾರತ ಯೋಜನೆಗಳನ್ನು ಮುಂದುವರಿಸುವುದಕ್ಕೆ ಷರತ್ತು ಸಹಿತ ಅನುಮತಿಯನ್ನೇನೋ ಕೊಟ್ಟಿದೆ. ಆದರೆ ಈಗ ಯುದ್ಧದ ಕಾರ್ಮೋಡ ಕಟ್ಟುತ್ತಿರುವ ಹಿನ್ನೆಲೆಯಲ್ಲಿ, ತೈಲ ವ್ಯಾಪಾರ ವಹಿವಾಟಿನಲ್ಲಿ ಭಾರತದ ಹಲವಾರು ಯೋಜನೆಗಳು, ಬಿಲಿಯನ್ ಡಾಲರ್‌ಗಟ್ಟಳೆ ಹೂಡಿಕೆಯ ಯೋಜನೆಗಳು ಸ್ಥಗಿತವಾದರೆ, ಅವೆಲ್ಲ ಅಧಿಕ ಪ್ರಮಾಣದಲ್ಲೇ ದುಷ್ಪರಿಣಾಮ ಬೀರುವ ಆತಂಕಗಳೂ ಇವೆ

ಇರಾನ್‌ ನಲ್ಲಿ ಯುದ್ಧದ ಕಾರ್ಮೋಡ ; ಭಾರತದ ಹೂಡಿಕೆಗೂ ದುಷ್ಪರಿಣಾಮ

ಮೇಲ್ನೋಟಕ್ಕೆ ಅಣ್ವಸ್ತ್ರ ವಿರುದ್ದದ ಕದನ ಎನಿಸಿದರೂ ಒಳಗೊಳಗೆಯೇ ಸಂಪದ್ಭರಿತ ತೈಲ ಮಾರುಕಟ್ಟೆ ತೆಕ್ಕೆಗೆ ತೆಗೆದುಕೊಳ್ಳುವ ಹುನ್ನಾರದಿಂದಲೂ ಅಮೆರಿಕಾ, ಇರಾನ್ ಮೇಲೆ ಕ್ರಮ ತೆಗೆದುಕೊಳ್ಳಲು ನಿಂತಿರುವುದು, ಮುಂದೆ ಮಧ್ಯಪ್ರಾಚ್ಯದಲ್ಲಿ ಯುದ್ಧಕ್ಕೆ ನಾಂದಿಯಾಡೀತೇ ಎಂಬ ಆತಂಕಗಳ ಕವಚಿಕೊಂಡು ಕೂತಿವೆ.

ಪರಮಾಣು ಒಪ್ಪಂದಗಳ ಕಾರಣದಿಂದ, ಇರಾನ್‌ನೊಡನೆ ವ್ಯಾಪಾರ ಸಂಬಂಧಗಳನ್ನು ನಿಲ್ಲಿಸಬೇಕೆಂದು ಅಮೆರಿಕಾ ಮೇ ತಿಂಗಳಲ್ಲೆ ನಿರ್ಬಂಧಗಳನ್ನೇರಿದೆ. ಅದರಂತೆ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಆ ರಾಷ್ಟ್ರದಿಂದ ತೈಲ ತರಿಸಿಕೊಳ್ಳುವುದನ್ನು ನಿಲ್ಲಿಸಿವೆ. ಇನ್ನುಳಿದಂತೆ ಬೇರೆ ಬೇರೆ ಪರಿಣಾಮಗಳನ್ನೂ ಆಯಾಯ ರಾಷ್ಟ್ರಗಳು ಎದುರಿಸುತ್ತಿವೆ.

