ಭಾರತದಲ್ಲಿ ನಾಲ್ಕು ವರ್ಷದೊಳಗಿನ ಶೇ. 38 ಮಕ್ಕಳಲ್ಲಿ ಕುಂಠಿತ ಬೆಳವಣಿಗೆ

"ಆಹಾರ ವೈವಿಧ್ಯತೆಯ ಕೊರತೆಯು ಗಂಭೀರ ಬೆದರಿಕೆಯಾಗಿದ್ದು, ಕ್ರಮೇಣ ನಮ್ಮನ್ನು ಗುಪ್ತ ಹಸಿವಿನತ್ತ ತಳ್ಳುತ್ತದೆ" ಎಂದು ಖಂಡೇಲ್ವಾಲ್ ಹೇಳಿದ್ದಾರೆ. "ನಮ್ಮ ಆಹಾರದಲ್ಲಿ ಹಲವಾರು ಸೂಕ್ಷ್ಮ ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳು ಕಣ್ಮರೆಯಾಗಿವೆ ಏಕೆಂದರೆ ನಮ್ಮ ದೈನಂದಿನ ಊಟದಲ್ಲಿ ನಾವು ವೈವಿಧ್ಯತೆಯನ್ನು ಗಣನೀಯವಾಗಿ ಕಡಿತಗೊಳಿಸಿದ್ದೇವೆ.

ಭಾರತದಲ್ಲಿ ನಾಲ್ಕು ವರ್ಷದೊಳಗಿನ ಶೇ. 38 ಮಕ್ಕಳಲ್ಲಿ ಕುಂಠಿತ ಬೆಳವಣಿಗೆ

ಅಕ್ಟೋಬರ್ 15 ರಂದು ಯುನಿಸೆಫ್ ಬಿಡುಗಡೆ ಮಾಡಿದ ಸ್ಟೇಟ್ ಆಫ್ ದಿ ವರ್ಲ್ಡ್ ಚಿಲ್ಡ್ರನ್(ಎಸ್.ಒ.ಡಬ್ಲ್ಯು.ಸಿ) ವರದಿಯು ಭಾರತದಲ್ಲಿ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇಕಡಾ 38 ರಷ್ಟು ಮಕ್ಕಳು ಕುಂಠಿತ ಬೆಳವಣಿಗೆಯನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದೆ. ಇದರಲ್ಲಿ ಭಾರತದ ಶ್ರೀಮಂತ ಕುಟುಂಬಗಳಿಗೆ ಸೇರಿದ ಐದನೇ ಒಂದು ಭಾಗದಷ್ಟು ಮಕ್ಕಳು ತಮ್ಮ ವಯಸ್ಸಿಗೆ ತಕ್ಕಷ್ಟು  ಬೆಳವಣಿಗೆಯನ್ನು ಕಾಣುತ್ತಿಲ್ಲ. ಇನ್ನು ಬಡಕುಟುಂಬಗಳ ಮಕ್ಕಳ ಬೆಳವಣಿಗೆಯಲ್ಲಂತೂ ಅರ್ಧಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕುಂಠಿತವಾಗುತ್ತಿದೆ.

ಮಕ್ಕಳ ಬೆಳವಣಿಗೆಯಲ್ಲಿನ ಕುಂಠಿತಕ್ಕೆ ಅಪೌಷ್ಟಿಕತೆಯೇ ಕಾರಣವಾಗಿದ್ದು, ಭಾರತದಲ್ಲಿ ಶ್ರೀಮಂತ ಮನೆಗಳ ಮಕ್ಕಳುತಿನ್ನುವ ವಿಧಾನ ತಪ್ಪಾಗಿದ್ದರೆ, ಬಡ ಕುಟುಂಬದ ಮಕ್ಕಳಿಗೆ ಪೌಷ್ಟಿಕತೆಯ ಆಹಾರದ ಸಮಸ್ಯೆ ಕಾಡುತ್ತದೆ. ಆರ್ಥಿಕವಾಗಿ ಸದೃಡವಾಗಿರುವ ವರ್ಗಗಳಲ್ಲಿ ಕೂಡ ಆರೋಗ್ಯಕರ ಆಹಾರ ಪದ್ದತಿಗಳ ಬಗೆಗಿನ ಜಾಗೃತಿ ಭಾರತದಲ್ಲಿ ಕಡಿಮೆ ಎಂದು ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಹೆಚ್ಚುವರಿ ಪ್ರಾಧ್ಯಾಪಕ ಮತ್ತು ಪೌಷ್ಠಿಕಾಂಶ ಸಂಶೋಧನೆಯ ಮುಖ್ಯಸ್ಥೆ ಶ್ವೇತಾ ಖಂಡೇಲ್ವಾಲ್ ಹೇಳಿದ್ದಾರೆ.

