ವೆಸ್ಟ್‌ ಇಂಡೀಸ್‌ಗೆ ಆರಂಭಿಕ ಆಘಾತ: ಮುನ್ನಡೆ ಕಾಯ್ದುಕೊಂಡ ಭಾರತ ತಂಡ

ವೆಸ್ಟ್‌ ಇಂಡೀಸ್‌ಗೆ ಆರಂಭಿಕ ಆಘಾತ: ಮುನ್ನಡೆ ಕಾಯ್ದುಕೊಂಡ ಭಾರತ ತಂಡ

ಜಮೈಕಾ: ಜಮೈಕಾದ ಸಬೀನಾ ಪಾರ್ಕ್‌ ಅಂಗಳದಲ್ಲಿ ನಡೆಯುತ್ತಿರುವ ಪ್ರಥಮ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್‌ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದಲ್ಲಿ  ಬೃಹತ್‌ ಮುನ್ನಡೆ ಕಾಯ್ದುಕೊಂಡಿದೆ. 

ಅಜಿಂಕ್ಯಾ ರಹಾನೆ (ಔಟಾಗದೆ 64 ರನ್‌) ಹಾಗೂ ಹನುಮ ವಿಹಾರಿ (ಔಟಾಗದೆ 53 ರನ್‌) ಅವರು ಗಳಿಸಿದ ಅರ್ಧ ಶತಕ ಮುನ್ನೆಡೆ ಕಾಯ್ದುಕೊಳ್ಳಲು ಸಹಕಾರಿಯಾಯಿತು. 
ಪ್ರಥಮ ಇನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್‌ 47.1 ಓವರ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಪತನಗೊಳಿಸಿಕೊಂಡ ಬಳಿಕ 299 ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ತಂಡ 54.4 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 168 ರನ್‌ ಗಳಿಸಿತು. ಆ ಮೂಲಕ 467 ರನ್‌ ಬೃಹತ್‌ ಮುನ್ನಡೆ ಸಾಧಿಸಿದೆ.  ಬಳಿಕ ನಾಯಕ ವಿರಾಟ್‌ ಕೊಹ್ಲಿ ದ್ವಿತೀಯ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡರು.

ದ್ವಿತೀಯ ಇನಿಂಗ್ಸ್‌ನಲ್ಲಿಯೂ ಕೆ.ಎಲ್‌ ರಾಹುಲ್‌ ಕೈ ಕೊಟ್ಟರಾದರೂ ಬರೋಬ್ಬರಿ 63 ಎಸೆತಗಳನ್ನು ಆಡಿದ ರಾಹುಲ್‌,  ಕೇವಲ ಆರು ರನ್‌ ಗಳಿಸಿ ಕೇಮರ್‌ ರೋಚ್‌ ಎಸೆತದಲ್ಲಿ ಔಟ್‌ ಆದರು. ಪ್ರಥಮ ಇನಿಂಗ್ಸ್‌ನಲ್ಲಿ ಅರ್ಧ ಶತಕ ಸಿಡಿಸಿದ್ದ ಮಯಾಂಕ್‌ ಅಗರ್ವಾಲ್‌ ಕೂಡ ಕೇವಲ ನಾಲ್ಕು ರನ್‌ಗೆ ಸೀಮಿತರಾದರು.