ಆಡಳಿತ ಸಂವಹನ ಕ್ಕೆ ದೇಸಿ ವಾಟ್ಸ್ ಆಪ್ ಹೊಂದುವ ನಿಟ್ಟಿನಲ್ಲಿ ಭಾರತದ ಹೆಜ್ಜೆ !

ಆಡಳಿತ ಸಂವಹನ ಕ್ಕೆ ದೇಸಿ ವಾಟ್ಸ್ ಆಪ್ ಹೊಂದುವ ನಿಟ್ಟಿನಲ್ಲಿ ಭಾರತದ ಹೆಜ್ಜೆ !

ಫ್ರಾನ್ಸ್ ನಂತೆ ಭಾರತವು ಸಹ ಆಡಳಿತ ಸಂವಹನ ಕ್ಕೆ ಸ್ವದೇಶೀ ನಿರ್ಮಿತ ಚಾಟ್ ಆಪ್ ಅನ್ನು  ರೂಪಿಸಿ ಸರ್ಕಾರಿ ನೌಕರರು ಅದನ್ನು ಬಳಕೆ ಮಾಡುವ ಚಿಂತನೆ ನಡೆಸಿದೆ. ಎಕನಾಮಿಕ್ ಟೈಮ್ಸ್ ವರದಿ  ಪ್ರಕಾರ ದೆಹಲಿ ಸರ್ಕಾರ ವು ಈ ನಿಟ್ಟಿನಲ್ಲಿ ಸ್ವದೇಶೀ ನಿರ್ಮಿತ ಮಿಂಚಂಚೆ (ಈ -ಮೇಲ್ )ಮತ್ತು ಚಾಟ್ ಆಪ್ ನ ಹುಡುಕಾಟ ನಡೆಸಿದೆ. 

ಇದ್ದಕ್ಕಿದ್ದ ಹಾಗೆ ಈ ಒಂದು ಯೋಚನೆ ಯಾಕೆ? ಮುಖ್ಯವಾಗಿ ಪ್ರಸಕ್ತ ನಡೆಯುತ್ತಿರುವ ಅಮೇರಿಕ ಮತ್ತು ಹುವಾಇ ಕಂಪನಿ ಹಾಗೂ ಚೈನಾ ನಡುವಿನ ಬಿಕ್ಕಟ್ಟು. ಇದು ದೆಹಲಿಗೆ ಅಪಾಯದ ಸೂಚನೆ ನೀಡುತ್ತಿದೆ. ಅಮೇರಿಕ ವು ಈ ಕಂಪೆನಿಯ ಅಸ್ತಿತ್ವ ದ ಮೇಲೆ ಸಂದೇಹಪಟ್ಟಿರುವುದರಿಂದ ಎಚ್ಚೆತ್ತುಕೊಳ್ಳಬೇಕಾಗಿದೆ. ಇಷ್ಟೇ ಅಲ್ಲದೆ ವಿದೇಶಿ ಕಂಪನಿ ನಿರ್ಮಿತ ತಂತ್ರಾಂಶಗಳ ಅವಲಂಬನೆಯಲ್ಲಿ ಕಡಿತಗೊಳಿಸುವುದಾಗಿದೆ . ಇದಕ್ಕೆ ಸಂಬಂಧ ಪಟ್ಟಂತೆ ಹೆಸರು ಹೇಳಲಿಚ್ಛಿಸದ ಉನ್ನತ ದರ್ಜೆಯ ಅಧಿಕಾರಿಯೊಬ್ಬರು “ನಮ್ಮ ಸಂವಹನದಲ್ಲಿ ಗೌಪ್ಯತೆ ಕಾಯ್ದು ಕೊಳ್ಳಬೇಕಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ. 

ಡೊನಾಲ್ಡ್ ಟ್ರಂಪ್ ರ ಭಾರತದೊಂದಿಗಿನ ವಾಣಿಜ್ಯ ನೀತಿಯಿಂದಾಗಿ ಭಾರತವು ಸಹ ಅಮೇರಿಕಾದ ವಸ್ತುಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದೆ. ಈ ಎಲ್ಲ ಕಾರಣಗಳಿಂದ ಭಾರತವು ಫ್ರಾನ್ಸ್ ನ ಹಾದಿಯಲ್ಲಿ ಹೆಜ್ಜೆ ಇರಿಸತೊಡಗಿದೆ. ಫ್ರಾನ್ಸ್ ದೇಶವು ಟಿ ಚಾಪ್ (ಖಿ ಛಿhಚಿಠಿ )ಎಂಬ ಚಾಟ್ ಆಪ್ ಅನ್ನು ಸರ್ಕಾರಿ ಕಚೇರಿಗಳಲ್ಲಿ ಬಳಸಲು ಈ ವರ್ಷದ ಮೊದಲಲ್ಲಿ ರೂಪಿಸಿತ್ತು. ಈ ಆಪ್ ಅನ್ನು ಸರ್ಕಾರಿ ನೌಕರರು ಮಾತ್ರವೇ ಬಳಸಬಹುದಾಗಿದ್ದು ಅದರ ಆಡಿಟಿಂಗ್ ಮತ್ತು ಡೇಟಾ ಅನಾಲಿಸಿಸ್ ಕಾರ್ಯವನ್ನು ಔಟ್ ಸೋರ್ಸ್ ಮಾಡಿತ್ತು.ಜಾರಿಯಾದ 24 ಗಂಟೆಗಳಲ್ಲಿ ಭದ್ರತೆಯ ವಿಷಯವಾಗಿ ಆಪ್ ನಲ್ಲಿ ನ್ಯೂನತೆಗಳು ಕಂಡರೂ ದೇಸಿ ಚಾಟ್ ಆಪ್ ಎಲ್ಲರ ಗಮನ ಸೆಳೆಯಿತು.