ಜೀವನದ ಮೊದಲ 1,000 ದಿನಗಳಲ್ಲಿನ ಆಹಾರ ಸೇವನೆ ಅಸಮರ್ಪಕವಾಗಿದೆ

ಆರಂಭಿಕ ಜೀವನದಲ್ಲಿ ಕಳಪೆ ಪೌಷ್ಠಿಕಾಂಶವು ಕುಂಠಿತ ಮತ್ತು ಐಕ್ಯೂ ನಷ್ಟಕ್ಕೆ ಕಾರಣವಾಗುತ್ತದೆ. ಇದು ಆರ್ಥಿಕತೆಯ ಮೇಲೆ ತನ್ನ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಮುಂಬೈ ಮೂಲದ ಶಿಶುವೈದ್ಯ ರುಪಾಲ್ ದಲಾಲ್ ಹೇಳಿದ್ದರೆ, ತಮ್ಮ ಜೀವನದ ಮೊದಲ 1,000 ದಿನಗಳಲ್ಲಿ ಅಸಮರ್ಪಕ ಆಹಾರವನ್ನು ಪಡೆದವರಲ್ಲಿ ಕುಂಠಿತ ದೇಹದ ಮತ್ತು ಮಿದುಳಿನ ಬೆಳವಣಿಗೆ ಸಾಮಾನ್ಯವಾಗಿದೆ ಎಂದು ಖಂಡೇಲ್ವಾಲ್ ಹೇಳಿದ್ದಾರೆ.

ಬಾಲ್ಯದ ಅಪೌಷ್ಟಿಕತೆಯು ವಯಸ್ಕರ ಜೀವನದಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದ್ರೋಗದಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ಬೆಳೆಸುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದಲ್ಲದೆ ಕುಂಠಿತ ಬೆಳವಣಿಗೆಯ ತಾಯಂದಿರು ಗರ್ಭಾವಸ್ಥೆಯಲ್ಲಿ ತೊಂದರೆಗಳನ್ನು ಎದುರಿಸುತ್ತಾರೆ ಮತ್ತು ಇದು ಅವರ ಮಕ್ಕಳ ಮೇಲೂ ಪರಿಣಾಮ ಬೀರುತ್ತದೆ.