ಮುಖ್ಯವಾಗಿ ಭಾರತ, ಅಪಘಾನಿಸ್ತಾನದತ್ತ ತೆರಳಲು ಮತ್ತು ಆ ಭಾಗದಲ್ಲಿನ,  ಸೆಂಟ್ರಲ್ ಏಷ್ಯಾದ ವ್ಯಾಪಾರಾಭಿವೃದ್ಧಿ ಮಾಡಿಕೊಳ್ಳಲು  ಪಾಕಿಸ್ತಾನದ ಮೂಲಕ ಹೋಗಬೇಕಿತ್ತು. ಆದಕ್ಕೆ ಇತಿಶ್ರೀಯಾಡುವ ಉದ್ದೇಶದಿಂದ ಭಾರತ-ಇರಾನ್-ಅಪಘಾನಿಸ್ತಾನ ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡು, ಅದರನುಸಾರ ಇರಾನ್‌ ನ ಬಂದರನ್ನು ಅಭಿವೃದ್ಧಿ ಪಡಿಸಿಕೊಳ್ಳುತ್ತಿವೆ. ಪಾಕಿಸ್ತಾನದ ಗಡಿಯಲ್ಲಿ ಚೀನಾ ನಿರ್ಮಿಸಿರುವ ಗ್ವದಾರ್ ಬಂದರುನಿಂದ 100 ಕಿಮೀ ದೂರದಲ್ಲಿ ಇರಾನ್‌ ನ ಚಬಹರ್(ನಾಲ್ಕು ಚಿಲುಮೆಗಳು) ಎಂಬಲ್ಲಿ ಷಾಹಿದ್ ಕಲಾಂತರಿ ಮತ್ತು ಷಾಹಿದ್ ಬೆಹೆಷ್ಟಿ ಎಂಬ ಎರಡು ಬಂದರುಗಳು, ರೈಲು ರಸ್ತೆ ಮಾರ್ಗ, ಉದ್ದಿಮೆಗಳ ಅಭಿವೃದ್ಧಿಯಂಥದ್ದು ಈ ಒಪ್ಪಂದದಲ್ಲಿ ಸೇರಿವೆ. ಅದರಂತೆ ಷಾಹಿದ್ ಬೆಹೆಷ್ಟಿ ಬಂದರನ್ನು ಭಾರತಕ್ಕೆ ಕಳೆದ ವರ್ಷ ಕೊಡಲಾಗಿದೆ. ಇಲ್ಲಿಂದ 4500 ಕಂಟೈನರ್‌ಗಳು ಮಧ್ಯ ಏಷ್ಯಾಕ್ಕೆ ಹೋಗಿವೆ.

8 ಬಿಲಿಯನ್  ಡಾಲರ್‌ಗಟ್ಟಳೆ ಭಾರತದ ಹಣ ಹೂಡಿಕೆಯೂ ಚಬಹರ್ ಬಂದರು ಅಭಿವೃದ್ಧಿ, ಚಬಹರ್ ವಿಶೇಷ ಆರ್ಥಿಕ ವಲಯದಲ್ಲಿ  ಕೈಗಾರಿಕಾ ಬೆಳವಣಿಗೆಯ ಯೋಜನೆಗಳಡಿಯಲ್ಲಿ ಒಂಬತ್ತಕ್ಕೂ ಹೆಚ್ಚು ಯೋಜನೆಗಳ ಗುತ್ತಿಗೆ ಭಾರತ ಪಡೆದಿದೆ.  ಸೌದಿ ಜತೆ ಉತ್ತಮ ಸಂಬಂಧವನ್ನೂ ಹೊಂದಿದೆ. ಇರಾನ್ ಮತ್ತು ಅಪಘಾನಿಸ್ತಾನ ನಡುವೆ 24 ಕಿಮೀ ರಸ್ತೆಯನ್ನು ಭಾರತ ನಿರ್ಮಿಸಿದೆ. ಮಧ್ಯ ಅಪಘಾನಿಸ್ತಾನದಲ್ಲಿ 11 ಬಿಲಿಯನ್ ಡಾಲರ್ ಹೂಡಿಕೆಯನ್ನು ಹಾಜಿಗಕ್ ಕಬ್ಬಿಣ ಮತ್ತು ಅದಿರು ಉದ್ದಿಮೆಯಲ್ಲಿ ಭಾರತ ತೊಡಗಿಸುತ್ತಿದೆ. ಹಾಜಿಗಕ್ ರೈಲ್ವೆ ಅಭಿವೃದ್ದಿಗೂ ಭಾರತ ಹೂಡಿಕೆ ಮಾಡಿ,  ಪಾಕಿಸ್ತಾನದ ಗೊಡವೆಯೇ ಇಲ್ಲದೆ ಕಾಬೂಲ್ ತಲುಪುವ ವಿಮಾನ ನಿಲ್ದಾಣಗಳ ನಿರ್ಮಾಣವಾಗುತ್ತಿವೆ. ಇದರಿಂದಾಗಿ ಭಾರತ ಕಝಕಿಸ್ತಾನ,ರಷ್ಯಾ, ಯುರೋಪ್ ಸೇರಿದಂತೆ ಹಲವು ರಾಷ್ಟ್ರಗಳ ಸಂಪರ್ಕ ಈ ಮಾರ್ಗದಿಂದಲೇ ಮಾಡಿಕೊಳ್ಳುತ್ತೆ.

