ಭಾರತದ ಹಾಕಿ ದಿಗ್ಗಜ ಬಲ್ಬೀರ್‌ ಸಿಂಗ್‌ ನಿಧನ

ಭಾರತದ ಹಾಕಿ ದಿಗ್ಗಜ ಬಲ್ಬೀರ್‌ ಸಿಂಗ್‌ ನಿಧನ

ಮೊಹಾಲಿ : ಭಾರತದ ಹಾಕಿ ಕ್ಷೇತ್ರದ ದಿಗ್ಗಜ ಹಾಗೂ ಆಧುನಿಕ ಒಲಂಪಿಕ್‌ ಇತಿಹಾಸದ ದಂತಕಥೆ ಬಲ್ಬೀರ್‌ ಸಿಂಗ್‌ ಸೀನಿಯರ್‌ ರವರು ನ್ಯೂಮಾನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಅವರು ಪಂಜಾಬ್‌ ನ ಮೊಹಾಲಿ ಆಸ್ಪತ್ರೆಯಲ್ಲಿ ನಿಧನರಾದರು ಆದರೂ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಒಲಂಪಿಕ್ಸ್‌ ಕ್ರೀಡಾಕೂಟದಲ್ಲಿ ಮೂರು ಬಾರಿ ಚಿನ್ನದ ಪದಕ ಗೆದ್ದಿದ್ದ ಬಲ್ಬೀರ್‌ ಸಿಂಗ್‌ ಭಾರತ ಹಾಕಿ ತಂಡದ ಸದಸ್ಯರಾಗಿದ್ದರು, ಆಧುನಿಕ ಒಲಂಪಿಕದ ಚರಿತ್ರೆಯ 196 ದಿಗ್ಗಜರಲ್ಲಿ ಬಲ್ಬೀರ್‌ ಅವರನ್ನು ಅಂತರಾಷ್ಟ್ರೀಯ ಒಲಂಪಿಕ್‌ ಸಮಿತಿ ಆಯ್ಕೆ ಮಾಡಿತ್ತು. ಈ ಪ್ರತಿಷ್ಠಿತ ಗೌರವಕ್ಕೆ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಬಲ್ಬೀರ್‌ ಸಿಂಗ್‌ ಸೀನಿಯರ್‌ ಭಾಜನರಾಗಿದ್ದರು.

ಒಲಂಪಿಕ್‌ ಕ್ರೀಡಾಕೂಟದಲ್ಲಿ ಭಾರತೀಯ ಹಾಕಿ ತಂಡ ಮೂರು ಬಾರಿ ಬಂಗಾರದ ಪದಕಗಳನ್ನು ಗೆಲ್ಲುವಲ್ಲಿ ಬಲ್ಬೀರ್‌ ಮಹತ್ವದ ಪಾತ್ರ ವಹಿಸಿದ್ದರು. ಒಲಂಪಿಕ್‌ ಪುರುಷರ ಫೈನಲ್‌ ಕದನದಲ್ಲಿ ಸಿಂಗ್‌ ಗಳಿಸಿದ ವೈಯಕ್ತಿಕ ಭರ್ಜರಿ ಗೋಲುಗಳು ದಾಖಲೆಯಾಗಿ ಉಳಿದಿವೆ.