ಬಡ ಮಕ್ಕಳಿಗೆ ಸಾಕಷ್ಟು ಪ್ರೋಟೀನ್ ಸಿಗುವುದಿಲ್ಲ: ಅಧ್ಯಯನ

ಸಮಗ್ರ ರಾಷ್ಟ್ರೀಯ ಪೌಷ್ಟಿಕಾಂಶ ಸಮೀಕ್ಷೆ (ಸಿಎನ್‌ಎನ್‌ಎಸ್) ಪ್ರಕಾರ, ಪ್ರೋಟೀನ್ ಭರಿತ ಆಹಾರಗಳಾದ ಹಾಲಿನ ಉತ್ಪನ್ನಗಳು ಮತ್ತು ಮೊಟ್ಟೆಗಳ ಸೇವನೆಯಲ್ಲಿ ಆದಾಯವು ಮುಖ್ಯ ಪಾತ್ರವಹಿಸುತ್ತದೆ ಎಂದು ಹೇಳಿದೆ. 2-4 ವರ್ಷ ವಯಸ್ಸಿನ ಶ್ರೀಮಂತ ಕುಟುಂಬಗಳ 82.7% ಮಕ್ಕಳು ಡೈರಿ ಉತ್ಪನ್ನಗಳನ್ನು ಸೇವಿಸಿದರೆ, ಆ ಸಂಖ್ಯೆಯ ಅರ್ಧದಷ್ಟು (41.3%) ಬಡ ಕುಟುಂಬಗಳು. ಅಂತೆಯೇ, ಬಡ ಕುಟುಂಬಗಳ 8.2% ಮಕ್ಕಳು ಮೊಟ್ಟೆಗಳನ್ನು ತಿನ್ನುತ್ತಿದ್ದರೆ, ಶ್ರೀಮಂತ ಮನೆಗಳ 20% ಮಕ್ಕಳು ಮೊಟ್ಟೆಗಳನ್ನು ಸೇವಿಸುತ್ತಾರೆ.

ಒಟ್ಟಾರೆಯಾಗಿ, 2-4 ವರ್ಷ ವಯಸ್ಸಿನ ಕೆಲವು ಮಕ್ಕಳು ಪ್ರೋಟೀನ್ ಭರಿತ ಆಹಾರವನ್ನು ಸೇವಿಸಿದ್ದಾರೆ ಎಂದು ಸಿಎನ್‌ಎನ್‌ಎಸ್ ಅಧ್ಯಯನ ಹೇಳಿದೆ: 62% ಮಕ್ಕಳು ಡೈರಿ ಉತ್ಪನ್ನಗಳನ್ನು ಸೇವಿಸಿದೆ, 15.6% ಮಕ್ಕಳು ಮೊಟ್ಟೆಗಳನ್ನು ಸೇವಿಸುತ್ತಾರೆ ಮತ್ತು 31.6% ಮಕ್ಕಳು ದ್ವಿದಳ ಧಾನ್ಯಗಳು ಮತ್ತು ಬೀಜಗಳನ್ನು ಸೇವಿಸಿದ್ದಾರೆ. ಕೆಲವು ಮಕ್ಕಳು ಮನೆಯ ಆರ್ಥಿಕ ಸ್ಥಿತಿಗಳ ಹೊರತಾಗಿಯೂ ಅಗತ್ಯ ಪ್ರಮಾಣದ ಪ್ರೋಟೀನ್‌ಗಳನ್ನು ಪಡೆಯುತ್ತಾರೆ ಎಂದು ಈ ವರದಿಯು ಸೂಚಿಸುತ್ತದೆ. ಎರಡು ವರ್ಷದೊಳಗಿನ ಮಕ್ಕಳು, ಹಾಲುಣಿಸುವ ಅಥವಾ ಇಲ್ಲದಿದ್ದರೂ ಸಹ, ಮನೆಯ ಆದಾಯವನ್ನು ಲೆಕ್ಕಿಸದೆ ಅಗತ್ಯವಾದ ಪೋಷಣೆಯನ್ನು ಪಡೆಯುವುದಿಲ್ಲ. ಈ ವಯಸ್ಸಿನ 6.4% ಮಕ್ಕಳು ಮಾತ್ರ ಅಗತ್ಯ ಪೋಷಕಾಂಶಗಳನ್ನು ಸೇವಿಸುತ್ತಾರೆ ಎಂದು ಸಿಎನ್‌ಎನ್‌ಎಸ್ ಅಧ್ಯಯನದಲ್ಲಿ ಕಂಡುಬಂದಿದೆ. ಭಾರತದ ಪೂರ್ವ ಮತ್ತು ಮಧ್ಯ ಭಾಗಗಳಲ್ಲಿನ ಬಡ ರಾಜ್ಯಗಳ ಮಕ್ಕಳಲ್ಲಿ ಪ್ರೋಟೀನ್‌ಗಳ ಕೊರತೆ ಭಾರಿ ಪ್ರಮಾಣದಲ್ಲಿದೆ ಎಂದು ಈ ಅಧ್ಯಯನವು ಕಂಡುಹಿಡಿದಿದೆ.

