ಕನ್ನಡದ ನಟಿಯರಿಗೆ ಇಚ್ಛೆಗೆ ತಕ್ಕಂತೆ ಸಿನಿಮಾ ಮಾಡೋ ಸ್ವಾತಂತ್ರ್ಯ ಇಲ್ವಾ..?

ಕನ್ನಡದ ನಟಿಯರಿಗೆ ಇಚ್ಛೆಗೆ ತಕ್ಕಂತೆ ಸಿನಿಮಾ ಮಾಡೋ ಸ್ವಾತಂತ್ರ್ಯ ಇಲ್ವಾ..?

ನಟನಾ ಜಗತ್ತಿನಲ್ಲಿ ಒಬ್ಬ ಪರಿಪೂರ್ಣ ಕಲಾವಿದ ಅಥವಾ ಕಲಾವಿದೆ ಅಂತ ಕರೆಯಿಸಿಕೊಳ್ಳೋಕೆ ಪ್ರತಿಯೊಂದು ಪಾತ್ರಕ್ಕೂ ನಟನಟಿಯರು ಒಗ್ಗಿಕೊಳ್ಳಬೇಕಾಗತ್ತೆ. ನಟನೆಗೆ ಯಾವುದೇ ಭಾಷೆ, ಗಡಿಯ ಅಂತರವಿರೋದಿಲ್ಲ. ಹಾಗೆಯೇ ವೇಷಭೂಷಣವೂ ಅಷ್ಟಾಗಿ ಮುಖ್ಯವಾಗೋದಿಲ್ಲ. ಅಂತಿಮವಾಗಿ ಕಲೆಯಷ್ಟೇ ಕಲಾವಿದನಿಗೆ ಅಸ್ತ್ರವಾಗಿರತ್ತೆ.  ನಾನೀಗ ಹೇಳ್ತಿರೋ ಅಂಶಗಳು ಬಾಲಿವುಡ್ ನಂತಹ ದೊಡ್ಡ ಅಂಗಳದಲ್ಲಿ ಚಾಲ್ತಿಯಲ್ಲಿವೆ. ಆದ್ರೆ ಕನ್ನಡ ಭಾಷಾ ಸಿನಿಮಾಗಳ ವಿಚಾರಕ್ಕೆ ಬಂದ್ರೆ ಅದ್ರಲ್ಲು ನಟಿಮಣಿಯರ ಪಾತ್ರದ ವಿಚಾರಕ್ಕೆ ಬಂದ್ರೆ ಇದೆಲ್ಲಾ ದೂರದ ಮಾತು.

ಕನ್ನಡದ ನಟಿಯರಿಗಿಲ್ಲಇಚ್ಛೆಗೆ ತಕ್ಕಂತೆ ಸಿನಿಮಾ ಮಾಡೋ ಸ್ವಾತಂತ್ರ್ಯ …

ಯಾವುದೇ ಸಿನಿಮಾ ನಿರ್ಮಾಣವಾಗಬೇಕಂದ್ರೆ ನಿರ್ದೇಶಕನಿಗೆ ಸಿನಿಮಾದ ಪ್ರತಿ ಪಾತ್ರಗಳ ಬಗ್ಗೆ ತನ್ನದೇ ಆದ ಕಲ್ಪನೆಯಿರತ್ತೆ. ಇಂಥ ಪಾತ್ರಗಳು ಹೀಗೆ ಬರಬೇಕು ಅನ್ನೋ ಮಾನದಂಡಗಳಿರತ್ತೆ. ಇದೇ ವಿಚಾರವನ್ನು ನಿರ್ದೇಶಕು ನಟಿಯರ ಬಳಿ ಪ್ರಸ್ತಾಪ ಮಾಡ್ತಾರೆ ಕೂಡ. ಈ ಎಲ್ಲಾ ಕಂಡಿಷನ್ ಗಳಿಗೆ ಒಪ್ಪಿಯೇ ನಟಿಯರು ಸಿನಿಮಾದಲ್ಲಿ ಕಾರ್ಯನಿರ್ವಹಿಸ್ತಾರೆ. ಸಿನಿಮಾ ತೆರೆಕಂಡಗ ಇಷ್ಟವಿದ್ದವರು ಸಿನಿಮಾ ನೋಡಬಹುದು ಇಲ್ಲದೇ ಹೋದಲ್ಲಿ ಬಿಡಬಹುದು. ಅದನ್ನು ಬಿಟ್ಟು, ಇವ್ರು ಸಿನಿಮಾದಲ್ಲಿ ಇಂಥ ಪಾತ್ರವನ್ನು ಒಪ್ಪಿಕೊಳ್ಳಬಾರದಿತ್ತು, ಅರೆ ಬರೆ ಬಟ್ಟೆ ತೊಡಬಾರದಿತ್ತು,ಆ ರೀತಿ ಸೀನ್ ಮಾಡಬಾರದಿತ್ತು ಅಂತ ಹೇಳೋಕೆ ನಾವ್ಯಾರು. ಯಾವಾಗ್ಲೂ ಬರೀ ನಟ ನಟಿಯರ ಪಾತ್ರ, ವೇಷಭೂಷಣದ ವಿಚಾರದಲ್ಲಿ ಮೂಗು ತೂರಿಸೋದ್ಯಾಕೆ..? ಬದಲಾಗಿ ಅವರ ನಟನೆ ಸಿನಿಮಾದ ಬಗ್ಗೆ ಹೇಳಬಹುದಲ್ವಾ,..?

