ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯ : ತಾಜಾ ಗಾಳಿಗಾಗಿ ಆಕ್ಸಿಜನ್ ಬಾರ್ ಗಳ ಮೊರೆ ಹೋಗುತ್ತಿರುವ ನಾಗರಿಕರು

ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯ : ತಾಜಾ ಗಾಳಿಗಾಗಿ ಆಕ್ಸಿಜನ್ ಬಾರ್ ಗಳ ಮೊರೆ ಹೋಗುತ್ತಿರುವ ನಾಗರಿಕರು

ದೆಹಲಿಯಲ್ಲಿ ಮಾಲಿನ್ಯವು ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ಶಾಲೆ-ಕಾಲೇಜುಗಳನ್ನು ಮುಚ್ಚಲಾಗಿದೆ. ಕಳೆದ ವಾರದಿಂದ ಶುದ್ಧ ಗಾಳಿಗಾಗಿ ಪರದಾಡುತ್ತಿರುವ ದೆಹಲಿ ನಿವಾಸಿಗಳು ಆಕ್ಸಿ ಪ್ಯೂರ್ ಆಕ್ಸಿಜನ್ ಬಾರ್ ಗಳತ್ತ ತೆರಳುತ್ತಿದ್ದಾರೆ. ಆಕ್ಸಿಜನ್ ಬಾರ್ ಗಳಲ್ಲಿ ಶುದ್ಧೀಕರಿಸಿದ ಆಮ್ಲಜನಕವನ್ನು ನೀಡಲಾಗುತ್ತದೆ.

26 ವರ್ಷದ ಉದ್ಯಮಿ ಆರ್ಯವೀರ್ ಕುಮಾರ್ ಅವರು ಮೇ ತಿಂಗಳಲ್ಲಿ ದಕ್ಷಿಣ ದೆಹಲಿಯ ದುಬಾರಿ ಸೆಲೆಕ್ಟ್ ಸಿಟಿ ವಾಕ್ ಮಾಲ್ ನಲ್ಲಿ  ಆಕ್ಸಿಜನ್ ಬಾರನ್ನು ಸ್ಥಾಪಿಸಿದ್ದಾರೆ. ಈ ಬಾರ್ ನಲ್ಲಿ 15 ನಿಮಿಷ ಶುದ್ಧೀಕರಿಸಿದ ಆಮ್ಲಜನಕಕ್ಕೆ 299 ರೂ.ಗಳಿಂದ ಪ್ರಾರಂಭಿಸಿ 499 ರೂ.ವರೆಗೆ ಇದೆ. ಆಕ್ಸಿ-99, ಅಲ್ಟ್ರಾ ಪೋರ್ಟಬಲ್ ಆಕ್ಸಿಜನ್ ಒಂದು ಬಾಟಲಿಗೆ 650 ರೂ. ನಿಗದಿ ಪಡಿಸಲಾಗಿದೆ.

ಆಕ್ಸಿಜನ್ ಬಾರ್ ಪ್ರಾರಂಭಿಸಿದ ಮೊದಲ ತಿಂಗಳಲ್ಲಿ ವ್ಯವಹಾರ ನಿಧಾನವಾಗಿತ್ತು ಆದರೆ ನಾವು ಈಗ ಲಾಭಗಳಿಸುತ್ತಿದ್ದೇವೆ ಎಂದು ಕುಮಾರ್ ಹೇಳಿದರು. ಎರಡು ವಾರಗಳಲ್ಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3 ನಲ್ಲಿ ಆಕ್ಸಿ ಪ್ಯೂರ್ ನ ಒಂದು ಶಾಖೆಯನ್ನು ತೆರೆಯಲಿದ್ದಾರೆ. ಬಾರ್ ನ ಖಾತೆಗಳನ್ನು ಹೆಚ್ಚು ತೆರೆಯುವಂತೆ ಕರೆಗಳು ಬರುತ್ತಿವೆ ಎಂದು ಕುಮಾರ್ ತಿಳಿಸಿದ್ದಾರೆ.

ಆಕ್ಸಿ ಪ್ಯೂರ್ ಆಕ್ಸಿಜನ್ ಬಾರ್ ಕಾರ್ಯ

ಆಕ್ಸಿ ಪ್ಯೂರ್ ನಲ್ಲಿರುವ ಗ್ರಾಹಕರು ತಮ್ಮ ಮೂಗಿನ ರಂಧ್ರಗಳ ಕೆಳಗೆ ಒಂದು ಟ್ಯೂಬ್ ಅನ್ನು (ಕ್ಯಾನುಲಾ ಎಂದು ಕರೆಯುತ್ತಾರೆ) ತಮ್ಮ ಆಯ್ಕೆಯ ಸುಗಂಧದೊಂದಿಗೆ ಆಮ್ಲಜನಕಯುಕ್ತ ಗಾಳಿಯನ್ನು ನೀಡುತ್ತಾರೆ. ಪುದೀನಾ, ಕಿತ್ತಳೆ, ದಾಲ್ಚಿನ್ನಿ, ನೀಲಗಿರಿ, ಲ್ಯಾವೆಂಡರ್, ಸ್ಪಿಯರ್ಮಿಂಟ್ ಅಥವಾ ಲೆಮೊನ್ಗ್ರಾಸ್ ಪರಿಮಳಗಳು ದೊರೆಯುತ್ತವೆ. ಗ್ರಾಹಕರು ಉಸಿರಾಡುವ ಗಾಳಿಯು ಆಮ್ಲಜನಕವನ್ನು ಕೇಂದ್ರೀಕರಿಸುವ ಯಂತ್ರದಿಂದ ಉತ್ಪತ್ತಿಯಾಗುತ್ತದೆ, ಅದು ಅದರ ಸುತ್ತಲಿನ ಗಾಳಿಯನ್ನು ಶುದ್ಧೀಕರಿಸಿ ಮತ್ತು ಅದನ್ನು ಗ್ರಾಹಕರಿಗೆ ತಲುಪಿಸುತ್ತದೆ.