ಚೈನಾ ದೇಶವು  ಫಾರಿನ್ ಕಂಪನಿಗಳು ತನ್ನ ನೆಲದ ಸಂವಹನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವುದರಿಂದ ದೂರವಿರಿಸಿ ತಾನೇ ಕಸ್ಟಮೈಜ್ ಮಾಡಿದ ಜನಪ್ರಿಯ ಆವೃತ್ತಿಯ ಸಿಸ್ಟಮ್ ಗಳನ್ನು ಸರ್ಕಾರಿ ಕಚೇರಿಗಳಲ್ಲಿ ಬಳಸುತ್ತಿದೆ. ಉತ್ತರ ಕೊರಿಯಾ ಸಹ ಅದನ್ನೇ ಮಾಡುತ್ತಿದೆ. ಹಾಗಾಗಿ ಭಾರತಕ್ಕೆ ಇದೇನೂ ಅಭೂತಪೂರ್ವ ಹೆಜ್ಜೆಯಲ್ಲ. ವಿದೇಶ ಸಂವಹನ ತಂತ್ರಾಂಶಗಳನ್ನು ದೂರವಿರಿಸುವುದು ಸಾಧ್ಯವಾದರೆ ಭಾರತದ ಈ ಪ್ರಯತ್ನ ಮೊದಲನೆಯದೇನಲ್ಲ. ಹಿಂದೆಯೂ ಸಹ ಸರ್ಕಾರಿ ಕಚೇರಿಗಳಲ್ಲಿ ವಿದೇಶಿ ಮೆಸೇಜಿಂಗ್ ಆಪ್ ಗಳ ಬಳಕೆಯನ್ನು ನಿರ್ಬಂಧಿಸಲಾಗಿತ್ತು. ಈ ನಿಟ್ಟಿನಲ್ಲಿ ವಿದೇಶಿ ತಂತ್ರಾಂಶಗಳ ಬಳಕೆಯಲ್ಲಿ ಭದ್ರತೆಯನ್ನು ಕಾಯ್ದುಕೊಳ್ಳುವುದು ಸರ್ಕಾರಕ್ಕೆ ದೊಡ್ಡ ಸವಾಲಿನ ಪ್ರಶ್ನೆ. ಕಾರಣ ಅದನ್ನು ಸರಿಪಡಿಸಲು ಅಗತ್ಯವಾದ ನೈಪುಣ್ಯ, ಬಜೆಟ್ ಮತ್ತು ಪರಿಣಿತಿ ಹೊಂದಿದ ತಜ್ಞರ ಅಭಾವ. 

ಭಾರತದಲ್ಲಿ ಲಿನಕ್ಸ್ ಆಧಾರಿತ ಡೆಸ್ಕ್ ಟಾಪ್ ಆಪರೇಟಿಂಗ್ ಸಿಸ್ಟಮ್  ಬಾಸ್ (BOSS)ನ ಬಳಕೆಯ  ಪ್ರಯೋಗ ನಡೆದು ತಕ್ಕ ಮಟ್ಟಿನ ಯಶಸ್ಸು ಕಂಡಿದೆ. ಆದರೆ ಎಲ್ಲಾ ಸರ್ಕಾರಿ ವಹಿವಾಟಿಗೆ ಈಗಲೂ ಮೈಕ್ರೋಸಾಫ್ಟ್ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ನ ಬಳಕೆಯಿಂದಾಗಿ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. 

ಭಾರತದಲ್ಲಿ ಫೇಸ್ ಬುಕ್ ನ ವಾಟ್ಸ್ ಆಪ್, ಗೂಗಲ್ ನ ಆಂಡ್ರಾಯ್ಡ್ ಮತ್ತು ಮೈಕ್ರೋಸಾಫ್ಟ್ ನ ವಿಂಡೋಸ್ ತಂತ್ರಾಂಶಗಳು ದೇಶದ ಬಹುತೇಕ ಸ್ಮಾರ್ಟ್ ಫೋನ್ ಮತ್ತು ಕಂಪ್ಯೂಟರ್ ಗಳ ಜೀವಾಳವಾಗಿವೆ. ಹೀಗಿರುವಾಗ ವಿಶ್ವದಲ್ಲಿ ಭಾರತವು ಮೂರನೆಯ ಅತೀ ದೊಡ್ಡ ಸ್ಟಾರ್ಟ್ ಅಪ್ ದೇಶವಾಗಿ ಹೊರ ಹೊಮ್ಮಿದ್ದರೂ ಸಹ ತನ್ನ ಸ್ವಂತ ಉಪಯೋಗಕ್ಕಾಗಿ ಜನಪ್ರಿಯ ವಿದೇಶಿ ಸಂವಹನ ತಂತ್ರಾಂಶಗಳಿಗೆ ಪರ್ಯಾಯ ವಾಗಿ ಸ್ವದೇಶೀ ನಿರ್ಮಿತ ತಂತ್ರಾಂಶ ರೂಪಿಸುವಲ್ಲಿ ಸೋತಿದೆ.ಈ ನಿಟ್ಟಿನಲ್ಲಿ ಭಾರತ  ಹೆಜ್ಜೆ  ಇರಿಸಿರುವ ಹಾದಿಯನ್ನು ಕಾದು ನೋಡೋಣ.