ಬಾಲಿವುಡ್ ನಲ್ಲಿಲ್ಲ ಕನ್ನಡ ಚಿತ್ರರಂಗದಲ್ಲಿರೋ ಗೋಳು

ಕಾಲ ಬದಲಾದಂತೆ ಜನರ ಆಸಕ್ತಿ ವಲಯ ಕೂಡ ವ್ಯಾಪಿಸತ್ತೆ. ಈ ತಲೆಮಾರಿಗೆ ಯಾವ ಪ್ರಕಾರದ ಸಿನಿಮಾ ಸೂಕ್ತವೋ ಎಂಥ ಪಾತ್ರಗಳು ಉತ್ತಮ ಅನಿಸತ್ತೋ ಅಂಥ ಸಿನಿಮಾವನ್ನು ನಿರ್ದೇಶಕ ನಿರ್ಮಾಪಕರು ಮಾಡ್ತಾರೆ. ಇವರುಗಳು ಹೇಳೋ ಕಥೆ ಇಷ್ಟ ಆದ್ರೆ ನಟನಟಿಯರು ಸಿನಿಮಾದಲ್ಲಿ ಅಭಿನಯಿಸ್ತಾರೆ. ಆದ್ರಿಂದಲೇ  ಕನ್ನಡ ಬಿಟ್ಟು ಪರಭಾಷಾ ಸಿನಿಮಾಗಳಿಗೆ ಜನ ಮಾರುಹೋಗೋದು. ಹಾಗಂತ ಕನ್ನಡದಲ್ಲಿ ತಲೆಮಾರಿಗೆ ತಕ್ಕಂತ ಸಿನಿಮಾ ಮಾಡಲ್ಲ ಅಂತಲ್ಲ. ಏನೇ ಕೆಲಸ ಮಾಡಿದ್ರೂ. ಅದನ್ನು ಕೆಟ್ಟ ರೀತಿ ವಿಮರ್ಶೆ ಟ್ರೋಲ್ ಮಾಡೋಕಂತಲೇ  ಒಂದಿಷ್ಟು ಮಂದಿ ಇರ್ತಾರೆ.

ನೀರ್ ದೋಸೆ ಹರಿಪ್ರಿಯಾಗೂ ಹರಿದುಬಂದಿದ್ವು ಬ್ಯಾಡ್ ಕಮೆಂಟ್ಸ್..

ನೀರ್ ದೋಸೆ ಸಿನಿಮಾ ಹರಿಪ್ರಿಯಾ ವೃತ್ತಿ ಜೀವನದ ಸ್ಪೆಷಲ್ ಸಿನಿಮಾ. ಮೋಹಕ ತಾರೆ ರಮ್ಯಾ ಮೊದಲು ಈ ಸಿನಿಮಾವನ್ನು ಒಪ್ಪಿಕೊಂಡು ಬಳಿಕ ಈ ರೀತಿ ಪಾತ್ರದಲ್ಲಿ ಅಭಿನಯಿಸಲ್ಲ ಅಂದಿದ್ರು. ರಮ್ಯಾ ಈ ರೀತಿ ಪಾತ್ರ ಮಾಡ್ತಾರೆ ಅನ್ನೋದನ್ನೇ ಸುದ್ದಿ ಮಾಡೋಕೆ ಹೊರಟಿದ್ದ ಮಂದಿ, ರಮ್ಯಾ  ಈ ಪಾತ್ರ ಮಾಡೋದಿಲ್ಲ ಅನ್ನೋದನ್ನು ಸುದ್ದಿ ಮಾಡಿದ್ರು. ಬಳಿಕ ನೀರ್ ದೋಸೆಯಲ್ಲಿ ಹರಿಪ್ರಿಯಾ ನಟಿಸಿದ ಮೇಲೂ ಒಂದಷ್ಟು ಮಾತುಗಳು ಆಗಿಂದಾಗ ಕೇಳಿಬಂದ್ವು. ಹರಿಪ್ರಿಯಾ ಕಾಲ್ ಗರ್ಲ್ ಆಗಿ ಯಾಕಪ್ಪ ಮಾಡಬಾರದಿತ್ತು. ಇನ್ಮುಂದೆ ಅವರು ಯಾವುದೇ ಸಿನಿಮಾ ಮಾಡಿದ್ರು ಜನ ಒಪ್ಪಿಕೊಳ್ಳಲ್ಲ, ಹರಿಪ್ರಿಯಾ ಇಂಥ ಪಾತ್ರಗಳಿಗೆ ಮಾತ್ರ ಸೀಮಿತ ಎಂಬೆಲ್ಲಾ ಮಾತುಗಳು ಹರಿದಾಡಿದ್ವು. ಆದ್ರೆ ಯಾವುದೇ ಊಹಾಪೋಹಗಳು ನಿಜವಾಗ್ಲಿಲ್ಲ. ಹರಿಪ್ರಿಯಾ ಸಾಕಷ್ಟು ಸಿನಿಮಾಗಳನ್ನು ಮಾಡ್ತಾ ಮುನ್ನುಗ್ಗುತ್ತಿದ್ದಾರೆ. ಬೆಲ್ ಬಾಟಮ್ ಸಿನಿಮಾ ಕೂಡ  100 ದಿನ ಪೂರೈಸಿದೆ.