ಕಾರ್ಬೋಹೈಡ್ರೇಟ್ಗಳು ಮತ್ತು ಪೌಷ್ಟಿಕಾಂಶಗಳ ಅಸಮರ್ಪಕ ಪ್ರಮಾಣ ಮತ್ತು ಗುಣಮಟ್ಟವನ್ನು ಹೊಂದಿರದಂತಹ ಕಳಪೆ ಆಹಾರವು ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮವನ್ನು ಬೀರುತ್ತದೆ. "ಮೆದುಳಿನ ಬೆಳವಣಿಗೆಯ ನಿರ್ಣಾಯಕ ಅವಧಿಯಾದ ಮೊದಲ 1,000 ದಿನಗಳಲ್ಲಿ ಪ್ರಮುಖ ಪೋಷಕಾಂಶಗಳನ್ನು ಒದಗಿಸಲು ವಿಫಲವಾದರೆ ಮೆದುಳಿನ ಕಾರ್ಯಚಟುವಟಿಕೆಯಲ್ಲಿ ಜೀವನ ಪರ್ಯಂತ ಬದಲಾಯಿಸಲಾಗದ ಕೊರತೆ ಉಂಟಾಗುತ್ತದೆ.

ಬೆಳೆಯುತ್ತಿರುವ ಮಕ್ಕಳಿಗೆ ಪೋಷಕಾಂಶ-ದಟ್ಟವಾದ ಆಹಾರಗಳು ಬೇಕಾಗುತ್ತವೆ, ವಿಶೇಷವಾಗಿ ಮೊಟ್ಟೆ, ಹಾಲು, ಬೀನ್ಸ್, ಬೀಜಗಳು, ಮೀನು ಮತ್ತು ಮಾಂಸ ಮತ್ತು ಉತ್ತಮ ಕೊಬ್ಬಿನಿಂದ ಪ್ರೋಟೀನ್ಗಳು ಬೇಕಾಗುತ್ತವೆ ಎಂದು ಮಕ್ಕಳ ವೈದ್ಯ ದಲಾಲ್ ಹೇಳಿದ್ದಾರೆ. "ಖಾಲಿ ಕ್ಯಾಲೊರಿಗಳಿಂದ ಬದಲಾಯಿಸಲ್ಪಟ್ಟ ಪ್ರೋಟೀನ್, ಉತ್ತಮ ಕೊಬ್ಬುಗಳು ಮತ್ತು ಸೂಕ್ಷ್ಮ ಪೋಷಕಾಂಶ-ದಟ್ಟವಾದ ಆಹಾರದ ಕೊರತೆಯು ಬೆಳವಣಿಗೆಯ ವೈಫಲ್ಯ, ಆಗಾಗ್ಗೆ ಸೋಂಕುಗಳು, ಶಾಲೆಯಲ್ಲಿ ಏಕಾಗ್ರತೆಯ ಕೊರತೆ, ದಣಿವು ಮತ್ತು ಮುಂತಾದವುಗಳಿಗೆ ಕಾರಣವಾಗುತ್ತದೆ" ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಅಕ್ಕಿ ಮತ್ತು ಗೋಧಿ ಪ್ರಾಬಲ್ಯ

ಎಸ್.ಒ.ಡಬ್ಲ್ಯು.ಸಿ ವರದಿಯ ಪ್ರಕಾರ, ಸಮೀಕ್ಷೆ ನಡೆಸಿದ 6-23 ತಿಂಗಳ ವಯಸ್ಸಿನ ಸುಮಾರು 55% ಮಕ್ಕಳು ಯಾವುದೇ ಹಣ್ಣು ಅಥವಾ ತರಕಾರಿಗಳನ್ನು ಸೇವಿಸಿಲ್ಲ. ಆದರೆ ಸಿಎನ್‌ಎನ್‌ಎಸ್ ಪ್ರಕಾರ, ಬಹುತೇಕ ಎಲ್ಲ ಮಕ್ಕಳು, ವಯೋಮಾನದವರಲ್ಲಿ, ಸಿರಿಧಾನ್ಯಗಳು ಮತ್ತು ಆಲೂಗಡ್ಡೆಯಂತಹ (ಪಿಷ್ಟ-ಸಮೃದ್ಧ) ಗೆಡ್ಡೆಗಳನ್ನು ಸೇವಿಸುತ್ತಾರೆ.