ಇಂಥವೆಷ್ಟೋ ಅಭಿವೃದ್ಧಿ ಕಾರ್ಯಕ್ರಮಗಳು, ವ್ಯಾಪಾರಾಭಿವೃದ್ದಿಗಾಗಿನ ಮಾರ್ಗಗಳನ್ನು ಹೆಚ್ಚಿಸಿಕೊಳ್ಳಲು ಭಾರತ ಭಾರೀ ಹೂಡಿಕೆಯನ್ನೂ ಇರಾನ್ ಭಾಗದಲ್ಲಿ ಮಾಡಿದೆ. ಅಮೆರಿಕ ಇರಾನ್ ಮೇಲೆ ನಿಬಂಧನೆಗಳನ್ನೇರಿದಾಗ, ಭಾರತ ಈ ಯೋಜನೆಗಳನ್ನು ಮುಂದುವರಿಸುವುದಕ್ಕೆ ಷರತ್ತು ಸಹಿತ ಅನುಮತಿಯನ್ನೇನೋ ಕೊಟ್ಟಿದೆ. ಆದರೆ ಈಗ ಯುದ್ಧದ ಕಾರ್ಮೋಡ ಕಟ್ಟುತ್ತಿರುವ ಹಿನ್ನೆಲೆಯಲ್ಲಿ, ತೈಲ ವ್ಯಾಪಾರ ವಹಿವಾಟಿನಲ್ಲಿ ಭಾರತದ ಹಲವಾರು ಯೋಜನೆಗಳು, ಬಿಲಿಯನ್ ಡಾಲರ್‌ಗಟ್ಟಳೆ ಹೂಡಿಕೆಯ ಯೋಜನೆಗಳು ಸ್ಥಗಿತವಾದರೆ, ಅವೆಲ್ಲ ಅಧಿಕ ಪ್ರಮಾಣದಲ್ಲೇ ದುಷ್ಪರಿಣಾಮ ಬೀರುವ ಆತಂಕಗಳೂ ಇವೆ

ಅಂದಹಾಗೆ, ಕ್ರಿ.ಪೂ. 2500 ರಲ್ಲಿ ಅಲೆಗ್ಸಾಂಡರ್ ಈ ಚಬಹರ್‌ ನ್ನು ವಶಕ್ಕೆ ಪಡೆದಿದ್ದ. ಆಗ ಅಲ್‌ ಬರೂನಿಯು ಈ ಬಂದರುನಿಂದಲೇ ಭಾರತದ ಕಡಲ ತೀರ ಆರಂಭ ಎಂದೂ ಬರೆದಿದ್ದಾನೆ.