ರೋಹಿತ್-ರಾಹುಲ್ ಶತಕದ ಜೊತೆಯಾಟ : ಭಾರತಕ್ಕೆ 7 ವಿಕೆಟ್‌ಗಳ ಗೆಲುವು

ರೋಹಿತ್-ರಾಹುಲ್ ಶತಕದ ಜೊತೆಯಾಟ : ಭಾರತಕ್ಕೆ 7 ವಿಕೆಟ್‌ಗಳ ಗೆಲುವು

ಲೀಡ್ಸ್ : ಆರಂಭಿಕ ಬ್ಯಾಟ್ಸ್‌ಮನ್‍ ರೋಹಿತ್‍ ಶರ್ಮಾ ಮತ್ತು ಕೆಎಲ್‍ ರಾಹುಲ್‍ ಭರ್ಜರಿ ಆಟ ಪ್ರದರ್ಶಿಸಿದ್ದು ಶ್ರೀಲಂಕಾ ವಿರುದ್ಧ ಭಾರತ 7 ವಿಕೆಟ್‍ ಗೆಲುವು ಸಾಧಿಸಿದೆ.

ಟಾಸ್‍ ಗೆದ್ದು ಬ್ಯಾಟಿಂಗ್‍ ಆಯ್ದುಕೊಂಡಿದ್ದ ಶ್ರೀಲಂಕಾ ಭಾರತಕ್ಕೆ 265 ರನ್‍ ಗೆಲುವಿನ ಗುರಿ ನೀಡಿತ್ತು. ಭಾರತದ ಬೌಲಿಂಗ್‍ ವಿಭಾಗದ ನಿಯಂತ್ರಣದಿಂದಾಗಿ ಶ್ರೀಲಂಕಾ ಆರಂಭದಲ್ಲೇ ತನ್ನ ಪ್ರಮುಖ ವಿಕೆಟ್‍ಗಳನ್ನು ಕಳೆದುಕೊಂಡಿತ್ತು.

ಶ್ರೀಲಂಕಾ ಗುರಿ ಬೆನ್ನಟ್ಟಲು ಶುರು ಮಾಡಿದ ಭಾರತದ ಆರಂಭಿಕ ಬ್ಯಾಟ್ಸ್‌ಮನ್‍ಗಳಾದ ರೋಹಿತ್‍ ಶರ್ಮಾ ಮತ್ತು ರಾಹುಲ್‍ ಶತಕ ಗಳಿಸಿದ್ದಾರೆ. ವಿಶ್ವಕಪ್‍ ಕ್ರಿಕೆಟ್‍ನ ಐದನೇ ಶತಕ ಸಿಡಿಸಿ 103 ರನ್‍ ಗಳಿಸಿರುವ ರೋಹಿತ್‍  ಕುಮಾರ್‍ ಸಂಗಕ್ಕರ ದಾಖಲೆಯನ್ನು ಮುರಿದಿದ್ದಾರೆ. ಈವರೆಗೆ ವಿಶ್ವಕಪ್‍ ಕ್ರಿಕೆಟ್‍ ಸರಣಿಯಲ್ಲಿ ನಾಲ್ಕು ಶತಕ ಗಳಿಸುವ ಮೂಲಕ ಸಂಗಕ್ಕರ ನಿರ್ಮಿಸಿದ್ದ ದಾಖಲೆಯನ್ನು ರೋಹಿತ್‍ ಹಿಂದಿಕ್ಕಿದಂತಾಗಿದೆ.

ಉತ್ತಮ ಆಟ ಪ್ರದರ್ಶಿಸಿದ್ದ ಕೆ ಎಲ್‍ ರಾಹುಲ್‍ 111 ರನ್‍ ಗಳಿಸಿ ಔಟ್‍ ಆಗಿದ್ದಾರೆ. ಲಸಿತ್‍ ಮಾಲಿಂಗ ಎಸೆತವನ್ನು ತಪ್ಪಿಸಲು ಹೊರಟ ರಾಹುಲ್ ಕೆಳಕ್ಕುರುಳಿ ಕೀಪರ್‍ ಕ್ಯಾಚ್‍ ನೀಡಿದ್ದಾರೆ. ರಾಹುಲ್‍ ಬಳಿಕ ಅಂಗಳಕ್ಕೆ ಬಂದ ರಿಷಬ್‍ ಪಂತ್‍ 4 ರನ್‍ ಗಳಿಸಿ ಔಟ್‍ ಆಗಿದ್ದಾರೆ. ಪಂತ್‍ ಬಳಿಕ ತಂಡದ ಗೆಲುವಿನವರೆಗೆ ಬ್ಯಾಟಿಂಗ್‍ ನಡೆಸಿರುವ ವಿರಾಟ್‍ ಕೋಹ್ಲಿ 34 ರನ್‍ ಹಾಗೂ ಹಾರ್ದಿಕ್‍ ಪಾಂಡ್ಯ 7 ರನ್‍ ಗಳಿಸಿದ್ದಾರೆ.

ಭಾರತ ತಂಡ 43.3 ನೇ ಓವರ್‍ನಲ್ಲಿ ಶ‍್ರೀಲಂಕಾ ನೀಡಿದ ಗುರಿ 265 ರನ್‍ ಗಳಿಸಿದೆ. ಶ‍್ರೀಲಂಕಾ ತಂಡದಲ್ಲಿ ಲಸಿತ್‍ ಮಾಲಿಂಗ , ರಜಿತಾ ಮತ್ತು ಉದಾನ ತಲಾ ಒಂದು ವಿಕೆಟ್‍ ಪಡೆದಿದ್ದಾರೆ.