 ಐ ಲವ್ ಯೂ ಅಂದ ರಚಿತಾ ಮೇಲೂ ಟೀಕಾಪ್ರಹಾರ

ಉಪೇಂದ್ರ ಹಾಗೂ ರಚಿತಾ ರಾಮ್ ಅಭಿನಯದ ಐ ಲವ್ ಯೂ ಸಿನಿಮಾ ತೆರೆಗೆ ಬರೋಕೆ ಸಜ್ಜಾಗಿದೆ. ಈಗಾಗ್ಲೇ ರಿಲೀಸ್ ಆಗಿರೋ ಟ್ರೇಲರ್ ನ ದೃಶ್ಯಗಳ ಕುರಿತು ಸದ್ಯ ಹಲ್ ಚಲ್ ಎದ್ದಿದೆ. ಉಪೇಂದ್ರ ಜತೆ ರಚಿತಾ ರಾಮ್ ಅಭಿನಯಿಸಿದ ಸೀನ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೀವು ಈ ರೀತಿ ಮಾಡಬಾರದಿತ್ತು ಅನ್ನೋ ಮಾತುಗಳನ್ನು ಈಗಾಗ್ಲೇ ಹಲವು ಮಂದಿ ರಚಿತಾ ಕಿವಿಗೂ ಊದಿಯಾಗಿದೆ.  ಆದ್ರಿಂದಲೇ ಮೊನ್ನೆ ಐ ಲವ್ ಯೂ ಸಿನಿಮಾ ಸೆಕೆಂಡ್ ಟ್ರೇಲರ್ ರಿಲೀಸ್ ಆದಾಗ ಇನ್ಮುಂದೆ ಈ ರೀತಿ ಪಾತ್ರಗಳಲ್ಲಿ ಕಾಣಿಸಿಕೊಳ್ಳೋದಿಲ್ಲ. ಈ ರೀತಿ ನಾನು ಅಭಿನಯಿಸಿರೋ ಮೊದಲ ಹಾಗೂ ಕೊನೆಯ ಸಿನಿಮಾ ಐ ಲವ್ ಯೂ ಅಂಥ ರಚಿತಾ ಹೇಳಿದ್ರು. ರಚಿತಾ ಈ ಮಾತನಾಡಬೇಕಾದ್ರೆ ಅವ್ರ ಮುಖದಲ್ಲಿ ಬೇಸರದ ಭಾವ ಇತ್ತು. ಒಂದು ರೀತಿಯಲ್ಲಿ ಈ ಪಾತ್ರಮಾಡಬಾರದಿತ್ತು ಅನ್ನೋ ಹಾಗೆಯೇ. 2000 ದ ಇಸವಿಯಲ್ಲಿ ಬಂದಿರೋ ಹಿಂದಿ ಸಿನಿಮಾಗಳ ಬೋಲ್ಡ್ ನೆಸ್ ಕನ್ನಡ ಸಿನಿಮಾಗಳಿಗೆ ಇನ್ನು ಬಂದಿಲ್ಲ. ಹೀಗಿರುವಾಗ ಕನ್ನಡ ನಟಿಯರನ್ನು ಜನ ಇಷ್ಟೊಂದು ಕೀಳಾಗಿ ನೋಡೋದು ನಿಜಕ್ಕೂ ಹಾಸ್ಯಾಸ್ಪದ.