ಸಾಂಪ್ರದಾಯಿಕವಾಗಿ, ಭಾರತೀಯ ಆಹಾರಕ್ರಮದಲ್ಲಿ ರಾಗಿ ಮತ್ತು ದ್ವಿದಳ ಧಾನ್ಯಗಳಂತಹ ಪೋಷಕಾಂಶಗಳುಳ್ಳ ಆಹಾರಗಳು ಸಮೃದ್ಧವಾಗಿದ್ದವು. ಆದಾಗ್ಯೂ, ಆಹಾರ ಭದ್ರತೆಯನ್ನು ಖಾತರಿಪಡಿಸುವ ಪ್ರಯತ್ನದಲ್ಲಿ, ಭಾರತ ಸರ್ಕಾರವು ಹಣ್ಣುಗಳು, ತರಕಾರಿಗಳು ಮತ್ತು ಜಾನುವಾರು ಉತ್ಪನ್ನಗಳ ಬದಲಿಗೆ ಅಕ್ಕಿ ಮತ್ತು ಗೋಧಿಗೆ ಒಲವು ತೋರುವಂತಹ ನೀತಿಗಳನ್ನು ಜಾರಿಗೆ ತಂದಿದೆ ಎಂದು ಟ್ರಾನ್ಸ್‌ಫಾರ್ಮಿಂಗ್ ಫುಡ್ ಸಿಸ್ಟಮ್ಸ್ ಫಾರ್ ರೈಸಿಂಗ್ ಇಂಡಿಯಾ, ಕಾರ್ನೆಲ್ ವಿಶ್ವವಿದ್ಯಾಲಯದ ಸಂಶೋಧಕ ಪ್ರಭು ಪಿಂಗಲಿ ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದರು.

ಇದರ ಪರಿಣಾಮವೆಂದರೆ ಅನೇಕ ಕುಟುಂಬಗಳಿಗೆ ಹಣ್ಣುಗಳು ಮತ್ತು ತರಕಾರಿಗಳು ತುಂಬಾ ದುಬಾರಿಯಾಗಿದೆ. ಸಿಎನ್‌ಎನ್‌ಎಸ್ ಅಧ್ಯಾಯನದ ಪ್ರಕಾರ, 2-4 ವರ್ಷ ವಯಸ್ಸಿನ ಬಡ ಮಕ್ಕಳಲ್ಲಿ ಕೇವಲ 25.4% ರಷ್ಟು ಮಕ್ಕಳು ಹಣ್ಣುಗಳು ಮತ್ತು 54% ರಷ್ಟು ಮಕ್ಕಳು ತರಕಾರಿಗಳನ್ನು ಸೇವಿಸಿದ್ದಾರೆ.