ಸಾಮಾನ್ಯ ಸಂದರ್ಭಗಳಲ್ಲಿ, ಮಾನವರು ಉಸಿರಾಡುವ ಗಾಳಿಯು ಕೇವಲ ಶೇ.20 ಆಮ್ಲಜನಕವನ್ನು ಹೊಂದಿರುತ್ತದೆ. ಹೆಚ್ಚಿನ ಮಟ್ಟದ ಆಮ್ಲಜನಕವು ನಿಜವಾಗಿಯೂ ಹಾನಿಕಾರಕವಾಗಬಹುದು, ಇದು ಶ್ವಾಸಕೋಶದ ಹಾನಿ ಮತ್ತು ಸಾವಿಗೆ ಕಾರಣವಾಗಬಹುದು. ಗ್ರಾಹಕರಿಗೆ ಅಪಾಯವನ್ನು ಕಡಿಮೆ ಮಾಡಲು ಸೆಷನ್ ಗಳನ್ನು ಕೇವಲ 15 ನಿಮಿಷಗಳಿಗೆ ಸೀಮಿತಗೊಳಿಸಲಾಗಿದೆ. ಈ ಚಿಕಿತ್ಸೆಯು ಯಾವುದೇ ರೋಗಗಳನ್ನು ಗುಣಪಡಿಸುವುದಿಲ್ಲ.

ಅದು ಹೇಗೆ ಭಾಸವಾಗುತ್ತದೆ?

ಅವರಲ್ಲಿ 29 ವರ್ಷದ ಉದ್ಯಮಿ ಅಮನ್ ಬಾತ್ರಾ ಅವರು ಮೊದಲ ಬಾರಿಗೆ ಆಕ್ಸಿ ಪ್ಯೂರ್ ಗೆ ಭೇಟಿ ನೀಡಿದರು. 15 ನಿಮಿಷಗಳ ನಂತರ ಅವರು ತೃಪ್ತರಾಗಿದ್ದಾರೆ. "ನನ್ನ ಮೂಗಿನಲ್ಲಿ ಉತ್ತಮ ಸುಗಂಧ ವಾಸನೆ ಇದೆ. ಇದು ನನ್ನ ದೇಹವು ಹಗುರವಾಗಿರಿಸಿದೆ ಎಂದು ಬಾತ್ರಾ ಹೇಳಿದರು.

ಮಾಲಿನ್ಯದ ಮಟ್ಟವು ಗಗನಕ್ಕೇರುತ್ತಿರುವುದರಿಂದ ಭಾರತದಲ್ಲಿ ಶುದ್ಧ ಗಾಳಿಯನ್ನು ಉತ್ಪಾದಿಸುವ ವ್ಯವಹಾರವು ಹೆಚ್ಚುತ್ತಿದೆ. ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ ನಡೆಸಿದ ಅಧ್ಯಯನದ ಪ್ರಕಾರ, 2023 ರ ವೇಳೆಗೆ ಭಾರತದ ವಸತಿ ವಲಯದಲ್ಲಿನ ವಾಯು ಶುದ್ಧೀಕರಣ ಮಾರುಕಟ್ಟೆಯ ಮೌಲ್ಯ ಸುಮಾರು 39 ದಶಲಕ್ಷ ಡಾಲರ್  ಆಗಲಿದೆ ಎಂದು ತಿಳಿಸಿದೆ.

ಕುಮಾರ್ ಆಕ್ಸಿ ಪ್ಯೂರ್ ನಂತಹಹ ಆಕ್ಸಿಜನ್ ಬಾರ್ಗಳು ಫ್ರಾನ್ಸ್ ಮತ್ತು ಜಪಾನ್ ನಂತಹ ದೇಶಗಳಲ್ಲಿ ಸಾಮಾನ್ಯ. ವಾಸ್ತವವಾಗಿ, ಟೋಕಿಯೊದಲ್ಲಿ ನಾಯಿಗಳಿಗಾಗಿ ಆಕ್ಸಿಜನ್  ಬಾರ್ ಇದೆ. ಆದರೆ ದೆಹಲಿಯಂತೆ, ಈ ದೇಶಗಳು ಅಪಾಯಕಾರಿ ಮಾಲಿನ್ಯ ಮಟ್ಟವನ್ನು ಹೊಂದಿಲ್ಲ.