ಭಾರತ-ನ್ಯೂಜಿಲ್ಯಾಂಡ್ ಸೆಮಿ ಫೈನಲ್ : ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಆಯ್ಕೆ

ಭಾರತ-ನ್ಯೂಜಿಲ್ಯಾಂಡ್ ಸೆಮಿ ಫೈನಲ್ : ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಆಯ್ಕೆ

ಓಲ್ಡ್‌ ಟ್ರಾಫೊರ್ಡ್: ವಿಶ್ವಕಪ್‍ ಸೆಮಿ ಫೈನಲ್‍ ಹಣಾಹಣಿಯಲ್ಲಿ ಭಾರತದೊಂದಿಗೆ ಸೆಣಸಲಿರುವ ನ್ಯೂಜಿಲ್ಯಾಂಡ್‍ ತಂಡ ಟಾಸ್‍ ಗೆದ್ದು ಬ್ಯಾಟಿಂಗ್‍ ಆಯ್ದುಕೊಂಡಿದೆ.

ಈ ಬಾರಿಯ ವಿಶ್ವಕಪ್‍ ಸರಣಿಯಲ್ಲಿ ಇದೇ ಮೊದಲ ಬಾರಿಗೆ ನ್ಯೂಜಿಲ್ಯಾಂಡ್‍ ಮತ್ತು ಭಾರತ ಮುಖಾಮುಖಿಯಾಗಲಿದೆ. ಲೀಗ್‍ ಪಂದ್ಯವೊಂದರಲ್ಲಿ ಭಾರತ-ನ್ಯೂಜಿಲ್ಯಾಂಡ್‍ ಸ್ಪರ್ಧಿಸಬೇಕಿದ್ದರೂ ಮಳೆಯಿಂದಾಗಿ ಪಂದ್ಯ ರದ್ದುಗೊಂಡಿತ್ತು.

ನ್ಯೂಜಿಲ್ಯಾಂಡ್‍ ತಂಡದ ನಾಯಕ ಕೇನ್‍ ವಿಲಿಯಮ್ಸ್ ಹಾಗೂ ವಿರಾಟ್‍ ಕೋಹ್ಲಿ 11 ವರ್ಷದ ಹಿಂದೆ 19 ವರ್ಷದ ಕೆಳಗಿನ ವಿಶ್ವಕಪ್‍ನಲ್ಲಿ ಸೆಮಿಫೈನಲ್‍ ಪಂದ್ಯದಲ್ಲಿ ನಾಯಕರಾಗಿ ಸ್ಪರ್ಧಿಸಿದ್ದರು. 11 ವರ್ಷದ ಬಳಿಕ ಇಬ್ಬರೂ ತಂಡದ ಕಪ್ತಾನರಾಗಿರುವುದರಿಂದ ಹಿಂದಿನ ಸೆಮಿಫೈನಲ್‍ ಪಂದ್ಯಕ್ಕೂ ಇಂದಿನ ಸೆಮಿಫೈನಲ್‍ ಹೋಲಿಕೆ ಇರುವುದು ವಿಶೇಷವಾಗಿದೆ. ಅಂದಿನ ಅಂಡರ್‍-19 ವಿಭಾಗದ ವಿಶ್ವಕಪ್‍ ಸೆಮಿಫೈನಲ್‍ನಲ್ಲಿ ಭಾರತ ಗೆದ್ದು ವಿಶ್ವಕಪ್‍ ಫೈನಲ್‍ನಲ್ಲೂ ಗೆಲುವು ಕಂಡಿತ್ತು.

ಭಾರತ ತಂಡದಲ್ಲಿ ಕುಲದೀಪ್‍ ಬದಲಿಗೆ ಚಾಹಲ್‍ ಅಂಗಳಕ್ಕಿಳಿಯಲಿದ್ದಾರೆ.

ಮಳೆ ಅಡ್ಡಿ ಸಾಧ್ಯತೆ

ಟಾಸ್‌ ಗೂ ಮುನ್ನ  ಓಲ್ಡ್‌ ಟ್ರಾಫೊರ್ಡ್‌ ಕ್ರೀಡಾಂಗಣ ಸುತ್ತ ಮೋಡ ದಟ್ಟೈಸಿತ್ತು. ಸಂಜೆ 6-8 ಗಂಟೆಯ ನಡುವೆ ಕ್ರೀಡಾಂಗಣದ ಬಳಿ ಮಳೆಯಾಗುವ ಸಾಧ್ಯತೆ ಶೇ.80 ರಷ್ಟು ಇದೆ ಎನ್ನಲಾಗಿದೆ.