"ಆಹಾರ ವೈವಿಧ್ಯತೆಯ ಕೊರತೆಯು ಗಂಭೀರ ಬೆದರಿಕೆಯಾಗಿದ್ದು, ಕ್ರಮೇಣ ನಮ್ಮನ್ನು ಗುಪ್ತ ಹಸಿವಿನತ್ತ ತಳ್ಳುತ್ತದೆ" ಎಂದು ಖಂಡೇಲ್ವಾಲ್ ಹೇಳಿದ್ದಾರೆ. "ನಮ್ಮ ಆಹಾರದಲ್ಲಿ ಹಲವಾರು ಸೂಕ್ಷ್ಮ ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳು ಕಣ್ಮರೆಯಾಗಿವೆ ಏಕೆಂದರೆ ನಮ್ಮ ದೈನಂದಿನ ಊಟದಲ್ಲಿ ನಾವು ವೈವಿಧ್ಯತೆಯನ್ನು ಗಣನೀಯವಾಗಿ ಕಡಿತಗೊಳಿಸಿದ್ದೇವೆ. ಹೆಚ್ಚಿನ ಮನೆಗಳು ಸಮಯ ಮತ್ತು ಸಂಪನ್ಮೂಲ (ಹಣ, ಶಿಕ್ಷಣ, ಪ್ರವೇಶ, ಲಭ್ಯತೆ) ಕೊರತೆಯಿಂದಾಗಿ, ಸಾಂಪ್ರದಾಯಿಕ ಸ್ಥಳೀಯ ಪಾಕವಿಧಾನಗಳ ಕಾರಣಕ್ಕಾಗಿ, ತರಕಾರಿಗಳು ಮತ್ತು ಹಣ್ಣುಗಳಿಂದ ತ್ವರಿತವಾಗಿ ಸಂಪರ್ಕವನ್ನು ಕಡಿತಗೊಳಿಸುತ್ತಿವೆ. ಸಾರ್ವಜನಿಕ ಆರೋಗ್ಯ ನೀತಿಯಾಗಿ ಸೂಕ್ಷ್ಮ ಮತ್ತು ಮ್ಯಾಕ್ರೋನ್ಯೂಟ್ರಿಯಂಟ್‌ಗಳೊಂದಿಗೆ ಸಮತೋಲಿತ ಆರೋಗ್ಯಕರ ಆಹಾರವನ್ನು ಒತ್ತಿಹೇಳುವುದು ಬಹಳ ಮುಖ್ಯ ಎಂದು ಅವರು ಹೇಳಿದ್ದಾರೆ.

ಕೆಲವೇ ಕೆಲವು ಕಾರ್ಯಕ್ರಮಗಳಿಂದ ಪೌಷ್ಠಿಕಾಂಶಕೊರತೆಯನ್ನು ಸುಧಾರಿಸಲು ಸಾಧ್ಯವಿಲ್ಲ ಮತ್ತು ಅನೇಕ ರೀತಿಯ ಅಪೌಷ್ಟಿಕತೆಯನ್ನು ನಿಭಾಯಿಸುವ ಭಾರತದ ಪ್ರಯತ್ನಗಳು ದುರ್ಬಲಗೊಳ್ಳುತ್ತವೆ ಎಂದು ಖಂಡೇಲ್ವಾಲ್ ಹೇಳಿದ್ದಾರೆ. "ಆರೋಗ್ಯದ ಕೊರತೆ, ಕಳಪೆ ಪರಿಸರ ಅಂಶಗಳು, ಕೌಟುಂಬಿಕ ಹಿಂಸಾಚಾರಕ್ಕೆ ಒಡ್ಡಿಕೊಳ್ಳುವುದು, ಹಾಗೂ ಮೊದಲ 1,000 ದಿನಗಳಲ್ಲಿ ಹೊಗೆ ಅಥವಾ ಮದ್ಯಸಾರವು ಮಕ್ಕಳ ಬೆಳವಣಿಗೆಯನ್ನು ಕುಂಠಿತಗೊಳಿಸುವಿಕೆಯ ಮೇಲೆ ಪರಿಣಾಮ ಬೀರುತ್ತದೆ" ಎಂದು ವೈದ್ಯರು ಹೇಳುತ್ತಾರೆ.

ಇನ್ನಾದರೂ ಸರ್ಕಾರವು ಅಗತ್ಯವಿದ್ದಲ್ಲಿಗೆ ರೋಗನಿರ್ಣಯ ಮತ್ತು ತೃತೀಯ ಆರೈಕೆಯನ್ನು ಸುಧಾರಿಸುವ ಯೋಜನೆ, ತರಬೇತಿ ಪಡೆದ ಸಿಬ್ಬಂದಿಯನ್ನು ಒದಗಿಸುವುದು ಮತ್ತು ಅಪೌಷ್ಟಿಕತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೆಚ್ಚಿಸುವುದು ಅಗತ್ಯವಾಗಿದೆ.